‘ಪ್ರೇಮದ ಊರಲಿ’ ಭರ್ಜರಿ ಕಲೆಕ್ಷನ್: ಬಾಕ್ಸ್ ಆಫೀಸ್ನಲ್ಲಿ ಬರೋಬ್ಬರಿ 39 ಕೋಟಿ ರೂ. ಗಳಿಕೆ!
ಸೆಪ್ಟೆಂಬರ್ 25ರಂದು ಕೇವಲ 45 ರಿಂದ 60 ಪ್ರದರ್ಶನಗಳೊಂದಿಗೆ ಆರಂಭವಾದ 'ಪ್ರೇಮದ ಊರಲಿ' ಸಿನಿಮಾ, ಪ್ರೇಕ್ಷಕರ ಭಾರಿ ಬೇಡಿಕೆಯಿಂದಾಗಿ 2ನೇ ವಾರದ ವೇಳೆಗೆ ಬರೋಬ್ಬರಿ 700ಕ್ಕೂ ಅಧಿಕ ಶೋಗಳನ್ನು ಪಡೆದುಕೊಂಡಿದೆ.

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಯಾವುದೇ ದೊಡ್ಡ ಆರ್ಭಟವಿಲ್ಲದೆ ಬಿಡುಗಡೆಯಾಗಿ, ಪ್ರೇಕ್ಷಕರ ಮೌತ್ ಪಬ್ಲಿಸಿಟಿಯಿಂದಲೇ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸುತ್ತಿರುವ 'ಪ್ರೇಮದ ಊರಲಿ' ಸಿನಿಮಾ 14ನೇ ದಿನದ ಕಲೆಕ್ಷನ್ನಲ್ಲಿ ಭಾರಿ ಜಿಗಿತ ಕಂಡಿದೆ.
ಸೆಪ್ಟೆಂಬರ್ 25ರಂದು ಕೇವಲ 45 ರಿಂದ 60 ಪ್ರದರ್ಶನಗಳೊಂದಿಗೆ ಆರಂಭವಾದ 'ಪ್ರೇಮದ ಊರಲಿ' ಸಿನಿಮಾ, ಪ್ರೇಕ್ಷಕರ ಭಾರಿ ಬೇಡಿಕೆಯಿಂದಾಗಿ 2ನೇ ವಾರದ ವೇಳೆಗೆ ಬರೋಬ್ಬರಿ 700ಕ್ಕೂ ಅಧಿಕ ಶೋಗಳನ್ನು ಪಡೆದುಕೊಂಡಿದೆ.
ರಂಗಾಯಣ ರಘು ಹಾಗೂ ಗೋವಿಂದೇ ಗೌಡ ನಟನೆಯ ಈ ಚಿತ್ರವು ದಿನದಿಂದ ದಿನಕ್ಕೆ ತನ್ನ ಪ್ರದರ್ಶನವನ್ನು ಹೆಚ್ಚಿಸಿಕೊಳ್ಳುತ್ತಾ, ಗಲ್ಲಾಪೆಟ್ಟಿಗೆಯಲ್ಲಿ ಕೋಟಿ ಕೋಟಿ ಹಣ ಬಾಚಿಕೊಳ್ಳುವ ಮೂಲಕ ಎಲ್ಲರ ಗಮನ ಸೆಳೆದಿದೆ.
ಪ್ರಸ್ತುತ ಈ ಚಿತ್ರವು ಒಟ್ಟು 39.05 ಕೋಟಿ ರೂಪಾಯಿಗಳಿಗೂ ಹೆಚ್ಚು ಕಲೆಕ್ಷನ್ ಮಾಡುವ ಮೂಲಕ ಸ್ಯಾಂಡಲ್ವುಡ್ನಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ.
ಸಿನಿಮಾವು ಬಿಡುಗಡೆಯಾದ ಕೇವಲ 14 ದಿನಗಳಲ್ಲಿ ಅಂದರೆ ಎರಡು ವಾರಗಳ ಒಳಗೆ ಬರೋಬ್ಬರಿ 39.05 ಕೋಟಿ ರೂ ಗಳಿಕೆ ಹಾಗೂ 33.47 ಕೋಟಿ ರೂ. ನಿವ್ವಳ ಗಳಿಕೆ ದಾಖಲಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



