5 ಭಾಷೆಗಳಲ್ಲಿ Vettuvam ಸದ್ದು; ಕನ್ನಡ ಅವತರಣಿಕೆಗೆ ಕಿಚ್ಚ ಸುದೀಪ್ ಧ್ವನಿ; ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿದ ವಿಡಿಯೋ..!
ಅಪೋಕ್ಯಾಲಿಪ್ಟಿಕ್ ಹಿನ್ನೆಲೆಯ ‘ವೆಟ್ಟುವಂ’ ಸಿನಿಮಾದಲ್ಲಿ ಪ್ರಬಲ ಗುಂಪುಗಳು ಅಧಿಕಾರದ ನಿಯಂತ್ರಣಕ್ಕಾಗಿ ಪರಸ್ಪರ ಹೋರಾಟ ನಡೆಸುತ್ತವೆ. ತೀವ್ರ ಸಂಘರ್ಷಗಳು ಹಾಗೂ ಅನಿರೀಕ್ಷಿತ ತಿರುವುಗಳ ಮೂಲಕ ಕಥೆ ಮುಂದುವರಿಯಲಿದೆ.

ಭಾರೀ ಕುತೂಹಲ ಕೆರಳಿಸಿರುವ ನಿರ್ದೇಶಕ ಪಾ ರಂಜಿತ್ ಅವರ ಬಹುನಿರೀಕ್ಷಿತ ಆಕ್ಷನ್ ಥ್ರಿಲ್ಲರ್ ಸಿನಿಮಾ 'ವೆಟ್ಟುವಂ' (Vettuvam) ಚಿತ್ರದ ಕನ್ನಡ ಆವೃತ್ತಿಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಧ್ವನಿ ನೀಡಿದ್ದಾರೆ.
ಚಿತ್ರತಂಡ ಬಿಡುಗಡೆ ಮಾಡಿರುವ "ವರ್ಲ್ಡ್ ಆಫ್ ವೆಟ್ಟುವಂ" (World of Vettuvam) ಎಂಬ ವಿಶೇಷ ವೀಡಿಯೊದಲ್ಲಿ ಸುದೀಪ್ ಅವರ ಗಂಭೀರ ಹಾಗೂ ಖಡಕ್ ಧ್ವನಿ ಕೇಳುಗರನ್ನು ರೋಮಾಂಚನಗೊಳಿಸಿದ್ದು, ಕನ್ನಡಿಗರಲ್ಲಿ ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ.
ರಂಜಿತ್ ಅವರ ನೀಲಂ ಪ್ರೊಡಕ್ಷನ್ಸ್ ಹಾಗೂ ಲರ್ನ್ ಅಂಡ್ ಟೀಚ್ ಪ್ರೊಡಕ್ಷನ್ ಜಂಟಿಯಾಗಿ ನಿರ್ಮಿಸುತ್ತಿರುವ ಈ ಸಿನಿಮಾ ಅಧಿಕಾರಕ್ಕಾಗಿ ನಡೆಯುವ ಹೋರಾಟ, ಸಂಘರ್ಷಗಳು ಮತ್ತು ಬದಲಾಗುವ ಮೈತ್ರಿಗಳಿಂದ ಕೂಡಿದ ಅಪೋಕ್ಯಾಲಿಪ್ಟಿಕ್ ಜಗತ್ತಿನ ಹಿನ್ನೆಲೆಯಲ್ಲಿ ಸಾಗಲಿದೆ.
‘ವರ್ಲ್ಡ್ ಆಫ್ ವೆಟ್ಟುವಂ’ ಪರಿಚಯಾತ್ಮಕ ವಿಡಿಯೋವನ್ನು ಐದು ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆ ಮಾಡಲಾಗಿದೆ. ಆಯಾ ಭಾಷೆಯ ಅವತರಣಿಕೆಗಳಿಗೆ ಖ್ಯಾತ ನಟರು ಧ್ವನಿ ನೀಡಿದ್ದಾರೆ. ಕನ್ನಡ ಅವತರಣಿಕೆಗೆ ಕಿಚ್ಚ ಸುದೀಪ್ ಧ್ವನಿ ನೀಡಿದ್ದರೆ, ಹಿಂದಿಗೆ ಪಂಕಜ್ ತ್ರಿಪಾಠಿ, ತೆಲುಗಿಗೆ ರಾಣಾ ದಗ್ಗುಬಾಟಿ ಮತ್ತು ಮಲಯಾಳಂ ಅವತರಣಿಕೆಗೆ ಸೌಬಿನ್ ಶಾಹಿರ್ ಧ್ವನಿ ನೀಡಿದ್ದಾರೆ. ತಮಿಳು ಅವತರಣಿಕೆಗೆ ಸ್ವತಃ ಪಾ. ರಂಜಿತ್ ಧ್ವನಿ ನೀಡಿದ್ದಾರೆ.
ಅಪೋಕ್ಯಾಲಿಪ್ಟಿಕ್ ಹಿನ್ನೆಲೆಯ ‘ವೆಟ್ಟುವಂ’ ಸಿನಿಮಾದಲ್ಲಿ ಪ್ರಬಲ ಗುಂಪುಗಳು ಅಧಿಕಾರದ ನಿಯಂತ್ರಣಕ್ಕಾಗಿ ಪರಸ್ಪರ ಹೋರಾಟ ನಡೆಸುತ್ತವೆ. ತೀವ್ರ ಸಂಘರ್ಷಗಳು ಹಾಗೂ ಅನಿರೀಕ್ಷಿತ ತಿರುವುಗಳ ಮೂಲಕ ಕಥೆ ಮುಂದುವರಿಯಲಿದೆ.
ಅದ್ದೂರಿ ಆ್ಯಕ್ಷನ್ ದೃಶ್ಯಗಳನ್ನು ಒಳಗೊಂಡಿರುವ ಈ ಸಿನಿಮಾದಲ್ಲಿ ಭಾರತೀಯ ಸಾಂಪ್ರದಾಯಿಕ ಸಮರಕಲೆಗಳಾದ ಅಡಿಮುರೈ ಮತ್ತು ಮಲ್ಲಖಂಬ್‌ನಿಂದ ಸ್ಫೂರ್ತಿ ಪಡೆಯಲಾಗಿದೆ.
ಆ್ಯಕ್ಷನ್ ದೃಶ್ಯಗಳಲ್ಲಿ ಪರಿಣಾಮಕಾರಿಯಾಗಿ ಕಾಣಿಸಿಕೊಳ್ಳಲು ಚಿತ್ರದ ಪ್ರಮುಖ ಕಲಾವಿದರು ಈ ಸಮರಕಲೆಗಳಲ್ಲಿ ವಿಶೇಷ ತರಬೇತಿ ಪಡೆದಿದ್ದಾರೆ. ಆರ್ಯ, ದಿನೇಶ್, ಶಬೀರ್, ಶೋಭಿತಾ ಧುಲಿಪಾಲಾ ಮತ್ತು ಕಲೈಯರಸನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ರೂಪೇಶ್ ಶಾಜಿ ಛಾಯಾಗ್ರಹಣ, ಸೆಲ್ವ ಆರ್.ಕೆ. ಸಂಕಲನ ಹಾಗೂ ಎಸ್.ಎಸ್. ಮೂರ್ತಿ ಕಲಾ ನಿರ್ದೇಶನದ ಜವಾಬ್ದಾರಿ ನಿರ್ವಹಿಸಿದ್ದಾರೆ. ದಿಲೀಪ್ ಸುಬ್ಬರಾಯನ್ ಸಾಹಸ ದೃಶ್ಯಗಳನ್ನು ಸಂಯೋಜಿಸಿದ್ದು, ಜಿ.ವಿ. ಪ್ರಕಾಶ್ ಕುಮಾರ್ ಸಂಗೀತ ಸಂಯೋಜಿಸಿದ್ದಾರೆ.
‘ವೆಟ್ಟುವಂ’ ಸಿನಿಮಾ ತಮಿಳು, ಕನ್ನಡ, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ‘ವರ್ಲ್ಡ್ ಆಫ್ ವೆಟ್ಟುವಂ’ ಪ್ರಚಾರಾತ್ಮಕ ವಿಡಿಯೋ ಬಿಡುಗಡೆಯಾದ ಬಳಿಕ ಇದೀಗ ಚಿತ್ರ ತಂಡ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನ್ನು ಬಿಡುಗಡೆ ಮಾಡಲು ಸಜ್ಜಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



