ವಿಡಿಯೋ

ಕೊಹ್ಲಿ ಜಿಮ್ ಪಾಟ್ನರ್ ಯಾರು ಗೊತ್ತೆ...ಈ ವಿಡಿಯೋ ನೋಡಿ ತಿಳಿಯುತ್ತೆ!

ಟೀಂ ಇಂಡಿಯಾ ತಂಡದಲ್ಲಿ ಸದಾ ಫಿಟ್ನೆಸ್ ಆಗಿರುವ ಆಟಗಾರ ಎಂದರೆ ಅದು ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ. ಕೊಹ್ಲಿ ಜಿಮ್ ಪಾಟ್ನರ್ ಯಾರು ಎಂದು ತಿಳಿದಿದ್ದೀರಾ. ಅದೇ ಈ ನಾಯಿ ಮರಿ. ತಮ್ಮ ಪ್ರೀತಿಯ ನಾಯಿ ಮರಿಯೊಂದಿಗೆ ವಿಡಿಯೋ ಒಂದನ್ನು ಮಾಡಿ ವಿರಾಟ್ ಇನ್‌ಸ್ಟಾಗ್ರಾಮ್‌ ನಲ್ಲಿ ಅಪ್ ಲೋಡ್ ಮಾಡಿದ್ದು ಇದೀಗ ವೈರಲ್ ಆಗಿದೆ.

ಕೊಹ್ಲಿ ಜಿಮ್ ಪಾಟ್ನರ್ ಯಾರು ಗೊತ್ತೆ...ಈ ವಿಡಿಯೋ ನೋಡಿ ತಿಳಿಯುತ್ತೆ!
ಶೃಂಗಸಭೆಯಲ್ಲಿ ಚೀನಾ ಅಧ್ಯಕ್ಷರನ್ನು ಕಡೆಗಣಿಸಿ ಮೋದಿಗೆ ಒಬಾಮ ಹಸ್ತಲಾಘವ

ಶೃಂಗಸಭೆಯಲ್ಲಿ ಚೀನಾ ಅಧ್ಯಕ್ಷರನ್ನು ಕಡೆಗಣಿಸಿ ಮೋದಿಗೆ ಒಬಾಮ ಹಸ್ತಲಾಘವ

ಚೀನಾದಲ್ಲಿ ನಡೆದ ಜಿ20 ಶೃಂಗ ಸಭೆಯ ವೇಳೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರನ್ನು ಚೀನಾದ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರು ಸ್ವಾಗತಿಸಲು ಮುಂದಾದಾಗ ಕ್ಸಿ ಜಿನ್ ಪಿಂಗ್ ರನ್ನು ಕಡೆಗಣಿಸಿದ ಒಬಾಮಾ ಸಾಲಿನ ಕೊನೆಯಲ್ಲಿ ನಿಂತಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಬಳಿಗೆ ಹೋಗಿ ಆಲಂಗಿಸಿಕೊಂಡರು. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್‌ನಲ್ಲಿ ಕಾರಿನ ಮೇಲೆ ಸಿಂಹ ದಾಳಿ

ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್‌ನಲ್ಲಿ ಕಾರಿನ ಮೇಲೆ ಸಿಂಹ ದಾಳಿ

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಸಫಾರಿಯಲ್ಲಿ ಕಾರಿನ ಮೇಲೆ ಸಿಂಹಗಳು ದಾಳಿ ನಡೆಸಿವೆ. ಪ್ರವಾಸಿಗರಿದ್ದ ಇನೋವಾ ಕಾರಿನ ಮೇಲೆ ಸಿಂಹಗಳು ದಾಳಿ ಮಾಡಿವೆ. ಕಾರಿನ ಬಾಗಿಲುಗಳನ್ನು ಭದ್ರವಾಗಿ ಹಾಕಿಕೊಂಡಿದ್ದರಿಂದ ಯಾವುದೇ ತೊಂದರೆ ಸಂಭವಿಸಿಲ್ಲ. ಈ ಘಟನೆ ಸೆಪ್ಟೆಂಬರ್ 5ರಂದು ನಡೆದಿದ್ದು ಮತ್ತೊಂದು ಕಾರಿನಲ್ಲಿದ್ದ ಪ್ರವಾಸಿಗರು ಈ ದೃಶ್ಯಗಳನ್ನು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ.