ವಿಡಿಯೋ

ಪಾಸಿಬಲ್ ಚಿತ್ರದ ಟ್ರೈಲರ್

ಹೊಸಬರೆ ಸೇರಿ ಮಾಡಿರುವಂತ ಪಾಸಿಬಲ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ಸೂರ್ಯ ಮತ್ತು ಶ್ರಾವ್ಯ ಅಭಿನಯಿಸುತ್ತಿದ್ದು, ರಾಜ್ ಚಿತ್ರವನ್ನು ನಿರ್ದೇಶಿಸಿದ್ದಾರೆ.

ಪಾಸಿಬಲ್ ಚಿತ್ರದ ಟ್ರೈಲರ್
ಪೊಗರ್ದಸ್ತಾಗಿದೆ ಶಿವಣ್ಣನ 'ಟಗರು' ಚಿತ್ರದ ಫಸ್ಟ್ ಲುಕ್ ಟೀಸರ್

ಪೊಗರ್ದಸ್ತಾಗಿದೆ ಶಿವಣ್ಣನ 'ಟಗರು' ಚಿತ್ರದ ಫಸ್ಟ್ ಲುಕ್ ಟೀಸರ್

ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಮತ್ತು ನಿರ್ದೇಶಕ ದುನಿಯಾ ಸೂರಿ ಜೋಡಿಯ ಎರಡನೇ ಚಿತ್ರ ಟಗರು ಚಿತ್ರದ ಫಸ್ಟ್ ಲುಕ್ ಟೀಸರ್ ಬಿಡುಗಡೆಯಾಗಿದ್ಧು ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿದೆ. ಚಿತ್ರವನ್ನು ಕೆಪಿ ಶ್ರೀಕಾಂತ್ ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ಮಹೇಂದ್ರ ಸಿಂಹ ಛಾಯಾಗ್ರಹಣ, ಚರಣ್ ರಾಜ್ ಸಂಗೀತ ಸಂಯೋಜಿಸುತ್ತಿದ್ದಾರೆ.

ಚಿನ್ನ ಗೆದ್ದ ಖುಷಿಯಲ್ಲಿ ಕೋಚ್‌ರನ್ನೇ ಕೆಡವಿದ ಜಪಾನ್ ಕುಸ್ತಿಪಟು

ಚಿನ್ನ ಗೆದ್ದ ಖುಷಿಯಲ್ಲಿ ಕೋಚ್‌ರನ್ನೇ ಕೆಡವಿದ ಜಪಾನ್ ಕುಸ್ತಿಪಟು

ರಿಯೋ ಡಿ ಜನೈರೋ: ರಿಯೋ ಒಲಿಂಪಿಕ್ಸ್ ಮಹಿಳೆಯರ ವಿಭಾಗದ ಕುಸ್ತಿ ಪಂದ್ಯದಲ್ಲಿ ಚಿನ್ನ ಗೆದ್ದ ಜಪಾನ್ ನ ಕುಸ್ತಿಪಟು ರಿಸಾಕೋ ಕವಾಯಿ ಖುಷಿಯಲ್ಲಿ ತಮ್ಮ ಕೋಚ್ ಕುಜುಹಿಟೋ ಸಾಕೆ ಅವರನ್ನು ಕುಸ್ತಿ ಅಂಗಳದಲ್ಲಿ ಕುಸ್ತಿ ತಂತ್ರದಿಂದಲೇ ಕೆಡವಿ ಬಿಟ್ಟರು. ಒಂದು ಕ್ಷಣಕ್ಕೆ ಅಚ್ಚರಿ ಅನುಭವಿಸಿದ ಕೋಚ್ ಮತ್ತೆ ಎದ್ದು ನಿಲ್ಲುತ್ತಿದ್ದಂತೆ ಮತ್ತೋಮ್ಮೆ ಅವರನ್ನು ಕೆಡವಿ ಕುಸ್ತಿಯ ಗೆಲುವನ್ನು ಆಚರಿಸಿದರು.

ಜಲಪಾತದಲ್ಲಿ ಕೊಚ್ಚಿ ಹೋಗುತ್ತಿದ್ದ ತನ್ನ ಮರಿಗಳನ್ನು ರಕ್ಷಿಸಿದ ತಾಯಿ ಕರಡಿ

ಜಲಪಾತದಲ್ಲಿ ಕೊಚ್ಚಿ ಹೋಗುತ್ತಿದ್ದ ತನ್ನ ಮರಿಗಳನ್ನು ರಕ್ಷಿಸಿದ ತಾಯಿ ಕರಡಿ

ಅಮೆರಿಕದ ಅಲಸ್ಕಾದಲ್ಲಿರುವ ಕಟ್ಮಯ್ ನ್ಯಾಷನಲ್ ಪಾರ್ಕ್ ನಲ್ಲಿ ಜಲಪಾತದಲ್ಲಿ ಕೊಚ್ಚಿ ಹೋಗುತ್ತಿದ್ದ ಮೂರು ಮರಿಗಳನ್ನು ತಾಯಿ ಕರಡಿ ನೀರಿಗೆ ಇಳಿದು ಅವುಗಳನ್ನು ರಕ್ಷಿಸಿದೆ. ಜಲಪಾತದಲ್ಲಿ ತಾಯಿ ಕರಡಿ ಮೀನು ಹಿಡಿಯುವಾಗ ತನ್ನ ಮೂರು ಮರಿಗಳು ಒಂದಾದ ಮೇಲೆ ಒಂದರಂತೆ ತೇಲಿಕೊಂಡು ಬಂದಿವೆ. ಇದನ್ನು ಗಮನಿಸಿದ ತಾಯಿ ಕರಡಿ ತಕ್ಷಣ ಜಲಪಾತಕ್ಕೆ ದುಮುಕಿ ಮರಿಗಳನ್ನು ರಕ್ಷಿಸಿದ್ದು, ಈ ದೃಶ್ಯಾವಳಿಗಳು ಪಾರ್ಕ್ ನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಈ ಕರಡಿಗೆ ಮದರ್ಸ್ ಆಫ್ ದಿ ಇಯರ್ ಎಂದು ನಾಮಕರಣ ಮಾಡಲಾಗಿದೆ. ವಿಡಿಯೋ ಕೃಪೆ: Simon Black