ಇಸಿಸ್

ISIS ಉಗ್ರ ಸಂಘಟನೆಗೆ ಭಾರೀ ಹೊಡೆತ: ಅಮೆರಿಕಾ-ನೈಜೀರಿಯಾ ಜಂಟಿ ಕಾರ್ಯಾಚರಣೆಯಲ್ಲಿ ಉನ್ನತ ಕಮಾಂಡರ್ ಅಬು-ಬಿಲಾಲ್ ಅಲ್-ಮಿನುಕಿ ಹತ್ಯೆ..!
ಹತ್ಯೆಯಾಗಿರುವ ಅಬು-ಬಿಲಾಲ್ ಅಲ್-ಮಿನುಕಿ ಇಸಿಸ್ ಉಗ್ರ ಸಂಘಟನೆಯ ಜಾಗತಿಕ ಎರಡನೇ ಕಮಾಂಡರ್ ಆಗಿದ್ದ. ಆಫ್ರಿಕಾದಲ್ಲಿ ಅಡಗಿ ಕುಳಿತಿದ್ದರೂ ನಾವು ಅವನ ಚಲನವಲನಗಳ ಮೇಲೆ ಕಣ್ಣಿದ್ದೆವು.

26/11 ಉಗ್ರ ರಾಣಾ ಮೇಲೆ ಹದ್ದಿನ ಕಣ್ಣು: ಭದ್ರಕೋಟೆಯಾಗಿ ಮಾರ್ಪಟ್ಟ NIA ಪ್ರಧಾನ ಕಚೇರಿ; ISI-LET ನಂಟು ಕುರಿತು ತೀವ್ರ ವಿಚಾರಣೆ
ಎನ್‌ಐಎ ಕಚೇರಿಯ ನೆಲಮಹಡಿಯಲ್ಲಿ ಆತನ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ, ವಿಚಾರಣೆ 3ನೇ ಮಹಡಿಯಲ್ಲಿ ನಡೆದಿದೆ. ದಿನದ 24 ಗಂಟೆಯೂ ಅಧಿಕಾರಿಗಳು ನಿಗಾವಹಿಸಿದ್ದಾರೆ.

ರಾಮೇಶ್ವರ ಕೆಫೆ ಸ್ಫೋಟ ಪ್ರಕರಣ: ಶಂಕಿತರ ವಿರುದ್ಧ NIA ಮತ್ತೊಂದು ಚಾರ್ಜ್‌ಶೀಟ್ ಸಲ್ಲಿಕೆ; ಇಸಿಸ್ ಜೊತೆ ನಂಟು ಬಹಿರಂಗ
ಬೆಂಗಳೂರಿನ ಎನ್ಐಎ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆಯಾಗಿದ್ದು, ಈ ಮೂಲಕ ಶಿವಮೊಗ್ಗ ಮಾದರಿ ಪ್ರಕರಣದ ಆರೋಪಿಗಳ ಪಟ್ಟಿ ಹತ್ತಕ್ಕೇರಿದಂತಾಗಿದೆ.

ಸ್ವಾತಂತ್ರ್ಯ ದಿನಾಚರಣೆಗೆ ಉಗ್ರರ ಕರಿನೆರಳು: ದೆಹಲಿಯಲ್ಲಿ ಹೆಚ್ಚಿದ ಭದ್ರತೆ, ಮೋಸ್ಟ್ ವಾಂಟೆಡ್ ISIS ಉಗ್ರನ ಬಂಧನ
ದೆಹಲಿ ಪೊಲೀಸ್ ವಿಶೇಷ ಘಟಕವು ಮೋಸ್ಟ್ ವಾಂಟೆಡ್ ಇಸಿಸ್ ಉಗ್ರ ರಿಜ್ವಾನ್ ಅಲಿಯನ್ನು ಬಂಧನಕ್ಕೊಳಪಡಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇಸಿಸ್ ‘ಟ್ವಿಟರ್’ ಖಾತೆ ನಿರ್ವಹಣೆ: ಯುವಕರ ನೇಮಕ ಮಾಡುತ್ತಿದ್ದ ಉಗ್ರನಿಗೆ 10 ವರ್ಷ ಜೈಲು ಶಿಕ್ಷೆ!
ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆ್ಯಂಡ್ ಸಿರಿಯಾ (ಐಸಿಸ್) ಟ್ವಿಟರ್ ಖಾತೆ ನಿರ್ವಾಹಕ ಉಗ್ರ ಮೆಹ್ದಿ ಮಸ್ರೂರ್ ಬಿಸ್ವಾಸ್‌ಗೆ 10 ವರ್ಷ ಜೈಲು ಶಿಕ್ಷೆ ವಿಧಿಸಿ ಎನ್‌ಐಎ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.

ಸಿಎಂ ಸಿದ್ದರಾಮಯ್ಯ ತಾಲಿಬಾನ್ ಸರ್ಕಾರ ನಡೆಸುತ್ತಿದ್ದಾರೆ: ಹೇಳಿಕೆಗೆ ಬದ್ಧ ಎಂದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಾಲಿಬಾನ್ ರೀತಿ ಸರ್ಕಾರ ನಡೆಸುತ್ತಿದ್ದಾರೆಂಬ ಹೇಳಿಕೆಗೆ ನಾನು ಬದ್ಧನಾಗಿದ್ದೇನೆಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಸೋಮವಾರ ಹೇಳಿದ್ದಾರೆ.

ಇಸಿಸ್ ಉಗ್ರರೊಂದಿಗೆ ನಂಟು: ಬೆಂಗಳೂರಿನಲ್ಲಿ ಓರ್ವ ಶಂಕಿತ ಭಯೋತ್ಪಾದಕ ಸೇರಿ 13 ಮಂದಿ ಬಂಧನ
ಇಸಿಸ್ ಭಯೋತ್ಪಾದನೆ ಸಂಚು ಪ್ರಕರಣ ಸಂಬಂಧ ತನಿಖೆ ಮುಂದುವರಿಸಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಕರ್ನಾಟಕ ಮತ್ತು ಮಹಾರಾಷ್ಟ್ರದ 44 ಸ್ಥಳಗಳಲ್ಲಿ ದಾಳಿ ನಡೆಸಿದ್ದು, ದಾಳಿ ವೇಳೆ ಬೆಂಗಳೂರಿನಲ್ಲಿ ಓರ್ವ ಶಂಕಿತ ಉಗ್ರ ಸೇರಿ 13 ಮಂದಿಯನ್ನು ಬಂಧನಕ್ಕೊಳಪಡಿಸಿದೆ.

ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಉಗ್ರ ತರಬೇತಿ ಪ್ರಕರಣ: ದೇಶದ 30 ಸ್ಥಳಗಳಲ್ಲಿ ಎನ್‌ಐಎ ದಾಳಿ, ಶೋಧ ಕಾರ್ಯಾಚರಣೆ
ಅರೇಬಿಕ್ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಉಗ್ರ ತರಬೇತಿ ಹಾಗೂ ನೇಮಕಾತಿ ಮಾಡಿಕೊಳ್ಳುತ್ತಿರುವ ಶಂಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ದೇಶದ 30 ಸ್ಥಳಗಳಲ್ಲಿ ಎನ್‌ಐಎ ದಾಳಿ ನಡೆಸಿದ್ದು, ತೀವ್ರ ಶೋಧ ನಡೆಸುತ್ತಿದೆ.

1500 ಇಸಿಸ್ ಉಗ್ರರ ಮಾರಣ ಹೋಮ ನಡೆಸಿದ "ಇರಾಕಿ ರ‍್ಯಾಂಬೋ"
ಇರಾಕ್ ನ ಓರ್ವ ಯೋಧ ಇದೀಗ ಭಯಾನಕ ಉಗ್ರ ಸಂಘಟನೆ ಇಸಿಸ್ ಸಂಘಟನೆಗೆ ತಲೆನೋವಾಗಿ ಪರಿಣಮಿಸಿದ್ದು, ಈ ವರೆಗೂ ಸುಮಾರು 1500 ಇಸಿಸ್ ಉಗ್ರರನ್ನು ಕೊಂದು ಹಾಕುವ ಮೂಲಕ ಸಾವಿನ ದೇವರಾಗಿದ್ದಾನೆ.

