ವಿದೇಶ

ಬಾರ್ಸಿಲೋನಾ ಉಗ್ರ ದಾಳಿ: ಸ್ಪೇನ್ ಪೊಲೀಸರಿಂದ ಇಬ್ಬರು ಶಂಕಿತ ಉಗ್ರರ ಬಂಧನ

ಬಾರ್ಸಿಲೋನಾ ನಗರದ ಮೇಲೆ ಭೀಕರ ದಾಳಿ ಮಾಡಿದ್ದ ಉಗ್ರರ ಪೈಕಿ ಇಬ್ಬರು ಉಗ್ರರನ್ನು ಬಂಧಿಸುವಲ್ಲಿ ಸ್ಪೇನ್ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಾರ್ಸಿಲೋನಾ ಉಗ್ರ ದಾಳಿ: ಸ್ಪೇನ್ ಪೊಲೀಸರಿಂದ ಇಬ್ಬರು ಶಂಕಿತ ಉಗ್ರರ ಬಂಧನ
ಬಾರ್ಸಿಲೋನಾ ಉಗ್ರ ದಾಳಿ
Published On :

ಬಾರ್ಸಿಲೋನಾ: ಬಾರ್ಸಿಲೋನಾ ನಗರದ ಮೇಲೆ ಭೀಕರ ದಾಳಿ ಮಾಡಿದ್ದ ಉಗ್ರರ ಪೈಕಿ ಇಬ್ಬರು ಉಗ್ರರನ್ನು ಬಂಧಿಸುವಲ್ಲಿ ಸ್ಪೇನ್ ಪೊಲೀಸರು ಯಶಸ್ವಿಯಾಗಿದ್ದಾರೆ.

ಲಾಸ್ ರಾಂಬ್ಲಾಸ್ ನಲ್ಲಿ ನಡೆದ ಭೀಕರ ಟ್ರಕ್ ದಾಳಿ ಬೆನ್ನಲ್ಲೇ ಉಗ್ರರ ಬೆನ್ನಟ್ಟಿದ್ದ ಸ್ಪೇನ್ ಪೊಲೀಸರು ಇದೀಗ ಇಬ್ಬರು ಶಂಕಿತ ಉಗ್ರರನ್ನು ಬಂಧಿಸಿದ್ದಾರೆ. ದಾಳಿಗೆ ಮೊದಲೇ ಸಕಲ ತಯಾರಿ ನಡೆಸಿಕೊಂಡು ಬಂದಿದ್ದ ಉಗ್ರರು ತಮ್ಮ  ಸೊಂಟಕ್ಕೆ ಬೆಲ್ಟ್ ಬಾಂಬ್ ಕಟ್ಟಿಕೊಂಡು ಬಂದಿದ್ದರಂತೆ. ಆದರೆ ಪೊಲೀಸರ ಚಾಕಚಕ್ಯತೆಯಿಂದಾಗಿ ಇಬ್ಬರು ಉಗ್ರರು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಮೂಲಗಳ ಪ್ರಕಾರ ಬಂಧಿತ ಉಗ್ರರು ಮೊರಾಕ್ಕೊ ಮತ್ತು ಮೆಲಿಲಾ  ಮೂಲದವರು ಎಂದು ತಿಳಿದುಬಂದಿದೆ.

ಉತ್ತರ ಸ್ಪೇನ್ ನಲ್ಲಿರುವ ಮೆಲಿಲಾದಲ್ಲಿ ಉತ್ತರ ಆಫ್ರಿಕನ್ ಪ್ರಜೆಗಳು ಹೆಚ್ಚಾಗಿ ವಾಸ ಮಾಡುತ್ತಿದ್ದು, ಇದೀಗ ಆ ಪ್ರದೇಶದ ಯುವಕರನ್ನು ಶಂಕೆಯಿಂದ ನೋಡುವಂತಾಗಿದೆ.

ದಾಳಿಯಲ್ಲಿ ಬೆಲ್ಜಿಯಂ ಮೂಲದ ನಾಗರೀಕರು ಕೂಡ ಬಲಿ: ಬೆಲ್ಜಿಯಂ ಉಪ ಪ್ರಧಾನಿ ಸ್ಪಷ್ಟನೆ
ಇನ್ನು ಟ್ರಕ್ ದಾಳಿ ವೇಳೆ ಸ್ಪೇನ್ ನಾಗರಿಕರೂ ಸೇರಿದಂತೆ ವಿಶ್ವದ ನಾನಾ ದೇಶಗಳ ನಾಗರಿಕರು ಕೂಡ ಗಾಯಗೊಂಡಿದ್ದು, ಲಾಸ್ ರಾಂಬ್ಲಾಸ್ ದಾಳಿಯಲ್ಲಿ ಬೆಲ್ಡಿಯಂ ನ ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಬೆಲ್ಜಿಯಂ ರಾಯಭಾರ  ಕಚೇರಿ ಸ್ಪಷ್ಟ ಪಡಿಸಿದೆ. ಈ ಬಗ್ಗೆ ಸ್ವತಃ ಬೆಲ್ಜಿಯಂ ಉಪ ಪ್ರಧಾನಿ ಡಿಡೈರ್ ರೇನ್ಡರ್ಸ್ ಅವರು ಟ್ವಿಟರ್ ನಲ್ಲಿ ಸ್ಪಷ್ಟನೆ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.