ಸಿನಿಮಾ ಸುದ್ದಿ

ಜಹೀದ್ ಖಾನ್, ಸೋನಾಲ್ ಮೊಂಥೆರೋ ಅಭಿನಯದ 'ಬನಾರಸ್' ಟ್ರೈಲರ್ ಬಿಡುಗಡೆ

ನವ ನಾಯಕ ನಟ ಜಹೀದ್ ಖಾನ್ ಅಭಿನಯದ ಪ್ಯಾನ್ ಇಂಡಿಯಾ ಕನ್ನಡದ ಸಿನಿಮಾ ಬನಾರಸ್ ನ ಮೊದಲ ಅಧಿಕೃತ ಟ್ರೈಲರ್ ಬಿಡುಗಡೆಯಾಗಿದೆ. ಬ್ಯೂಟಿಫುಲ್ ಮನಸುಗಳು ಮತ್ತು ಬೆಲ್ ಬಾಟಮ್ ನಂತಹ ಚಿತ್ರಗಳಿಗೆ ಹೆಸರಾದ ಜಯತೀರ್ಥ ಈ ಸಿನಿಮಾದ ಕಥೆ ಬರೆದಿದ್ದು, ನಿರ್ದೇಶಿಸಿದ್ದಾರೆ.

ಜಹೀದ್ ಖಾನ್, ಸೋನಾಲ್ ಮೊಂಥೆರೋ ಅಭಿನಯದ 'ಬನಾರಸ್' ಟ್ರೈಲರ್ ಬಿಡುಗಡೆ
ಜಹೀದ್ ಖಾನ್, ಸೋನಾಲ್
Published On :

ಬೆಂಗಳೂರು: ನವ ನಾಯಕ ನಟ ಜಹೀದ್ ಖಾನ್ ಅಭಿನಯದ ಪ್ಯಾನ್ ಇಂಡಿಯಾ ಕನ್ನಡದ ಸಿನಿಮಾ ಬನಾರಸ್ ನ ಮೊದಲ ಅಧಿಕೃತ ಟ್ರೈಲರ್ ಬಿಡುಗಡೆಯಾಗಿದೆ. ಬ್ಯೂಟಿಫುಲ್ ಮನಸುಗಳು ಮತ್ತು ಬೆಲ್ ಬಾಟಮ್ ನಂತಹ ಚಿತ್ರಗಳಿಗೆ ಹೆಸರಾದ ಜಯತೀರ್ಥ ಈ ಸಿನಿಮಾದ ಕಥೆ ಬರೆದಿದ್ದು, ನಿರ್ದೇಶಿಸಿದ್ದಾರೆ.

ಜಹೀದ್ ಖಾನ್ ಮತ್ತು ಸೋನಾಲ್ ಮೊಂಥೆರೋ ನಾಯಕ, ನಟಿಯಾಗಿ ಅಭಿನಯಿಸಿರುವ ಈ ಸಿನಿಮಾವನ್ನು ಕಾಶಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿತ್ರೀಕರಿಸಿರುವುದಾಗಿ ವರದಿಯಾಗಿದೆ. ಇಡೀ ಚಿತ್ರವನ್ನು ಉತ್ತರ ಪ್ರದೇಶದಲ್ಲಿ ಚಿತ್ರೀಕರಿಸಿದ ಮೊದಲ ದಕ್ಷಿಣ ಭಾರತ ಸಿನಿಮಾ ಎನ್ನಲಾಗುತ್ತಿದೆ.

ಉಳಿದವರು ಕಂಡಂತೆ ಖ್ಯಾತಿಯ ಅಜನೀಶ್ ಲೋಕನಾಥ್ ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಸುಜಯ್ ಶಾಸ್ತ್ರೀ, ದೇವರಾಜ್, ಅಚ್ಯುತ್ ಕುಮಾರ್, ಸಪ್ನ ರಾಜ್ ಮತ್ತಿತರರ ತಾರಾಬಳಗವಿದೆ.

ಅದ್ವೈತ ಗುರುಮೂರ್ತಿ ಅವರ ಛಾಯಾಗ್ರಾಹವಿದೆ. ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂನಲ್ಲಿ ಚಿತ್ರವನ್ನು ಡಬ್ಬಿಂಗ್ ಮಾಡಲಾಗಿಗದೆ. ಮುಜಾಮಿಲ್ ಅಹ್ಮದ್ ಖಾನ್ ಅವರೊಂದಿಗೆ ತಿಲಕ್ ರಾಜ್ ನಿರ್ಮಿಸಿರುವ ಪ್ಯಾನ್ ಇಂಡಿಯಾ ಸಿನಿಮಾ ನವೆಂಬರ್ 4 ರಂದು ತೆರೆಗೆ ಅಪ್ಪಳಿಸಲಿದೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.