ನಿಮ್ಮ ಹೆಸರಿನಲ್ಲೂ ಇರಬಹುದು ನಕಲಿ ಸಿಮ್! ಎಚ್ಚರತಪ್ಪಿದರೆ 50 ಲಕ್ಷ ರೂ ದಂಡದ ಜೊತೆ 3 ವರ್ಷ ಜೈಲು ಶಿಕ್ಷೆ; ಸರ್ಕಾರ ಎಚ್ಚರಿಕೆ
ಕೇಂದ್ರ ದೂರಸಂಪರ್ಕ ಇಲಾಖೆಯು ಸೈಬರ್ ಅಪರಾಧ ಹಾಗೂ ನಕಲಿ ಸಿಮ್ ಹಾವಳಿಗೆ ಬ್ರೇಕ್ ಹಾಕಲು ದೂರಸಂಪರ್ಕ ಕಾಯ್ದೆ, 2023ರ ಅಡಿಯಲ್ಲಿ ಅತ್ಯಂತ ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ. ಆ ಕುರಿತ ವರದಿ ಇಲ್ಲಿದೆ:

ನಿಮ್ಮ ಹೆಸರಿನಲ್ಲಿ ಯಾರೋ ಅಪರಿಚಿತರು ಸಿಮ್ ಕಾರ್ಡ್ ಪಡೆದು ಸೈಬರ್ ವಂಚನೆ ನಡೆಸುತ್ತಿರಬಹುದೇ? ಇತ್ತೀಚಿನ ದಿನಗಳಲ್ಲಿ ಇಂತಹ ಘಟನೆಗಳು ಹೆಚ್ಚಾಗುತ್ತಿದ್ದು, ನಿಮ್ಮ ಗಮನಕ್ಕೆ ಬಾರದಂತೆ ನಡೆಯುವ ಈ ಸಣ್ಣ ತಪ್ಪು ನಿಮ್ಮನ್ನು ನೇರವಾಗಿ ಕಂಬಿ ಎಣಿಸುವಂತೆ ಮಾಡಬಹುದು. ಹಾಗಾಗಿಯೇ, ನಕಲಿ ಸಿಮ್ ಬಳಕೆ ಮತ್ತು ಮೊಬೈಲ್ ದುರುಪಯೋಗಕ್ಕೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಈಗ ಕಠಿಣ ಕ್ರಮಕ್ಕೆ ಮುಂದಾಗಿದ್ದು, ನಿಯಮ ಉಲ್ಲಂಘಿಸಿದರೆ ಕಾದಿದೆ ಭಾರಿ ಮೊತ್ತದ ದಂಡ ಮತ್ತು ಜೈಲು ಶಿಕ್ಷೆ. ಆ ಕುರಿತ ವರದಿ ಇಲ್ಲಿದೆ:
ಹೌದು, ಕೇಂದ್ರ ಸರ್ಕಾರದ ದೂರಸಂಪರ್ಕ ಇಲಾಖೆಯು (DoT) ಹೊಸ ದೂರಸಂಪರ್ಕ ಕಾಯ್ದೆ 2023ರ (Telecommunications Act, 2023) ಅಡಿಯಲ್ಲಿ SIM ಕಾರ್ಡ್ ದುರ್ಬಳಕೆ ಮಾಡಿದ್ರೆ 50 ಲಕ್ಷ ದಂಡ, 3 ವರ್ಷ ಜೈಲು ಎಂಬ ಕಠಿಣ ನಿಯಮವನ್ನು ಜಾರಿಗೆ ತಂದಿದ್ದು, ಸಾರ್ವಜನಿಕರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ.
ಹಾಗಾದ್ರೆ, ಯಾವ ತಪ್ಪುಗಳಿಗೆ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ?
ನಕಲಿ ದಾಖಲೆಗಳ ಬಳಕೆ: ಬೇರೆಯವರ ಗುರುತಿನ ಚೀಟಿ (ಆಧಾರ್, ವೋಟರ್ ಐಡಿ ಇತ್ಯಾದಿ) ಅಥವಾ ನಕಲಿ/ಫೋರ್ಜರಿ ದಾಖಲೆಗಳನ್ನು ನೀಡಿ ಸಿಮ್ ಕಾರ್ಡ್ ಪಡೆದುಕೊಳ್ಳುವುದು.
ಸಿಮ್ ಕಾರ್ಡ್ ಹಸ್ತಾಂತರ/ಬಾಡಿಗೆ: ನಿಮ್ಮ ಹೆಸರಿನಲ್ಲಿರುವ ಸಿಮ್ ಕಾರ್ಡ್ ಅನ್ನು ಬೇರೆಯವರಿಗೆ ಬಳಸಲು ನೀಡುವುದು, ಬಾಡಿಗೆಗೆ ಕೊಡುವುದು ಅಥವಾ ಮಾರಾಟ ಮಾಡುವುದು. ಒಂದು ವೇಳೆ ಆ ಸಿಮ್ ದುರ್ಬಳಕೆಯಾಗಿ ಸೈಬರ್ ಕ್ರೈಂ ನಡೆದರೆ, ಮೂಲ ಮಾಲೀಕರನ್ನೇ ಅಪರಾಧಿ ಎಂದು ಪರಿಗಣಿಸಲಾಗುತ್ತದೆ.
IMEI ಸಂಖ್ಯೆ ತಿದ್ದುಪಡಿ: ಮೊಬೈಲ್‌ನ ವಿಶಿಷ್ಟ ಗುರುತಿನ ಸಂಖ್ಯೆಯಾದ IMEI ಅನ್ನು ಅಕ್ರಮವಾಗಿ ಬದಲಾಯಿಸುವುದು ಅಥವಾ ತಿದ್ದುಪಡಿ ಮಾಡುವುದು.
ಸಿಮ್ ಬಾಕ್ಸ್ ಮತ್ತು ಸಿಎಲ್‌ಐ ಮಾರ್ಪಾಡು: ಟೆಲಿಫೋನ್ ಸಂಖ್ಯೆಗಳನ್ನು ಮರೆಮಾಚುವ ಸಾಫ್ಟ್‌ವೇರ್ ಅಪ್ಲಿಕೇಶನ್‌ಗಳು, ಕಾಲಿಂಗ್ ಲೈನ್ ಐಡೆಂಟಿಟಿ (CLI) ಮಾರ್ಪಾಡು ಅಥವಾ ಸಿಮ್ ಬಾಕ್ಸ್ (SIM Box) ಉಪಕರಣಗಳನ್ನು ಬಳಸುವುದು.
ನಿಯಮ ಉಲ್ಲಂಘನೆಗೆ ದಂಡ ಎಷ್ಟು?
ಮೊದಲ ಬಾರಿಯ ತಪ್ಪು: ಗರಿಷ್ಠ ಒಂಬತ್ತು ಸಿಮ್ ಕಾರ್ಡ್‌ಗಳ ಮಿತಿಯನ್ನು (ಕೆಲವು ಪ್ರದೇಶಗಳಲ್ಲಿ ಆರು) ಮೀರಿ ಹೆಚ್ಚುವರಿ ಸಿಮ್ ಹೊಂದಿದ್ದರೆ ಮೊದಲ ಬಾರಿಗೆ ₹50,000 ವರೆಗೆ ದಂಡ.
ಮರುಕಳಿಸುವ ತಪ್ಪು: ನಿಯಮ ಮೀರಿ ಮತ್ತೆ ಸಿಮ್ ಕಾರ್ಡ್ ಸಂಗ್ರಹಿಸಿದರೆ ₹2 ಲಕ್ಷದವರೆಗೆ ದಂಡ ವಿಧಿಸಲಾಗುತ್ತದೆ.
ವಂಚನೆ ಮತ್ತು ಅಕ್ರಮ: ನಕಲಿ ದಾಖಲೆ ಸೃಷ್ಟಿ, ಗುರುತು ಮರೆಮಾಚುವಿಕೆ ಮತ್ತು ಐಎಂಇಐ ತಿದ್ದುಪಡಿ ಮುಂತಾದ ಗಂಭೀರ ಅಪರಾಧಗಳಿಗೆ 3 ವರ್ಷ ಜೈಲು ಮತ್ತು ₹50 ಲಕ್ಷದವರೆಗೆ ದಂಡ ಅಥವಾ ಎರಡನ್ನೂ ಒಟ್ಟಿಗೆ ವಿಧಿಸಬಹುದು.
ಗ್ರಾಹಕರ ಸುರಕ್ಷತೆಗಾಗಿ ನೀವು ಏನು ಮಾಡಬೇಕು?
ನಿಮ್ಮ ಹೆಸರಿನಲ್ಲಿ ನಿಮಗೆ ತಿಳಿಯದಂತೆ ಯಾರಾದರೂ ಸಿಮ್ ಕಾರ್ಡ್ ಬಳಸುತ್ತಿದ್ದಾರೆಯೇ ಎಂಬುದನ್ನು ಪರಿಶೀಲಿಸಲು ಸರ್ಕಾರ ಸುಲಭ ವ್ಯವಸ್ಥೆ ಮಾಡಿದೆ:
ತಕ್ಷಣವೇ ಸರ್ಕಾರದ ಅಧಿಕೃತ Sanchar Saathi Portal ಅಥವಾ ಆಪ್‌ಗೆ ಭೇಟಿ ನೀಡಿ.
ನಿಮ್ಮ ಮೊಬೈಲ್ ಸಂಖ್ಯೆ ಹಾಗೂ ಒಟಿಪಿ (OTP) ನಮೂದಿಸಿ ಲಾಗ್ ಇನ್ ಆಗಿ.
ಅಲ್ಲಿ ನಿಮ್ಮ ಆಧಾರ್/ದಾಖಲೆಗಳ ಮೇಲೆ ಎಷ್ಟು ಮೊಬೈಲ್ ಸಂಖ್ಯೆಗಳು ಸಕ್ರಿಯವಾಗಿವೆ ಎಂಬ ಪಟ್ಟಿ ಕಾಣಿಸುತ್ತದೆ.
ಅದರಲ್ಲಿ ಯಾವುದೇ ಅಪರಿಚಿತ ಅಥವಾ ನಕಲಿ ಸಂಖ್ಯೆ ಕಂಡುಬಂದಲ್ಲಿ, ತಕ್ಷಣವೇ ಆ ಪೋರ್ಟಲ್ ಮೂಲಕವೇ ದೂರನ್ನು ಸಲ್ಲಿಸಿ ಆ ನಂಬರ್ ಬ್ಲಾಕ್ ಮಾಡಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



