ಡಿ.ಕೆ ಶಿವಕುಮಾರ್ ತೇಜೋವಧೆಗೆ ಕುಮಾರಸ್ವಾಮಿ ಪ್ಲಾನ್: ನಕಲಿ ಸಿಮ್ ಕಾರ್ಡ್ ಖರೀದಿ, ನೇಪಾಳ-ಕೆನಡಾದಿಂದ ರೆಕಾರ್ಡ್; ST ಸೋಮಶೇಖರ್
ಅಮಿತ್ ಶಾ ಅವರ ಸೂಚನೆಯಂತೆ ತಾವು ಕೆಲಸ ಮಾಡುತ್ತಿರುವುದಾಗಿ ಕುಮಾರಸ್ವಾಮಿ ಹೇಳಿದ್ದಾರೆ, ಆದರೆ ನಾನು ಮೂರು ವರ್ಷ ಬಿಜೆಪಿಯಲ್ಲಿದ್ದೆ, ಅಮಿತ್ ಶಾ ಅಂತ ಕೆಲಸ ಮಾಡುವುದಿಲ್ಲ ಎಂದಿದ್ದಾರೆ.

ಬೆಂಗಳೂರು: ಮುಖ್ಯಮಂತ್ರಿಗಳು ಕಸ್ತೂರಿ ರಂಗನ್ ವರದಿ ಬಗ್ಗೆ ಆರೇಳು ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಅಭಿಪ್ರಾಯ ಸಂಗ್ರಹಿಸಿ, ವಿಶೇಷ ಅಧಿವೇಶನ ನಡೆಸುತ್ತಿದ್ದಾರೆ. ಇದನ್ನು ಕೇಂದ್ರ ಸಚಿವ ಕುಮಾರಸ್ವಾಮಿ ಅವರಿಗೆ ಸಹಿಸಲಾಗುತ್ತಿಲ್ಲ, ಹೀಗಾಗಿ ಸಿಎಂ ತೇಜೋವಧೆಗೆ ಯತ್ನಿಸುತ್ತಿದ್ದಾರೆ ಎಂದು ಶಾಸಕ ಎಸ್,ಟಿ ಸೋಮಶೇಖರ್ ಆರೋಪಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಸೋಮಶೇಖರ್, ನಕಲಿ ಸಿಮ್ ಕಾರ್ಡ್ ತೆಗೆದುಕೊಟ್ಟು,ಅಯೋಧ್ಯೆ ಕೆನಡಾ, ನೇಪಾಳಕ್ಕೆ ಕಳುಹಿಸಿ ಸಿಎಂ ಡಿಕೆ ಶಿವಕುಮಾರ್ ಅವರನ್ನು ಟ್ರ್ಯಾಪ್ ಮಾಡುತ್ತಿದ್ದಾರೆ. ಅವರಿಗೆ ಪ್ರವಾಸ ವೆಚ್ಚ ಎಲ್ಲವನ್ನು ಕುಮಾರಸ್ವಾಮಿ ಅವರೇ ಭರಿಸುತ್ತಿದ್ದಾರೆ.
ಅಮಿತ್ ಶಾ ಅವರ ಸೂಚನೆಯಂತೆ ತಾವು ಕೆಲಸ ಮಾಡುತ್ತಿರುವುದಾಗಿ ಕುಮಾರಸ್ವಾಮಿ ಹೇಳಿದ್ದಾರೆ, ಆದರೆ ನಾನು ಮೂರು ವರ್ಷ ಬಿಜೆಪಿಯಲ್ಲಿದ್ದೆ, ಅಮಿತ್ ಶಾ ಅಂತ ಕೆಲಸ ಮಾಡುವುದಿಲ್ಲ ಎಂದಿದ್ದಾರೆ.
ಕುಮಾರಸ್ವಾಮಿಗೆ ತಾಕತ್ ಇದ್ದರೆ ಬೆಂಗಳೂರಿನಲ್ಲಿದ್ದುಕೊಂಡೆ ಶಿವಕುಮಾರ್ ವಿರುದ್ದ ಕೆಲಸ ಮಾಡಲಿ, ಅದನ್ನು ಬಿಟ್ಟು ನಕಲಿ ಸಿಮ್ ಕಾರ್ಡ್ ತೆಗೆದುಕೊಟ್ಟು ಮುಖ್ಯಮಂತ್ರಿಗಳ ತೇಜೋವಧೆಗೆ ಯತ್ನಿಸುತ್ತಿದ್ದಾರೆ. ಇದು ನಿಮ್ಮ ಘನತೆಗೆ ತಕ್ಕದಲ್ಲ, ಏನೇ ಮಾಡುವುದಿದ್ದರೂ ನೇರವಾಗಿ ಮಾಡಿ, ಬೆನ್ನಿಗೆ ಚೂರಿ ಹಾಕಬೇಡಿ ಎಂದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಕ್ಯಾಬಿನೆಟ್ ನಲ್ಲಿ ಉತ್ತಮ ಖಾತೆ ಹೊಂದಿದ್ದರೂ ಕರ್ನಾಟಕಕ್ಕೆ ಯಾವುದೇ ಒಂದು ಉತ್ತಮ ಕೆಲಸ ಮಾಡಿಲ್ಲ ಎಂದು ಆರೋಪಿಸಿದ್ದಾರೆ.
ದೇಶವೇ ಅಲ್ಲೋಲ ಕಲ್ಲೋಲವಾಗುವಂತಹ ಸುದ್ದಿ ಹಾಗೂ ದಾಖಲೆಗಳನ್ನು ಬಿಡುಗಡೆ ಮಾಡುವುದಾಗಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ, ʻಆಡಿಯೋ ಬಾಂಬ್ʼ ಕುರಿತು ರಾಜಕೀಯ ವಲಯದಲ್ಲಿ ಕುತೂಹಲ ಹೆಚ್ಚಾಗಿದೆ.
ಕುಮಾರಸ್ವಾಮಿ ಅವರು ದಾಖಲೆಗಳನ್ನ ಬಿಡುಗಡೆ ಮಾಡುವ ಮುನ್ನವೇ, ಅದರ ಕುರಿತಾದ ಮಾಹಿತಿ ಅಥವಾ ಆಡಿಯೋ ಸೋರಿಕೆಯಾಯಿತಾ ಎಂಬ ಪ್ರಶ್ನೆಯೂ ಎದುರಾಗಿದೆ.
ಈ ಎಲ್ಲ ಬೆಳವಣಿಗೆಗಳ ಬಗ್ಗೆ ಶಾಸಕ ಎಸ್.ಟಿ ಸೋಮಶೇಖರ್ ನೀಡಿರುವ ಹೇಳಿಕೆ ಮತ್ತಷ್ಟು ಸಸ್ಪೆನ್ಸ್‌ಗೆ ಕಾರಣವಾಗಿದೆ. ಕುಮಾರಸ್ವಾಮಿ ಆಡಿಯೋ ಬಿಡುಗಡೆ ಮಾಡಬಹುದು ಎಂಬ ಸುಳಿವಿನ ಬೆನ್ನಲ್ಲೇ ಸೋಮಶೇಖರ್ ನೀಡಿರುವ ಹೇಳಿಕೆಯ ಹಿಂದಿನ ಉದ್ದೇಶವೇನು ಎಂಬ ಚರ್ಚೆ ಕೂಡ ಕುತೂಹಲ ಕೆರಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



