ಸಿನಿಮಾ ಸುದ್ದಿ

Bigg Boss Kannada 13, Mid-week elimination: ಪ್ರಬಲ ಸ್ಪರ್ಧಿ ತಾಂಡವ್ ರಾಮ್ ಔಟ್; ಇದು ಅನ್ಯಾಯ- ವೀಕ್ಷಕರ ಆಕ್ರೋಶ..!

ಇದರಂತೆ ಜಗದೀಶ್‌, ಲಿಖಿತ್‌, ತಾಂಡವ್‌ ಹಾಗೂ ಸೌಂದರ್ಯ ಅವರ ಪೈಕಿ ಬಿಗ್‌ ಬಾಸ್‌ ಮನೆಯಿಂದ ತಾಂಡವ್‌ ಅವರು ಆಚೆ ಬಂದಿದ್ದಾರೆ. ಆ ಮೂಲಕ ಶಾಕಿಂಗ್‌ ಎಲಿಮಿನೇಷನ್‌ ಪ್ರಕ್ರಿಯೆ ನಡೆದಿದೆ.

Bigg Boss Kannada 13, Mid-week elimination: ಪ್ರಬಲ ಸ್ಪರ್ಧಿ ತಾಂಡವ್ ರಾಮ್ ಔಟ್; ಇದು ಅನ್ಯಾಯ- ವೀಕ್ಷಕರ ಆಕ್ರೋಶ..!
ತಾಂಡವ್ ರಾಮ್
Published On :

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 13ರ ಮನೆಯಲ್ಲಿ ಮತ್ತೊಂದು ದೊಡ್ಡ ಉಲ್ಟಾ-ಪಲ್ಟಾ ನಡೆದಿದೆ. ಪ್ರೇಕ್ಷಕರು ಹಾಗೂ ಮನೆಯ ಸದಸ್ಯರು ನಿರೀಕ್ಷಿಸದ ದೊಡ್ಡ ತಿರುವೊಂದರಲ್ಲಿ, ಕಿರುತೆರೆಯ ಜನಪ್ರಿಯ ನಟ ಹಾಗೂ ಕುಸ್ತಿಪಟು ತಾಂಡವ್ ರಾಮ್ ಅವರು ಬಿಗ್ ಬಾಸ್ ಮನೆಯಿಂದ ಮಿಡ್-ವೀಕ್ ಎಲಿಮಿನೇಷನ್ ಮೂಲಕ ಹೊರಬಿದ್ದಿದ್ದಾರೆ.

ಟಾಸ್ಕ್ ಗೆದ್ದಿದ್ದ ನಾಲ್ವರು ಸ್ಪರ್ಧಿಗಳು ಆಸಿಯಾ, ಕಾವ್ಯಾ, ಧನುಷ್ ಹಾಗೂ ಕಿರಣ್ ಶಾಸ್ತ್ರಿ ಜಗದೀಶ್‌, ಲಿಖಿತ್‌, ತಾಂಡವ್‌ ಹಾಗೂ ಸೌಂದರ್ಯ ಅವರ ಶೇ.50 ವೋಟನ್ನು ಪಡೆದು ಅಡ್ವಂಟೇಜ್‌ ಪಡೆದುಕೊಂಡಿದ್ದರು.

ಇದರಂತೆ ಜಗದೀಶ್‌, ಲಿಖಿತ್‌, ತಾಂಡವ್‌ ಹಾಗೂ ಸೌಂದರ್ಯ ಅವರ ಪೈಕಿ ಬಿಗ್‌ ಬಾಸ್‌ ಮನೆಯಿಂದ ತಾಂಡವ್‌ ಅವರು ಆಚೆ ಬಂದಿದ್ದಾರೆ. ಆ ಮೂಲಕ ಶಾಕಿಂಗ್‌ ಎಲಿಮಿನೇಷನ್‌ ಪ್ರಕ್ರಿಯೆ ನಡೆದಿದೆ.

ತಾಂಡವ್‌ ಅವರು ಹೋಗುತ್ತಿದ್ದಂತೆ ಅವರ ಆಪ್ತ ಸ್ನೇಹಿತ ಗಗನ್‌ ಸೇರಿದಂತೆ ಮನೆಯ ಇತರೆ ಸ್ನೇಹಿತರು ಆಘಾತಗೊಂಡು ಕಣ್ಣೀರಿಟ್ಟಿದ್ದಾರೆ.

ತಾಂಡವ್ ಅವರ ಅನಿರೀಕ್ಷಿತ ಎಲಿಮಿನೇಷನ್‌ಗೆ ಇಡೀ ಮನೆಯೇ ಕಣ್ಣೀರಿಟ್ಟಿದ್ದಾರೆ. ಗಗನ್‌ ʼಬಿಗ್‌ ಬಾಸ್‌ʼ ಇದನ್ನು ದಯವಿಟ್ಟು ಚೇಂಜ್‌ ಮಾಡಿ ಎಂದು ಕಣ್ಣೀರಿಟ್ಟು ಮನವಿ ಮಾಡಿದ್ದಾರೆ.

ಈ ಹಠಾತ್ ನಿರ್ಗಮನದ ನಿರ್ಧಾರದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ವೀಕ್ಷಕರು ಭಾರಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ದೈಹಿಕವಾಗಿ ಬಲಿಷ್ಠವಾಗಿದ್ದ ಮತ್ತು ಪ್ರಾಮಾಣಿಕವಾಗಿ ಆಡುತ್ತಿದ್ದ ಒಬ್ಬ ಉತ್ತಮ ಆಟಗಾರನನ್ನು ಇಷ್ಟು ಬೇಗ, ಅದೂ ಮಿಡ್-ವೀಕ್ ಟ್ವಿಸ್ಟ್ ಮೂಲಕ ಹೊರಹಾಕಿರುವುದು "ಅನ್ಯಾಯ" ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.

ಇನ್ನು ತಾಂಡವ್‌ ಅವರು ಪ್ರಬಲ ಸ್ಪರ್ಧಿಯಾಗಿದ್ದು, ಮತ್ತೆ ಮನೆಗೆ ಬರುತ್ತಾರೆ ಎನ್ನುವ ನಿರೀಕ್ಷೆಯೂ ವೀಕ್ಷಕರಲ್ಲಿ ಮೂಡತೊಡಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.