ಸಿನಿಮಾ ಸುದ್ದಿ

'ಅಸಹ್ಯ, ಅತಿರೇಕ.. ನಿಮ್ಮನ್ನು ಈ ರೀತಿ ನೋಡಲು ಇಚ್ಛಿಸುವುದಿಲ್ಲ, BiggBoss ಶೋ ಬಿಟ್ಟು ಹೊರಬನ್ನಿ': Kichcha Sudeepಗೆ ಪತ್ರ

ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ವಿವಿಧ ವಿಚಾರಗಳಿಂದಾಗಿ ಸುದ್ದಿಯಾಗುತ್ತಿದ್ದು ಇದೀಗ ಅಭಿಮಾನಿಯೋರ್ವ ನಟ ಕಿಚ್ಚಾ ಸುದೀಪ್ ಗೆ ಬರೆದ ಪತ್ರದ ಮೂಲಕ ಮತ್ತೆ ಚರ್ಚೆಗೆ ಕಾರಣವಾಗಿದೆ.

'ಅಸಹ್ಯ, ಅತಿರೇಕ.. ನಿಮ್ಮನ್ನು ಈ ರೀತಿ ನೋಡಲು ಇಚ್ಛಿಸುವುದಿಲ್ಲ, BiggBoss ಶೋ ಬಿಟ್ಟು ಹೊರಬನ್ನಿ': Kichcha Sudeepಗೆ ಪತ್ರ
ಬಿಗ್ ಬಾಸ್ ಶೋನಲ್ಲಿ ನಟ ಕಿಚ್ಚಾ ಸುದೀಪ್
Published On :

ಬೆಂಗಳೂರು: ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಶೋದ ನಿರೂಪಣೆ ಬಿಟ್ಟು ಹೊರಬರುವಂತೆ ಅಭಿಮಾನಿಯೊಬ್ಬರು ಪತ್ರ ಬರೆದಿದ್ದಾರೆ.

ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ವಿವಿಧ ವಿಚಾರಗಳಿಂದಾಗಿ ಸುದ್ದಿಯಾಗುತ್ತಿದ್ದು ಇದೀಗ ಅಭಿಮಾನಿಯೋರ್ವ ನಟ ಕಿಚ್ಚಾ ಸುದೀಪ್ ಗೆ ಬರೆದ ಪತ್ರದ ಮೂಲಕ ಮತ್ತೆ ಚರ್ಚೆಗೆ ಕಾರಣವಾಗಿದೆ.

ಇನ್ ಸ್ಟಾಗ್ರಾಮ್ ನಲ್ಲಿ ನಿರಂಜನ್ ದಾಸ್ ಎಂಬ ಖಾತೆದಾರರು ನಟ ಕಿಚ್ಚಾ ಸುದೀಪ್ ಗೆ ಬಹಿರಂಗ ಪತ್ರ ಬರೆದಿದ್ದು, ಕೂಡಲೇ ಬಿಗ್ ಬಾಸ್ ಶೋ ಬಿಟ್ಟು ಹೊರಬರುವಂತೆ ಮನವಿ ಮಾಡಿದ್ದಾರೆ.

ಬಿಗ್ ಬಾಸ್ ರಿಯಾಲಿಟಿ ಶೋ ನಡೆಯುತ್ತಿರುವ ರೀತಿ ಕುರಿತು ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಅವರು ಇಂತಹ ಕಳಪೆ ವ್ಯಕ್ತಿತ್ವಗಳ ನಡುವೆ ನಿಮ್ಮನ್ನು ನೋಡಲು ಇಚ್ಛಿಸುವುದಿಲ್ಲ ಎಂದು ಪತ್ರದಲ್ಲಿ ಹೇಳಿದ್ದಾರೆ.

ಪತ್ರದಲ್ಲಿರುವುದೇನು?

ಪ್ರೀತಿಯ ಕಿಚ್ಚಾ.. 2013-14ರಿಂದ ಸತತವಾಗಿ ಬಿಗ್ ಬಾಸ್ ರಿಯಾಲಿಟಿ ಶೋನ ನಿರೂಪಣೆಯ ಜವಾಬ್ದಾರಿಯನ್ನು ಅತ್ಯಂತ ಪ್ರೀತಿಯಿಂದ ನಿರ್ವಹಿಸಿರುವ ನಿಮಗೆ ನಮ್ಮ ಕಡೆಯಿಂದ ತುಂಬಾ ಪ್ರೀತಿ ಹಾಗೂ ಧನ್ಯವಾದಗಳು.

ಒಂದು ಕಾಲದಲ್ಲಿ ಬಿಗ್ ಬಾಸ್ ಶೋನಲ್ಲಿ ಅವಕಾಶ ಸಿಕ್ಕರೆ ಮುಂದಿನ ಜೀವನಕ್ಕೆ ಒಳ್ಳೆಯ ಅಡಿಪಾಯ ಸಿಗಲಿದೆ ಎಂಬ ಭಾವನೆ ಇತ್ತು. ಇಷ್ಟೂ ವರ್ಷಗಳಲ್ಲಿ ಎಷ್ಟೋ ವ್ಯಕ್ತಿಗಳನ್ನು ತಿದ್ದಿದ್ದೀರಿ. ಆದರೆ ಈ ಬಾರಿಯ ಬಿಗ್ ಬಾಸ್ ಅತಿರೇಕ, ಅಸಹ್ಯ.. ಅಸಭ್ಯ ನಡವಳಿಕೆ, ಕೆಟ್ಟ ಪದ ಬಳಕೆ ಎಲ್ಲವೂ ಅಸಹ್ಯ. ನೀವು ತಿದ್ದಲು ಸಾಕಷ್ಟು ಪ್ರಯತ್ನಿಸಿದ್ದೀರಿ' ಎಂದಿದ್ದಾರೆ.

ಇನ್ನು ಸಾಕು, ಕೊಳೆತು ನಾರುತ್ತಿದೆ

'ಆದರೆ ಇನ್ನು ಸಾಕು. ಇಂತಹ ಕೆಟ್ಟ ಮನಸ್ಥಿತಿಗಳನ್ನು ತಿದ್ದುವ ಸಲುವಾಗಿ ನಿಮ್ಮ ಅಮೂಲ್ಯ ವೃತ್ತಿ ಜೀವನದ ಸಮಯ ವ್ಯರ್ಥ ಮಾಡಬೇಡಿ. ಇಂತಹ ಕೊಳೆತ ಮನಸ್ಥಿತಿಗಳಿಗೆ ಪಾಠ ಹೇಳುವ ಸ್ಥಿತಿಯಲ್ಲಿ ನಾವು ನಿಮ್ಮನ್ನು ನೋಡಲು ಇಚ್ಛಿಸುವುದಿಲ್ಲ. ಅಂತರ, ಆತ್ಮವಿಲ್ಲದ ಮನುಷ್ಯರಲ್ಲದ ಮನುಷ್ಯರನ್ನ ತಿದ್ದಲು ನೀವು ಪ್ರಯತ್ನಿಸಬೇಡಿ. ಶೋ ಬಿಟ್ಟು ಹೊರ ಬನ್ನಿ' ಎಂದು ಮನವಿ ಮಾಡಿದ್ದಾರೆ.

Story image
Story image

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.