ಗ್ಯಾಡ್ಜೆಟ್ಸ್

ಒಂದೇ Appನಲ್ಲಿ 2 Whatsapp ಯೂಸ್ ಮಾಡೋದು ಹೇಗೆ?

ವಾಟ್ಸಪ್ ಈಗ ಒಂದೇ ಫೋನ್‌ನಲ್ಲಿ ಎರಡು ಖಾತೆಗಳನ್ನು ಬಳಸಲು ಸುಲಭವಾದ ಆಯ್ಕೆಯನ್ನು ನೀಡಿದೆ. ಹಾಗಾಗಿ, ನೀವು ಬೇರೆ ಆ್ಯಪ್‌ಗಳನ್ನು ಬಳಸಬೇಕಾಗಿಲ್ಲ. ನಿಮ್ಮ ಫೋನ್‌ನಲ್ಲಿಯೇ ವಾಟ್ಸಪ್ಪ್ನಲ್ಲಿ ಈ ಒಂದು ಸೆಟ್ಟಿಂಗ್ ಚೇಂಜ್ ಮಾಡುವ ಮೂಲಕ ಬಳಕೆ ಮಾಡಬಹುದಾಗಿದೆ.

ಒಂದೇ Appನಲ್ಲಿ 2 Whatsapp ಯೂಸ್ ಮಾಡೋದು ಹೇಗೆ?
ವಾಟ್ಸಪ್ — Online Desk
Published On :

Dual Whatsapp in a single App: ಭಾರತದಲ್ಲಿ 86 ಕೋಟಿ ವಾಟ್ಸಪ್ (Whatsapp) ಬಳಕೆದಾರರಿದ್ದಾರೆ. ಅದ್ರಲ್ಲಿ, ಅದೆಷ್ಟೋ ಅಕೌಂಟ್‌ಗಳಿಗೆ (Account) ಒಬ್ಬರೇ ಒಬ್ಬರು ಓನರ್ ಅಂದ್ರೆ ಓರ್ವ ವ್ಯಕ್ತಿ ತನ್ನ ಬಳಿಯಿರುವ ಎಲ್ಲಾ ಎರಡು-ಮೂರೂ ನಂಬರ್ಗೂ ವಾಟ್ಸಪ್ ಅಕೌಂಟ್ (WhatsApp Account) ಕ್ರಿಯೇಟ್ ಮಾಡಿರುತ್ತಾರೆ. ಆದ್ರೆ, ಈ ಎರಡು ವಾಟ್ಸಪ್ ಅಕೌಂಟ್ ಅನ್ನು ಒಂದೇ ಮೊಬೈಲ್ ನಲ್ಲಿ ಬಳಕೆ ಮಾಡಲು ನಾವು ಅನ್ಯ ಮಾರ್ಗಗಳನ್ನು ಬಳಕೆ ಮಾಡುತ್ತೇವೆ! ಅಂದ್ರೆ ಥರ್ಡ್ ಪಾರ್ಟಿ ಅಪ್ಲಿಕೇಶನ್, ಬಸ್ಸಿನೆಸ್ ಇಲ್ಲದೆ ಇದ್ರೂ ವಾಟ್ಸಪ್ ಬಸ್ಸಿನೆಸ್ ಅಕೌಂಟ್ (WhatsApp Business Account).. ಹೀಗೇ ಹತ್ತಾರು ಮಾರ್ಗದ ಹಿಂದೆ ಓಡುತ್ತವೆ. ಆದ್ರೆ, ಈ ಸಮಸ್ಯೆಗೆ ಈಗ ಖುದ್ದು ವಾಟ್ಸಪ್ ಕಂಪನಿಯೇ ಸೊಲ್ಯೂಷನ್ ತಂದಿದೆ. ಆ ಕುರಿತ ವರದಿ ಇಲ್ಲಿದೆ.

ಹೌದು, ವಾಟ್ಸಪ್ ಈಗ ಒಂದೇ ಫೋನ್‌ನಲ್ಲಿ ಎರಡು ಖಾತೆಗಳನ್ನು ಬಳಸಲು ಸುಲಭವಾದ ಆಯ್ಕೆಯನ್ನು ನೀಡಿದೆ. ಹಾಗಾಗಿ, ನೀವು ಬೇರೆ ಆ್ಯಪ್‌ಗಳನ್ನು ಬಳಸಬೇಕಾಗಿಲ್ಲ. ನಿಮ್ಮ ಫೋನ್‌ನಲ್ಲಿಯೇ ವಾಟ್ಸಪ್ಪ್ನಲ್ಲಿ ಈ ಒಂದು ಸೆಟ್ಟಿಂಗ್ ಚೇಂಜ್ ಮಾಡುವ ಮೂಲಕ ಬಳಕೆ ಮಾಡಬಹುದಾಗಿದೆ.

2 ಅಕೌಂಟ್ ಬಳಕೆ ಮಾಡೋದು ಹೇಗೆ?

  1. ವಾಟ್ಸಾಪ್ ಓಪನ್ ಮಾಡಿ

  2. ಸೆಟ್ಟಿಂಗ್ಸ್ ಆಯ್ಕೆ ಮಾಡಿ

  3. ಪ್ರೊಫೈಲ್ ಪಕ್ಕದಲ್ಲಿರುವ ಪ್ಲಸ್ ಬಟನ್ ಮೇಲೆ ಕ್ಲಿಕ್ ಮಾಡಿ

  4. ಅಕೌಂಟ್ ಸೇರಿಸಿ

  5. ನಿಮ್ಮ ಎರಡನೇ ಫೋನ್ ನಂಬರ್ ನಮೂದಿಸಿ

  6. ನಿಮ್ಮ ಮೊಬೈಲ್ ಸಂಖ್ಯೆಗೆ ಬರುವ 6 ನಂಬರ್ ಒಟಿಪಿ ಹಾಕಿ.

  7. ಪ್ರೊಫೈಲ್ ಹೆಸರು ಮತ್ತು DP ಹಾಕಿ

ಅಕೌಂಟ್ ಬದಲಾಯಿಸುವುದು ಹೇಗೆ?

ನೀವು ಸೆಟ್ಟಿಂಗ್‌ಗಳು ಅಥವಾ ಪ್ರೊಫೈಲ್ ಟ್ಯಾಬ್ ಅನ್ನು ದೀರ್ಘವಾಗಿ ಒತ್ತುವ ಮೂಲಕ ಒಂದು ಖಾತೆಯಿಂದ ಇನ್ನೊಂದು ಖಾತೆಗೆ ಸುಲಭವಾಗಿ ಬದಲಾಯಿಸಬಹುದು.

ಏತನ್ಮಧ್ಯೆ, ಪ್ರತಿಯೊಂದು ಅಕೌಂಟ್ ಕೂಡ ಪ್ರತ್ಯೇಕವಾಗಿ ಕಾರ್ಯನಿರ್ವಹಿಸುತ್ತದೆ. ಜೊತೆಗೆ ಎರಡೂ ಅಕೌಂಟ್‌ಗಳ ನೋಟಿಫಿಕೇಶನ್‌ಗಳು ಪ್ರತ್ಯೇಕವಾಗಿ ಬರುತ್ತವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.