ಸಿನಿಮಾ ಸುದ್ದಿ

BiggBoss12: ಬಿಗ್ ಬಾಸ್ ಶೋ ತೊರೆದು ಹೋಗುತ್ತೇನೆ ಎಂದ ಧ್ರುವಂತ್; ಕಾರಣ ಇಷ್ಟೇ.. Video

ಬಿಗ್​​ಬಾಸ್ ಕನ್ನಡ (Bigg Boss Kannada) ಶೋ ಮನೆಗೆ ನಿನ್ನೆಯಷ್ಟೆ ಇಬ್ಬರು ಹೊಸ ಸ್ಪರ್ಧಿಗಳು ಸೇರಿಕೊಂಡಿದ್ದಾರೆ. ಚೈತ್ರಾ ಕುಂದಾಪುರ ಮತ್ತು ರಜತ್ ಅವರು ವೈಲ್ಡ್ ಕಾರ್ಡ್ ಎಂಟ್ರಿಗಳಾಗಿ ಮನೆಗೆ ಬಂದಿದ್ದಾರೆ.

BiggBoss12: ಬಿಗ್ ಬಾಸ್ ಶೋ ತೊರೆದು ಹೋಗುತ್ತೇನೆ ಎಂದ ಧ್ರುವಂತ್; ಕಾರಣ ಇಷ್ಟೇ.. Video
ಬಿಗ್ ಬಾಸ್ ಸ್ಪರ್ಧಿ ದ್ರುವಂತ್
Published On :

ಬೆಂಗಳೂರು: ಕನ್ನಡ ಬಿಗ್ ಬಾಸ್ ಸೀಸನ್ 12 ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಈ ಬಾರಿಯ ವೀಕೆಂಡ್ ಶೋನಲ್ಲಿ ಸ್ಪರ್ಧಿ ಧ್ರುವಂತ್ ಶೋ ತೊರೆದು ಹೋಗುವುದಾಗಿ ಹೇಳಿ ಅಚ್ಚರಿ ಮೂಡಿಸಿದ್ದಾರೆ.

ಹೌದು.. ಬಿಗ್​​ಬಾಸ್ ಕನ್ನಡ (Bigg Boss Kannada) ಶೋ ಮನೆಗೆ ನಿನ್ನೆಯಷ್ಟೆ ಇಬ್ಬರು ಹೊಸ ಸ್ಪರ್ಧಿಗಳು ಸೇರಿಕೊಂಡಿದ್ದಾರೆ. ಚೈತ್ರಾ ಕುಂದಾಪುರ ಮತ್ತು ರಜತ್ ಅವರು ವೈಲ್ಡ್ ಕಾರ್ಡ್ ಎಂಟ್ರಿಗಳಾಗಿ ಮನೆಗೆ ಬಂದಿದ್ದಾರೆ.

ಈ ನಡುವೆ ಇಂದು ಬಿಗ್ ಬಾಸ್ ಮನೆಯಿಂದ ಯಾರು ಎಲಿಮಿನೇಟ್ ಆಗಿ ಹೊರಬರುತ್ತಾರೆ ಎಂಬ ವಿಚಾರ ವ್ಯಾಪಕ ಚರ್ಚೆಯಾಗುತ್ತಿರುವಂತೆಯೇ ಮನೆಯಲ್ಲಿನ ಪ್ರಮುಖ ಸ್ಪರ್ಧಿ ದ್ರುವಂತ್ ಶೋ ತೊರೆದು ಹೋಗುವುದಾಗಿ ಅಚ್ಚರಿ ಹೇಳಿಕೆ ನೀಡಿದ್ದಾರೆ.

ಶೋ ನಿರೂಪಕ ಸುದೀಪ್ ಭಾನುವಾರದ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾಗಲೇ ಈ ಘಟನೆ ನಡೆದಿದ್ದು ಈ ವಾರ ಹೊರ ಹೋಗುವವರ ಹೆಸರು ಘೋಷಣೆ ಮಾಡುವ ಮುಂಚೆಯೇ ಧ್ರುವಂತ್, ಸ್ವತಃ ತಾವೇ ಮನೆ ಬಿಟ್ಟು ಹೊರಗೆ ಹೋಗುವುದಾಗಿ ಹೇಳಿದ್ದಾರೆ.

ಇಷ್ಟಕ್ಕೂ ಆಗಿದ್ದೇನು?

ಇಂದು ಮನೆ ಮಂದಿಗೆಲ್ಲ ಒಂದೊಂದು ಪ್ರಾಣಿಗಳ ಚಿತ್ರವನ್ನು ನೀಡಿ ಅದರ ಗುಣ ಅವರಿಗೆ ಹೋಲುತ್ತದೆಯೋ ಆ ಚಿತ್ರವನ್ನು ಆ ಸ್ಪರ್ಧಿಗಳ ಕುತ್ತಿಗೆಗೆ ಹಾಕಬೇಕು ಎಂದು ಸೂಚಿಸಲಾಗಿತ್ತು. ಅದರಂತೆ ಚೇಳು, ನರಿ ಮತ್ತು ಇತರೆ ಪ್ರಾಣಿಗಳ ಚಿತ್ರಗಳನ್ನು ಇರಿಸಲಾಗಿತ್ತು.

ನರಿ ಬುದ್ದಿ, ಚೇಳಿನ ರೀತಿ ಕುಟುಕುವುದು ಸೇರಿದಂತೆ ಅವರವರ ನಡವಳಿಕೆಗೆ ಅನುಗುಣವಾಗಿ ಆ ಚಿತ್ರಗಳನ್ನು ಅವರ ಕುತ್ತಿಗೆ ಸ್ಪರ್ಧಿಗಳು ಹಾಕಬೇಕಿತ್ತು. ಅದರಂತೆ ಹೆಚ್ಚು ಸ್ಪರ್ಧಿಗಳು ಧ್ರುವಂತ್ ಗೆ ನರಿ, ಮತ್ತು ಚೇಳಿನ ಫೋಟೋಗಳನ್ನು ಹಾಕಿದ್ದಾರೆ. ಇದನ್ನು ಜೀರ್ಣಿಸಿಕೊಳ್ಳದ ದ್ರುವಂತ್ ಕುತ್ತಿಗೆಗೆ ಹಾಕಿದ್ದ ಚಿತ್ರಗಳನ್ನು ತೆಗೆದು ಕೈಯಲ್ಲಿ ಹಿಡಿದಿಟ್ಟುಕೊಂಡಿರುತ್ತಾರೆ.

ಇದನ್ನು ಗಮನಿಸಿದ ಸುದೀಪ್ ಅವರು ದ್ರುವಂತ್ ಉದ್ದೇಶಿಸಿ ಅದನ್ನು ಕುತ್ತಿಗೆಗೆ ಹಾಕಿಕೊಳ್ಳಿ ಎಂದಾಗ ದ್ರುವಂತ್, 'ಇಲ್ಲ ಸರ್.. ಈ ಚಿತ್ರಗಳನ್ನು ಕುತ್ತಿಗೆಗೆ ಹಾಕಿಕೊಳ್ಳುವುದಕ್ಕಿಂತ ನಾನು ಶೋ ಯಿಂದಲೇ ಹೊರ ನಡೆಯುತ್ತೇನೆ.. ಇದು ನನ್ನ ವರ್ಚಸ್ಸಿಗೆ ತಕ್ಕುದಾದುಲ್ಲ ಎನ್ನುವ ರೀತಿಯಲ್ಲಿ ಹೇಳುತ್ತಾರೆ.

ಇನ್ನು ದ್ರುವಂತ್ ಶೋ ಯಿಂದ ಹೊರಬಂದ್ರಾ.. ಅಥವಾ ದ್ರುವಂತ್ ಗೆ ಸುದೀಪ್ ಪಾಠ ಮಾಡಿದ್ರಾ..? ಇಂದು ಎಲಿಮಿನೇಟ್ ಆಗಿದ್ದು ಯಾರು? ಎಂಬುದು ಇಂದಿನ ಶೋದಲ್ಲಿ ಬಹಿರಂಗವಾಗಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.