ವಿಡಿಯೋ

ಹಾಟ್ 'ಬೇಫಿಕರ್' ಟ್ರೈಲರ್‌ಗೆ ಪಡ್ಡೆ ಹುಡುಗರು ಫಿದಾ

ಬಾಲಿವುಡ್ ನಟ ರಣವೀರ್ ಸಿಂಗ್ ಹಾಗೂ ವಾಣಿ ಕಪೂರ್ ಅಭಿನಯಿಸಿರುವ ಬೇಫಿಕರ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಟ್ರೈಲರ್ ನಲ್ಲಿ ರಣವೀರ್ ಹಾಗೂ ವಾಣಿ ಹಾಟ್ ಹಾಟ್ ಆಗಿ ಕಾಣಿಸಿಕೊಂಡಿದ್ದು ಪಡ್ಡೆ ಹುಡುಗರ ನಿದ್ದೆಗೆಡಿಸಿದೆ. ಚಿತ್ರವನ್ನು ಆದಿತ್ಯ ಚೋಪ್ರಾ ನಿರ್ದೇಶಿಸಿದ್ದಾರೆ.

ಹಾಟ್ 'ಬೇಫಿಕರ್' ಟ್ರೈಲರ್‌ಗೆ ಪಡ್ಡೆ ಹುಡುಗರು ಫಿದಾ
ಕೆಣಕಿದ ವಿದೇಶಿ ರೆಸ್ಲರ್‌‌‌ಗಳನ್ನು ಥಳಿಸಿದ ಗ್ರೇಟ್ ಖಲಿ

ಕೆಣಕಿದ ವಿದೇಶಿ ರೆಸ್ಲರ್‌‌‌ಗಳನ್ನು ಥಳಿಸಿದ ಗ್ರೇಟ್ ಖಲಿ

ಭಾರತದಲ್ಲಿ ಆಯೋಜಿಸಿದ್ದ ರೆಸ್ಲಿಂಗ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ವಿದೇಶಿ ರೆಸ್ಲರ್ ಗಳು ಬಂದಿದ್ದರು. ಈ ವೇಳೆ ಕಾರಣಾಂತರಗಳಿಂದ ಪಂದ್ಯಾವಳಿ ರದ್ದಾಗಿತ್ತು. ಇದಕ್ಕೆ ಖಲಿಯೇ ಕಾರಣ ಎಂದು ತಿಳಿಸಿದ ವಿದೇಶಿ ರೆಸ್ಲರ್ ಗಳು ಜಲಂಧರ್ನಲ್ಲಿ ಗ್ರೇಟ್ ಖಲಿ ನಡೆಸುತ್ತಿರುವ ರೆಸ್ಲಿಂಗ್ ಅಕಾಡೆಮಿಗೆ ನುಗ್ಗಿ ದಾಂಧಲೆ ನಡೆಸಿದ್ದರು. ಈ ವಿಷಯ ತಿಳಿಯುತ್ತಲೇ ಆಕ್ರೋಶಗೊಂಡ ಖಲಿ ವಿದೇಶಿ ರೆಸ್ಲರ್ ಗಳು ತಂಗಿದ್ದ ಹೊಟೇಲ್ ಗೆ ನುಗ್ಗಿ ಮನಬಂದಂತೆ ಥಳಿಸಿದ್ದಾರೆ. ಇದೆಲ್ಲವೂ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸ್ವಚ್ಛ ಭಾರತಕ್ಕೆ ಸಾಥ್; ಖಾಲಿ ಬಾಟಲಿಗಳನ್ನು ಕಸದ ತೊಟ್ಟಿಗೆ ಹಾಕಿದ ಕೊಹ್ಲಿ

ಸ್ವಚ್ಛ ಭಾರತಕ್ಕೆ ಸಾಥ್; ಖಾಲಿ ಬಾಟಲಿಗಳನ್ನು ಕಸದ ತೊಟ್ಟಿಗೆ ಹಾಕಿದ ಕೊಹ್ಲಿ

ಪ್ರಧಾನಿ ನರೇಂದ್ರ ಮೋದಿ ಅವರ ಸ್ವಚ್ಛತಾ ಅಭಿಯಾನಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಮಧ್ಯೆ ಗಣ್ಯರು ಸ್ವಚ್ಛತಾ ಅಭಿಯಾನದಲ್ಲಿ ಭಾಗಿಯಾಗಿದ್ದಾರೆ. ಇತ್ತೀಚೆಗಷ್ಟೇ ಟೀಂ ಇಂಡಿಯಾದ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ತಮ್ಮ ಸುತ್ತಮುತ್ತಲಿನ ಪರಿಸರವನ್ನು ಶುಚಿಯಾಗಿಟ್ಟುಕೊಳ್ಳುವ ಸಲುವಾಗಿ ಮೈದಾನದಲ್ಲಿ ಬಿದ್ದಿದ್ದ ನೀರಿನ ಬಾಟಲಿಗಳನ್ನು ಕಸದ ತೊಟ್ಟಿಗೆ ಹಾಕಿದರು.

ರಾಜಹಂಸ ಚಿತ್ರದ ಟೀಸರ್

ರಾಜಹಂಸ ಚಿತ್ರದ ಟೀಸರ್

ಪುಟ್ಟಗೌರಿ ಮದುವೆ ಧಾರವಾಹಿಯ ಗೌರಿ ಪಾತ್ರದ ಮೂಲಕ ಪ್ರೇಕ್ಷಕ ವರ್ಗ ರೂಪಿಸಿಕೊಂಡಿರುವ ರಂಜನಿ ರಾಘವನ್ ಹಾಗೂ ಜೋಕಾಲಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ಗೌರಿಶಿಖರ್ ಅಭಿನಯದ ರಾಜಹಂಸ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಜಡೇಕುಮಾರ್ ಹಂಪಿ ಅವರು ನಿರ್ದೇಶಿಸಿದ್ದು, ಚಿತ್ರದಲ್ಲಿ ಹಿರಿಯ ನಟ ಶ್ರೀಧರ್, ಬಿಸಿ ಪಾಟೀಲ್, ಯಮುನ ಅಭಿನಯಿಸಿದ್ದಾರೆ.