BBK 13: ಮೊದಲ ಪಂಚಾಯ್ತಿಯಲ್ಲಿ ಸ್ಪರ್ಧಿಗಳಿಗೆ ಫುಲ್ ಕ್ಲಾಸ್ ತೆಗೆದುಕೊಂಡ ಕಿಚ್ಚ! ಜಗ್ಗಿ ಕ್ಷಮೆ ಕೇಳಿದ ತಾಂಡವ್; ಗಗನ್ ಮುಖ ನೋಡಕ್ಕೆ ಆಗ್ತಿರಲಿಲ್ಲ!
ಜಗದೀಶ್ ಅವರೇ ನೀವು ಒಳಗಡೆ ಹೋಗಿರುವುದು ಸ್ಪರ್ಧಿಯಾಗಿ, ಮನೆಯ ಕೆಲಸದವರಾಗಿ ಅಲ್ಲ. ಹೋಗೇ - ಬಾರೆ ಅಂತ ಕರಿತಾರೆ ಜಗದೀಶ್ ಅವರನ್ನ ಅಂತ ತಾಂಡವ್ ಅವರು ಜಗದೀಶ್ ಅವರನ್ನು ಕರೆದಿರುವುದಕ್ಕೂ ಕಿಚ್ಚ ಸುದೀಪ್ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಬಿಗ್ ಬಾಸ್ ಕನ್ನಡದ 13ನೇ ಆವೃತ್ತಿಯ ಕಿಚ್ಚನ ಮೊದಲ ಪಂಚಾಯಿತಿ ಹಲವು ಘಟನೆಗಳಿಗೆ ಸಾಕ್ಷಿಯಾಗಿದೆ. ವೀಕ್ಷಕರ ನಿರೀಕ್ಷೆಯಂತೆಯೇ ಕಿಚ್ಚ ಸುದೀಪ್, ಗಗನ್-ತಾಂಡವ್ ಗೆ ಸಖತ್ ತರಾಟೆಗೆ ತೆಗೆದುಕೊಂಡಿದ್ದಾರೆ. ಅವರಿಬ್ಬರ
ಫ್ರೆಂಡ್‌ಶ್ಯಿಪ್ ಬಗ್ಗೆ ಮಾತನಾಡುತ್ತಾ, ಇವರಿಬ್ಬರನ್ನು ಲವ್ ಜೋಡಿಸ್ ಅಂತ ಕರೆದಿದ್ದಾರೆ. ಒಟ್ಟೊಟ್ಟಿಗೆ ನಾಮಿನೇಷನ್ ಬಗ್ಗೆ ಮಾತನಾಡುತ್ತೀರಿ, ಒಟ್ಟೊಟ್ಟಿಗೆ ಯಾರನ್ನ ಹೊರಗಡೆ ಕಳುಹಿಸಬೇಕು ಎನ್ನುವ ವಿಚಾರದ ಬಗ್ಗೆ ಮಾತನಾಡುತ್ತೀರಿ. ಯಾರಾದರೂ ನಾಮಿನೇಷನ್‌ನ ಡಿಸ್ಕಷನ್ ಮಾಡಿದ್ರೆ ಬಾಗಿಲು ಓಪನ್ ಆಗುತ್ತೆ, ಮನೆಗೆ ಕಳ್ಸತಾ ಇರ್ತೀವಿ ಅಂತ ಕಿಚ್ಚ ಸುದೀಪ್ ಅವರು ಎಚ್ಚರಿಕೆ ಕೊಟ್ಟಿದ್ದಾರೆ.
ಜಗ್ಗಿನ ಹೋಗೇ - ಬಾರೆ ಅಂತ ಕರಿಯುವುದಕ್ಕೆ ಸುದೀಪ್ ಗರಂ: ನಟ "ಜಗ್ಗಿ ಮಮ್ಮಿ' (ಜಗದೀಶ್) ಅವರನ್ನು ನಡೆಸಿಕೊಂಡಿರುವ ರೀತಿಗೂ ಕಿಚ್ಚ ಸುದೀಪ್ ಅವರು ಗರಂ ಆಗಿದ್ದಾರೆ. ಜಗದೀಶ್ ಅವರೇ ನೀವು ಒಳಗಡೆ ಹೋಗಿರುವುದು ಸ್ಪರ್ಧಿಯಾಗಿ, ಮನೆಯ ಕೆಲಸದವರಾಗಿ ಅಲ್ಲ. ಹೋಗೇ - ಬಾರೆ ಅಂತ ಕರಿತಾರೆ ಜಗದೀಶ್ ಅವರನ್ನ ಅಂತ ತಾಂಡವ್ ಅವರು ಜಗದೀಶ್ ಅವರನ್ನು ಕರೆದಿರುವುದಕ್ಕೂ ಕಿಚ್ಚ ಸುದೀಪ್ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಒಂದು ತಮಾಷೆಯಲ್ಲಿ ಆ ರೀತಿ ಕರೆದೆ ಅಂತ ತಾಂಡವ್ ರಾಮ್ ಅವರು ಸಮರ್ಥನೆ ಮಾಡಿಕೊಳ್ಳುವುದಕ್ಕೆ ಮುಂದಾದರು.
ಜಗ್ಗಿ ಕ್ಷಮಾಪಣೆಗೆ ಅರ್ಹರು: ಇದಕ್ಕೆ ರಿಯಾಕ್ಟ್ ಮಾಡಿದ ಸುದೀಪ್, ನೀವು ಇದನ್ನ ಜಗದೀಶ್ ಅವರಿಗೆ ಕೇಳಿದ್ರಾ ಇದರಲ್ಲಿ ತಮಾಷೆ ಇದ್ಯಾ ಅಂತ ಸುದೀಪ್ ಪ್ರಶ್ನಿಸಿದ್ದಾರೆ. ಅವರು ಫ್ಯಾಮಿಲಿ ಮ್ಯಾನ್.. ಅವರ ಫ್ಯಾಮಿಲಿಗೆ ಅವರು ಹೀರೋ ಸರ್ ಅಂತ ಸುದೀಪ್ ಹೇಳಿದ್ದಾರೆ. ಅಲ್ಲದೆ ಮುಂದುವರಿದು ಜಗದೀಶ್ ಅವರು ಕ್ಷಮಾಪಣೆಗೆ (He Deserve an Apology)ಅರ್ಹರು ಅಂತಲೂ ಹೇಳಿದ್ದಾರೆ. ಬಳಿಕ ಜಗ್ಗಿ ಬಳಿ ಬಂದು ತಾಂಡವ್ ಕ್ಷಮೆ ಕೋರಿದ್ದಾರೆ. ಹೀಗಾಗಿ ಈ ಎಪಿಸೋಡ್ ನಲ್ಲಿ ಕೊನೆಯವರೆಗೂ ತಾಂಡವ್ ಹಾಗೂ ಗಗನ್ ಮುಖ ನೋಡಕ್ಕೆ ಆಗ್ತಿರಲಿಲ್ಲ.
ವುಮನ್ ಕಾರ್ಡ್ ಸೀಸನ್ 13ನಲ್ಲಿ ಬೇಡ. ಇನ್ನೂ ವುಮನ್ ಕಾರ್ಡ್ ಇಲ್ಲಿ ವರ್ಕೌಟ್ ಆಗಲ್ಲ ಎಂದು ಕಿಚ್ಚ ಸುದೀಪ್ ಸ್ಪರ್ಧಿಗಳಿಗೆ ಹೇಳಿದ್ದಾರೆ. ಅಲ್ಲದೆ ಹುಡುಗಿಯರನ್ನು ಡಿಸ್‌ಕ್ರಿಮಿನೇಶನ್ ಮಾಡುತ್ತಿದ್ದಾರೆ ಎಂಬ ಭಾವನೆ ಕೆಲ ಮಹಿಳಾ ಸ್ಪರ್ಧಿಗಳಲ್ಲಿ ಇದೆ. ಅದನ್ನು ಅವರು ಹಲವು ಸಂದರ್ಭದಲ್ಲಿ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾತನಾಡುತ್ತಾ ವೈಷ್ಣವಿಯನ್ನು ಗೇಮ್‌ನಿಂದ ಹೊರಗಿಟ್ಟ ನೀವು ಮಹಿಳಾ ಡಿಸ್‌ಕ್ರಿಮಿನೇಶನ್ ಬಗ್ಗೆ ಮಾತನಾಡುವುದು ಎಷ್ಟು ಸರಿ ಎಂದು ಕ್ಲಾಸ್ ತೆಗೆದುಕೊಂಡರು.
ಕಾಮನ್ ಮ್ಯಾನ್ ಸಿಂಪತಿ ಕಾರ್ಡ್‌ಗೂ ಕತ್ತರಿ ಹಾಕಿದ ಕಿಚ್ಚ: ಅಗ್ನಿ ಪರೀಕ್ಷೆಯ ಮೂಲಕ ಬಿಗ್‌ಬಾಸ್ ಮನೆಗೆ ಬಂದವರು ತಾವು ಕಾಮನ್‌ರು ಎಂಬ ಸಿಂಪತಿ ಕಾರ್ಡ್ ಬಳಸುವುದಕ್ಕೆ ಕತ್ತರಿ ಹಾಕಿದ್ದಾರೆ . ಕನ್ನಡ ಜನತೆಯ ಪ್ರೀತಿ ಗಳಿಸಿ ಈ ಸ್ಟೇಜ್‌ಗೆ ಬಂದಿದ್ದೀರಿ. ಹೀಗಾಗಿ ಇಲ್ಲಿ ನಾವು ಸಾಮಾನ್ಯರು ಎಂಬ ಸಿಂಪತಿ ಕಾರ್ಡ್ ಬಳಸಬೇಡಿ ಎಂಬುವುದನ್ನ ಖಾರವಾಗಿ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



