ಜಲಪಾತದಲ್ಲಿ ಕೊಚ್ಚಿ ಹೋಗುತ್ತಿದ್ದ ತನ್ನ ಮರಿಗಳನ್ನು ರಕ್ಷಿಸಿದ ತಾಯಿ ಕರಡಿ
ಅಮೆರಿಕದ ಅಲಸ್ಕಾದಲ್ಲಿರುವ ಕಟ್ಮಯ್ ನ್ಯಾಷನಲ್ ಪಾರ್ಕ್ ನಲ್ಲಿ ಜಲಪಾತದಲ್ಲಿ ಕೊಚ್ಚಿ ಹೋಗುತ್ತಿದ್ದ ಮೂರು ಮರಿಗಳನ್ನು ತಾಯಿ ಕರಡಿ ನೀರಿಗೆ ಇಳಿದು ಅವುಗಳನ್ನು ರಕ್ಷಿಸಿದೆ. ಜಲಪಾತದಲ್ಲಿ ತಾಯಿ ಕರಡಿ ಮೀನು ಹಿಡಿಯುವಾಗ ತನ್ನ ಮೂರು ಮರಿಗಳು ಒಂದಾದ ಮೇಲೆ ಒಂದರಂತೆ ತೇಲಿಕೊಂಡು ಬಂದಿವೆ. ಇದನ್ನು ಗಮನಿಸಿದ ತಾಯಿ ಕರಡಿ ತಕ್ಷಣ ಜಲಪಾತಕ್ಕೆ ದುಮುಕಿ ಮರಿಗಳನ್ನು ರಕ್ಷಿಸಿದ್ದು, ಈ ದೃಶ್ಯಾವಳಿಗಳು ಪಾರ್ಕ್ ನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಈ ಕರಡಿಗೆ ಮದರ್ಸ್ ಆಫ್ ದಿ ಇಯರ್ ಎಂದು ನಾಮಕರಣ ಮಾಡಲಾಗಿದೆ. ವಿಡಿಯೋ ಕೃಪೆ: Simon Black
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

