ಸಿನಿಮಾ ಸುದ್ದಿ

BBK 13: ಗಾನವಿ ಹೇಳಿಕೆಗೆ ನೊಂದು ಗಗನ್ ತಾಯಿಗೆ ತಾನೇ ಕ್ಷಮೆ ಕೇಳಿ ಕಣ್ಣೀರು ಹಾಕಿದ ಸುದೀಪ್

ಬಿಗ್‌ ಬಾಸ್‌ ಕನ್ನಡ ಸೀಸನ್‌ 13ರಲ್ಲಿ ಸ್ಪರ್ಧಿಗಳು ಹದ್ದು ಮೀರಿ ವರ್ತಿಸಿದ್ದಾರೆ. ಅಸಭ್ಯ ಮಾತುಗಳನ್ನಾಡಿದ್ದ ಸ್ಪರ್ಧಿಗಳಿಗೆ ಕಿಚ್ಚ ಸುದೀಪ್ ತೀವ್ರ ತರಾಟೆಗೆ ತೆಗೆದುಕೊಂಡರು. ಈ ವಾರ ನೀಡಲಾಗಿದ್ದ ರಾಕ್ಷಸರು-ಗಂಧರ್ವರು ಟಾಸ್ಕ್ ಅತ್ಯಂತ ಆಕ್ರಮಣಕಾರಿ ಹಾಗೂ ವೈಯಕ್ತಿಕ ದಾಳಿಗಳಿಗೆ ವೇದಿಕೆಯಾಗಿತ್ತು.

BBK 13: ಗಾನವಿ ಹೇಳಿಕೆಗೆ ನೊಂದು ಗಗನ್ ತಾಯಿಗೆ ತಾನೇ ಕ್ಷಮೆ ಕೇಳಿ ಕಣ್ಣೀರು ಹಾಕಿದ ಸುದೀಪ್
ಗಗನ್, ಗಾನವಿ, ಸುದೀಪ್
Published On :

ಬೆಂಗಳೂರು: ಬಿಗ್‌ ಬಾಸ್‌ ಕನ್ನಡ ಸೀಸನ್‌ 13ರಲ್ಲಿ ಸ್ಪರ್ಧಿಗಳು ಹದ್ದು ಮೀರಿ ವರ್ತಿಸಿದ್ದಾರೆ. ಅಸಭ್ಯ ಮಾತುಗಳನ್ನಾಡಿದ್ದ ಸ್ಪರ್ಧಿಗಳಿಗೆ ಇಂದು ಕಿಚ್ಚ ಸುದೀಪ್ ತೀವ್ರ ತರಾಟೆಗೆ ತೆಗೆದುಕೊಂಡರು. ಈ ವಾರ ನೀಡಲಾಗಿದ್ದ ರಾಕ್ಷಸರು ಮತ್ತು ಗಂಧರ್ವರು ಟಾಸ್ಕ್ ಅತ್ಯಂತ ಆಕ್ರಮಣಕಾರಿ ಹಾಗೂ ವೈಯಕ್ತಿಕ ದಾಳಿಗಳಿಗೆ ವೇದಿಕೆಯಾಗಿತ್ತು.

ಬಿಗ್ ಬಾಸ್ ರಿಯಾಲಿಟಿ ಶೋ ಸ್ಕ್ರಿಪ್ಟೆಡ್ ಎಂಬ ಪ್ರಶ್ನೆಯಿಂದ ಸುದೀಪ್ ಅವರು ಶೋ ಶುರು ಮಾಡಿದರು. ನಂತರ ಗಗನ್ ಚಿನ್ನಪ್ಪ ಮತ್ತು ತಾಂಡವ್ ನಡುವಿನ ಬಿಗ್ ಬಾಸ್ ಫೇವರಿಸಂ ಮಾಡುತ್ತಿದೆ ಎಂಬ ಹೇಳಿಕೆಗೆ ಸ್ಫಷ್ಟನೆ ಕೊಟ್ಟಿದ್ದು ಬಿಗ್ ಬಾಸ್ಸ್ಕ್ರಿಪ್ಟೆಡ್, ಫೇವರಿಸಂ ಅಲ್ಲ ಎಂಬುದನ್ನು ಸ್ಪರ್ಧಿಗಳ ಬಾಯಿಂದಲೇ ಕಕ್ಕಿಸಿದರು. ನಂತರ ಗಗನ್ ಕುಟುಂಬ ಹಾಗೂ ತಾಯಿ ವಿರುದ್ಧ ಗಾನವಿ ಹಗುರವಾಗಿ ಮಾತನಾಡಿದ್ದಕ್ಕೆ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಒಂದು ಹಂತದಲ್ಲಿ ಸುದೀಪ್ ಭಾವುಕರಾದರು. ಶೋನಲ್ಲಿ ಗಾನವಿ ಆಡಿದ ಮಾತಿಗೆ ಗಗನ್ ತಾಯಿಗೆ ಸುದೀಪ್ ಕ್ಷಮೆ ಕೇಳಿ ಕಣ್ಣೀರಿಟ್ಟರು.

ನಿಮ್ಮ ಅತಿರೇಕದ ವರ್ತನೆ ಇರಲಿ. ಆದರೆ ನಿಮ್ಮ ನಿಮ್ಮ ಮಧ್ಯೆ ವಾಕ್ಸಮರ ನಡೆಸಿ ಅದನ್ನು ಬಿಟ್ಟು ತಾಯಿ-ಕುಟುಂಬವನ್ನು ಎಳೆದು ತಂದಿರುವ ರೀತಿಗೆ ಕಿಚ್ಚ ಸುದೀಪ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಆಟದ ರೀತಿ ಬೇರೆ, ಆದರೆ ವೈಯಕ್ತಿಕವಾಗಿ ತಾಯಂದಿರನ್ನು ಹಾಗೂ ಕುಟುಂಬವನ್ನು ಹೀಯಾಳಿಸುವುದು ಎಷ್ಟು ಸರಿ ಎಂದು ಸ್ಪರ್ಧಿಗಳನ್ನು ತರಾಟೆಗೆ ತೆಗೆದುಕೊಂಡರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.