ಪ್ರತಿಯೊಬ್ಬರ ಮೊಬೈಲ್‌ನಲ್ಲೂ ಇರಲೇಬೇಕಾದ Apps; ಇವು ಇದ್ರೆ ಸರ್ಕಾರಿ ಕೆಲಸಗಳು ಅರ್ಧ ಮುಗಿದಂತೆ!
ಪ್ರತಿಯೊಬ್ಬರ ಮೊಬೈಲ್‌ನಲ್ಲೂ ಇಂದು ಹಲವಾರು ಆ್ಯಪ್‌ಗಳಿವೆ; ಆದ್ರೆ, ಕೆಲ ಬಹಳ ಮುಖ್ಯವಾಗಿರುವ ಆ್ಯಪ್‌ಗಳೆ ಇರುವುದಿಲ್ಲ! ಹಾಗಾಗಿ, ಪ್ರತಿಯೊಬ್ಬರ ಮೊಬೈಲ್‌ನಲ್ಲಿ ಇರಲೇ ಬೇಕಾದ ಪ್ರಮುಖ ಆ್ಯಪ್‌ಗಳ ಕುರಿತ ಮಾಹಿತಿ ಇಲ್ಲಿದೆ.

ಪ್ರತಿಯೊಬ್ಬರ ಮೊಬೈಲ್‌ನಲ್ಲೂ ಇಂದು ಹಲವಾರು ಆ್ಯಪ್‌ಗಳಿವೆ; ಚಾಟ್ ಮಾಡಲು ವಾಟ್ಸ್‌ಆಪ್ ಹಾಗೂ ಟೆಲಿಗ್ರಾಮ್, ಸೋಶಿಯಲ್ ಮಿಡಿಯಾಗಾಗಿ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಸ್ನ್ಯಾಪ್‌ಚಾಟ್ ಅದ್ರೊಂದಿಗೆ ಶಾಪಿಂಗ್ ಹಾಗೂ ಪೇಮೆಂಟ್ಸ್ ಮಾಡಲು ಒಂದಕ್ಕಿಂತಲೂ ಹಲವು ಆಪ್ಸ್ ಇರುತ್ತದೆ. ಆದ್ರೆ, ಬಹಳ ಮುಖ್ಯವಾಗಿರುವ ಆ್ಯಪ್‌ಗಳೆ ಇರುವುದಿಲ್ಲ! ಹಾಗಾಗಿ, ಪ್ರತಿಯೊಬ್ಬರ ಮೊಬೈಲ್‌ನಲ್ಲಿ ಇರಲೇ ಬೇಕಾದ ಪ್ರಮುಖ ಆ್ಯಪ್‌ಗಳ ಕುರಿತ ಮಾಹಿತಿ ಇಲ್ಲಿದೆ.
1. ಡಿಜಿಲಾಕರ್ (DigiLocker):

ಇದು ನಿಮ್ಮ ಡಿಜಿಟಲ್ ವ್ಯಾಲೆಟ್ ಆಗಿದೆ. ನಿಮ್ಮ DL, RC ಹಾಗೂ ಶಾಲಾ-ಕಾಲೇಜುಗಳ ಮ್ಯಾಕ್ಸ್ ಕಾರ್ಡ್ಗಳು ಸೇರಿದಂತೆ ಹಲವಾರು ದಾಖಲೆಗಳನ್ನು ಸುರಕ್ಷಿತವಾಗಿ ಸಂಗ್ರಹಿಸಬಹುದು. ಇನ್ನು ಈ ಡಿಜಿಟಲ್ ದಾಖಲೆಗಳು ಕಾನೂನುಬದ್ಧವಾಗಿ ಮಾನ್ಯತೆ ಪಡೆದಿವೆ.
2. ಎಮ್-ಆಧಾರ್ (mAadhaar):

ನಿಮ್ಮ ಮೂಲ ಆಧಾರ್ ಕಾರ್ಡ್ ಅನ್ನು ಸದಾ ಜತೆಯಲ್ಲಿ ಕೊಂಡೊಯ್ಯುವ ಅಗತ್ಯವಿಲ್ಲ. ಈ ಆ್ಯಪ್ ಮೂಲಕ ಆಧಾರ್ ಡೌನ್‌ಲೋಡ್ ಮಾಡಬಹುದು, ವಿವರಗಳನ್ನು ನವೀಕರಿಸಬಹುದು ಮತ್ತು ಬಯೋಮೆಟ್ರಿಕ್ ಲಾಕ್ ಮಾಡಬಹುದು.
3. ಉಮಾಂಗ್ (UMANG):

ಇದು ಸರ್ಕಾರದ ವಿವಿಧ ಸೇವೆಗಳ ಹೆಬ್ಬಾಗಿಲು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸುಮಾರು 1,200ಕ್ಕೂ ಹೆಚ್ಚು ಸೇವೆಗಳು, EPFO ಬ್ಯಾಲೆನ್ಸ್ ಪರಿಶೀಲನೆ ಮತ್ತು ಗ್ಯಾಸ್ ಸಿಲಿಂಡರ್ ಬುಕಿಂಗ್ ಅನ್ನು ಒಂದೇ ಆ್ಯಪ್‌ನಲ್ಲಿ ಮಾಡಬಹುದಾಗಿದೆ.
4. ಆಭಾ ಆ್ಯಪ್ (ABHA App):

ಆಯುಷ್ಮಾನ್ ಭಾರತ್ ಡಿಜಿಟಲ್ ಹೆಲ್ತ್ ಅಕೌಂಟ್ ಮೂಲಕ ನಿಮ್ಮ ವೈದ್ಯಕೀಯ ವರದಿಗಳು, ಪ್ರಿಸ್ಕ್ರಿಪ್ಷನ್‌ಗಳು ಮತ್ತು ಆರೋಗ್ಯ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ನಿರ್ವಹಿಸಬಹುದು.
5. ಮೈಗೌ (MyGov):

ಸರ್ಕಾರದ ನೀತಿಗಳು ಮತ್ತು ಯೋಜನೆಗಳ ಬಗ್ಗೆ ನಾಗರಿಕರು ತಮ್ಮ ಅಭಿಪ್ರಾಯ, ಸಲಹೆಗಳನ್ನು ಹಂಚಿಕೊಳ್ಳಲು ಮತ್ತು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಲು ಸಾಧ್ಯವಾಗುತ್ತದೆ.
6. ಭೀಮ್ (BHIM):

UPI ಆಧಾರಿತ ಸುರಕ್ಷಿತ ಹಣದ ವಹಿವಾಟು ನಡೆಸಲು ಕೇಂದ್ರ ಸರ್ಕಾರದ ಅಧೀನ ಸಂಸ್ಥೆಯಾಗಿರುವ ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (NPCI) ಅಭಿವೃದ್ಧಿಪಡಿಸಿರುವ ಅಧಿಕೃತ ಪೇಮೆಂಟ್ ಆ್ಯಪ್ ಆಗಿದೆ.
7. ಡಿಜಿಯಾತ್ರೆ (DigiYatra):

ವಿಮಾನ ಪ್ರಯಾಣಿಕರಿಗೆ ತುಂಬಾ ಉಪಯುಕ್ತವಾಗಿರುವ ಇದ್ರಲ್ಲಿ, ವಿಮಾನ ನಿಲ್ದಾಣಗಳಲ್ಲಿ ಫೇಸ್ ರೆಕಗ್ನಿಷನ್ ತಂತ್ರಜ್ಞಾನದ ಮೂಲಕ ಯಾವುದೇ ದಾಖಲೆಗಳಿಲ್ಲದೆ ವೇಗವಾಗಿ ಬೋರ್ಡಿಂಗ್ ಪ್ರಕ್ರಿಯೆ ಮುಗಿಸಬಹುದು.
8. ಫಾಸ್ಟ್‌ಟ್ಯಾಗ್ (FASTag):

ಹೆದ್ದಾರಿ ಪ್ರಯಾಣವನ್ನು ಸುಗಮಗೊಳಿಸುವ ನಿಟ್ಟಿನಲ್ಲಿ ಈ ಆಪ್ ಕೆಲಸ ಮಾಡುತ್ತದೆ. ನಿಮ್ಮ ಟೋಲ್ ಪಾವತಿಗಳ ವಿವರ, ಅಕೌಂಟ್ ರೀಚಾರ್ಜ್ ಮತ್ತು ವಹಿವಾಟುಗಳನ್ನು ಇದರಲ್ಲಿ ಸುಲಭವಾಗಿ ನಿರ್ವಹಿಸಬಹುದು.
9. ಎಐಎಸ್ ಆ್ಯಪ್ (AIS for Taxpayer):

ತೆರಿಗೆ ಪಾವತಿದಾರರಿಗೆ ಇದು ವೈಯಕ್ತಿಕ ಪಾಸ್‌ಬುಕ್ ಇದ್ದಂತೆ. ಟಿಡಿಎಸ್ (TDS), ತೆರಿಗೆ ಮರುಪಾವತಿ (Refund) ಮತ್ತು ಜಿಎಸ್‌ಟಿ ವಿವರಗಳನ್ನು ಇಲ್ಲಿ ಟ್ರ್ಯಾಕ್ ಮಾಡಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


