ವಾಣಿಜ್ಯ

ಡೆಬಿಟ್ ಕಾರ್ಡ್ ಬಳಸುವಾಗ ಈ ತಪ್ಪುಗಳನ್ನು ಮಾಡಬೇಡಿ; ಮಾಡಿದರೆ ಅಕೌಂಟ್ ಖಾಲಿ ಆಗೋದು ಪಕ್ಕಾ!

ಇಂದು ಎಲ್ಲರ ಜೇಬಿನಲ್ಲೂ ಡೆಬಿಟ್ ಕಾರ್ಡ್ ಇದೆ. ATM ನಿಂದ ಹಣ ತೆಗೆಯಲು, ಆನ್ಲೈನ್ ಶಾಪಿಂಗ್‌ಗೆ, ಹೋಟೆಲ್​ನಲ್ಲಿ ಬಿಲ್ ಕಟ್ಟಲು ನಾವು ಕಾರ್ಡ್ ಬಳಸುತ್ತೇವೆ. ಆದರೆ ಒಂದು ಸಣ್ಣ ಅಜಾಗರೂಕತೆ ನಿಮ್ಮ ಇಡೀ ಬ್ಯಾಂಕ್ ಖಾತೆಯನ್ನು ಖಾಲಿ ಮಾಡಬಹುದು. ನೀವು ಮಾಡಲೇಬಾರದ ಸಾಮಾನ್ಯ ತಪ್ಪುಗಳು ಇಲ್ಲಿವೆ.

ಡೆಬಿಟ್ ಕಾರ್ಡ್ ಬಳಸುವಾಗ ಈ ತಪ್ಪುಗಳನ್ನು ಮಾಡಬೇಡಿ; ಮಾಡಿದರೆ ಅಕೌಂಟ್ ಖಾಲಿ ಆಗೋದು ಪಕ್ಕಾ!
ಡೆಬಿಟ್ ಕಾರ್ಡ್ — AI Image
Published On :

Mistakes To Avoid While Using Debit Card: ಇಂದಿನ ಡಿಜಿಟಲ್ ಯುಗದಲ್ಲಿ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ಕ್ಷಣಾರ್ಧದಲ್ಲಿ ಬಳಸಲು ಡೆಬಿಟ್ ಕಾರ್ಡ್ ಅತ್ಯಂತ ಸುಲಭ ಮಾರ್ಗವಾಗಿದೆ. ಆದರೆ, ನಾವು ದಿನನಿತ್ಯದ ಆತುರದಲ್ಲಿ ಅಥವಾ ನಿರ್ಲಕ್ಷ್ಯದಿಂದ ಮಾಡುವ ಸಣ್ಣ ಸಣ್ಣ ತಪ್ಪುಗಳೇ ಸೈಬರ್ ವಂಚಕರಿಗೆ ವರದಾನವಾಗುತ್ತಿವೆ. ಎಟಿಎಂ ಕೇಂದ್ರದಿಂದ ಹಿಡಿದು ಸಾರ್ವಜನಿಕ ವೈ-ಫೈವರೆಗೆ, ಕಾರ್ಡ್ ಬಳಸುವಾಗ ನಾವು ಪಾಲಿಸಲೇಬೇಕಾದ ಪ್ರಮುಖ ಸುರಕ್ಷತಾ ಮುನ್ನೆಚ್ಚರಿಕೆಗಳು ಇಲ್ಲಿವೆ.. 

  • ಪಿನ್ ಸಂಖ್ಯೆಯನ್ನು ಎಲ್ಲೂ ಬರೆದಿಡಬೇಡಿ:

ಅನೇಕರು ಪಿನ್ ಸಂಖ್ಯೆ ಮರೆತುಹೋಗುತ್ತದೆ ಎಂದು ಕಾರ್ಡ್ ಮೇಲೆಯೇ ಬರೆಯುತ್ತಾರೆ ಅಥವಾ ಮೊಬೈಲ್‌ನ ನೋಟ್ಸ್‌ನಲ್ಲಿ ಸೇವ್ ಮಾಡಿಕೊಳ್ಳುತ್ತಾರೆ. ಅದರೆ, ಹೀಗೆ ಮಾಡಿದಾಗ ಕಾರ್ಡ್ ಅಥವಾ ಮೊಬೈಲ್ ಕಳುವಾದರೆ ನಿಮ್ಮ ಖಾತೆಗೆ ಕನ್ನ ಹಾಕುವುದು ಸುಲಭವಾಗುತ್ತದೆ. ಹಾಗಾಗಿ, ಪಿನ್ ಸಂಖ್ಯೆಯನ್ನು ಯಾರಿಗೂ (ಬ್ಯಾಂಕ್ ಅಧಿಕಾರಿಗಳಿಗೂ ಸಹ) ತಿಳಿಸಬೇಡಿ. ಇದರೊಂದಿಗೆ, ಮುಖ್ಯವಾಗಿ  ATM ಪಿನ್ ರಚಿಸುವಾಗ ನಿಮ್ಮ ಜನ್ಮ ದಿನಾಂಕ, ಮೊಬೈಲ್ ಸಂಖ್ಯೆ ಅಥವಾ 1234 ರಂತಹ ಸುಲಭವಾದ ಸಂಖ್ಯೆಗಳನ್ನು ಬಳಸಬೇಡಿ. ಅಲ್ಲದೆ, ನಿಮ್ಮ ಬಳಿ ಒಂದಕ್ಕಿಂತ ಹೆಚ್ಚು ಕಾರ್ಡ್‌ಗಳಿದ್ದರೆ ಎಲ್ಲದಕ್ಕೂ ಒಂದೇ ಪಿನ್ ಇಡಬೇಡಿ.

  • ಎಟಿಎಂನಲ್ಲಿ ಕೀಪ್ಯಾಡ್ ಮರೆಮಾಡದೆ ಇರುವುದು:

ಎಟಿಎಂ ಅಥವಾ ಯಾವುದೇ ಅಂಗಡಿಗಳಲ್ಲಿ ಕಾರ್ಡ್ ಸ್ವೈಪ್ ಮಾಡಿ ಪಿನ್ ನಮೂದಿಸುವಾಗ, ಇತರರಿಗೆ ಕಾಣಿಸದಂತೆ ಕೀಪ್ಯಾಡ್ ಅನ್ನು ನಿಮ್ಮ ಕೈಯಿಂದ ಮರೆಮಾಡಿ. ಇದರೊಂದಿಗೆ, ಕಾರ್ಡ್ ಹಾಕುವ ಸ್ಲಾಟ್‌ನಲ್ಲಿ ಏನಾದರೂ ಹೆಚ್ಚುವರಿ ಡಿವೈಸ್ ಅಳವಡಿಸಲಾಗಿದೆಯೇ ಎಂಬುದನ್ನು ಒಮ್ಮೆ ಪರಿಶೀಲಿಸಿ.

  • ಸಾರ್ವಜನಿಕ ವೈ-ಫೈ ಬಳಸಿ ವಹಿವಾಟು ಬೇಡ

ರೈಲ್ವೇ ಸ್ಟೇಷನ್, ಬಸ್ ಸ್ಟ್ಯಾಂಡ್ ಅಥವಾ ಕೆಫೆಗಳಲ್ಲಿ ಸಿಗುವ ಉಚಿತ ಸಾರ್ವಜನಿಕ ವೈ-ಫೈ ಸಂಪರ್ಕ ಬಳಸಿ ಎಂದಿಗೂ ಆನ್‌ಲೈನ್ ಶಾಪಿಂಗ್ ಅಥವಾ ಬ್ಯಾಂಕಿಂಗ್ ವಹಿವಾಟು ನಡೆಸಬೇಡಿ. ಹ್ಯಾಕರ್‌ಗಳು ಈ ನೆಟ್‌ವರ್ಕ್ ಮೂಲಕ ನಿಮ್ಮ ಕಾರ್ಡ್ ವಿವರಗಳನ್ನು ಸುಲಭವಾಗಿ ಕದಿಯಬಹುದು. ಇದರಿಂದ ನಿಮ್ಮ ಮಾಹಿತಿ ಹ್ಯಾಕ್ ಆಗುವ ಸಾಧ್ಯತೆ ಇರುತ್ತದೆ. ಜೊತೆಗೆ, ಆನ್‌ಲೈನ್ ಶಾಪಿಂಗ್ ಮಾಡುವಾಗ ಕೇವಲ ಅಧಿಕೃತ ಮತ್ತು ಸುರಕ್ಷಿತ (https:// ಇರುವ) ವೆಬ್‌ಸೈಟ್‌ಗಳನ್ನು ಮಾತ್ರ ಬಳಸಿ. ನಿಮ್ಮ ಕಾರ್ಡ್ ವಿವರಗಳನ್ನು ಯಾವುದೇ ಅಪರಿಚಿತ ಆ್ಯಪ್ ಅಥವಾ ವೆಬ್‌ಸೈಟ್‌ಗಳಲ್ಲಿ ಸೇವ್ ಮಾಡಬೇಡಿ.

Mistakes To Avoid While Using Debit Card
AI Image
  • ಅಪರಿಚಿತ ಲಿಂಕ್‌ಗಳ ಮೇಲೆ ಕ್ಲಿಕ್

"ನಿಮ್ಮ ಡೆಬಿಟ್ ಕಾರ್ಡ್ ಬ್ಲಾಕ್ ಆಗಿದೆ, ತಕ್ಷಣ ಕೆವೈಸಿ (KYC) ಅಪ್ಡೇಟ್ ಮಾಡಿ" ಎಂದು ಬರುವ ಬ್ಯಾಂಕ್ ಮಾದರಿಯ ನಕಲಿ ಎಸ್‌ಎಂಎಸ್ ಅಥವಾ ಇಮೇಲ್ ಲಿಂಕ್‌ಗಳನ್ನು ನಂಬಬೇಡಿ. ಬ್ಯಾಂಕ್‌ಗಳು ಎಂದಿಗೂ ಲಿಂಕ್‌ಗಳ ಮೂಲಕ ಕಾರ್ಡ್ ವಿವರ ಅಥವಾ ಒಟಿಪಿ ಕೇಳುವುದಿಲ್ಲ.

  • ಕಾರ್ಡ್ ಕಳೆದುಹೋದರೆ ನಿರ್ಲಕ್ಷಿಸುವುದು:

ನಿಮ್ಮ ಡೆಬಿಟ್ ಕಾರ್ಡ್ ಎಲ್ಲಾದರೂ ಕಾಣೆಯಾದರೆ ಅಥವಾ ಕಳುವಾದರೆ ತಕ್ಷಣವೇ ಬ್ಯಾಂಕ್‌ಗೆ ಕರೆ ಮಾಡಿ ಅಥವಾ ಮೊಬೈಲ್ ಬ್ಯಾಂಕಿಂಗ್ ಆ್ಯಪ್ ಬಳಸಿ ಕಾರ್ಡ್ ಅನ್ನು ಬ್ಲಾಕ್ ಮಾಡಿ.

  • ಕಾರ್ಡ್ ವಿವರಗಳನ್ನು ಹಂಚಿಕೊಳ್ಳುವುದು:

ನಿಮ್ಮ ಡೆಬಿಟ್ ಕಾರ್ಡ್ ಸಂಖ್ಯೆ, 16 ಅಂಕಿಗಳ ಕಾರ್ಡ್ ನಂಬರ್, ಬ್ಯಾಕ್‌ಸೈಡ್‌ನಲ್ಲಿರುವ 3 ಅಂಕಿಯ CVV ನಂಬರ್ ಅಥವಾ ಬ್ಯಾಂಕ್‌ನಿಂದ ಬರುವ OTP ಅನ್ನು ಯಾರೊಂದಿಗೂ (ಬ್ಯಾಂಕ್ ಅಧಿಕಾರಿಗಳೆಂದು ಹೇಳಿಕೊಳ್ಳುವವರೊಂದಿಗೂ ಸಹ) ಹಂಚಿಕೊಳ್ಳಬೇಡಿ.

ಡೆಬಿಟ್ ಕಾರ್ಡ್ ಎಷ್ಟು ಅನುಕೂಲವೋ ಅಷ್ಟೇ ಅಪಾಯವೂ ಹೌದು. ಸ್ವಲ್ಪ ಜಾಗರೂಕತೆ ವಹಿಸಿದರೆ ನಿಮ್ಮ ಹಣ ಸುರಕ್ಷಿತವಾಗಿರುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.