ವಿಡಿಯೋ

ಉಪ್ಪು ಹುಳಿ ಖಾರದಲ್ಲೂ 360 ಡಿಗ್ರಿ ವರ್ಚುಯಲ್ ವಿಡಿಯೋ ಸಾಂಗ್

ನೃತ್ಯ ನಿರ್ದೇಶಕರಿಂದ, ನಿರ್ದೇಶಕನಾಗಿ ಭಡ್ತಿ ಪಡೆದಿರುವ ಇಮ್ರಾನ್ ಸರ್ದಾರಿಯಾ ತಮ್ಮ ಮುಂದಿನ ಸಿನೆಮಾ 'ಉಪ್ಪು ಹುಳಿ ಖಾರ' ಸಿನೆಮಾದಲ್ಲಿ 'ಗಲ್ ಗಲ್ ಗಲ್ ಎನುತಿದೆ' ಹಾಡನ್ನು ೩೬೦ ಡಿಗ್ರಿ ವರ್ಚುಯಲ್ ರಿಯಾಲಿಟಿ ಕ್ಯಾಮರಾದಲ್ಲಿ ಚಿತ್ರೀಕರಿಸಿದ್ದಾರೆ. ಮುಂಬೈನಿಂದ ತಂದಿರುವ ಈ ಕ್ಯಾಮರಾದಲ್ಲಿ ೧೦-೧೨ ವಿಭಿನ್ನ ಕ್ಯಾಮರಾಗಳಿದ್ದು, ಎಲ್ಲ ಕೋನದಿಂದಲೂ ಒಂದೇ ಸಮಯಕ್ಕೆ ದ್ರಶ್ಯಗಳು ಚಿತ್ರೀಕರಣಗೊಳ್ಳುತ್ತದೆ. ಈ ಹಾಡಿನಲ್ಲಿ ಮಾಲಾಶ್ರೀ, ಅನುಶ್ರೀ, ಜಯಶ್ರೀ, ಮಾಷ, ಧನಂಜಯ್, ಶಶಿ ಮತ್ತು ಶರತ್ ಹೆಜ್ಜೆ ಹಾಕಿದ್ದಾರಂತೆ.

ಉಪ್ಪು ಹುಳಿ ಖಾರದಲ್ಲೂ 360 ಡಿಗ್ರಿ ವರ್ಚುಯಲ್ ವಿಡಿಯೋ ಸಾಂಗ್
5 ವರ್ಷಕ್ಕೆ ಕ್ರಿಕೆಟ್ ಬ್ಯಾಟ್ ಹಿಡಿದು ಮೈದಾನಕ್ಕೀಳಿದ ಬಾಲಕ...ವೈರಲ್ ವಿಡಿಯೋ

5 ವರ್ಷಕ್ಕೆ ಕ್ರಿಕೆಟ್ ಬ್ಯಾಟ್ ಹಿಡಿದು ಮೈದಾನಕ್ಕೀಳಿದ ಬಾಲಕ...ವೈರಲ್ ವಿಡಿಯೋ

ವಿಶ್ವ ಕ್ರಿಕೆಟ್ ಇತಿಹಾಸದಲ್ಲೇ ಮೊದಲ ಬಾರಿಗೆ 5 ವರ್ಷದ ಬಾಲಕನೋರ್ವ ಪ್ಯಾಡ್ ಕಟ್ಟಿ ಮೈದಾನಕ್ಕಿಳಿದು ಬ್ಯಾಟ್ ಬೀಸಿದ್ದಾನೆ. ರುದ್ರ ಪ್ರತಾಪ್ ಸಿಂಗ್ ದೆಹಲಿಯ ಅಂಡರ್-14 ಕ್ರಿಕೆಟ್ ತಂಡದಲ್ಲಿ ಆಯ್ಕೆಯಾಗಿದ್ದು 14 ವರ್ಷದ ಆಟಗಾರರ ಜತೆ ಆಡುತ್ತಿದ್ದಾನೆ. ಸದ್ಯ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ದಿವಂಗತ ಬಾಲಮುರಳಿಕೃಷ್ಣ ಹಾಡಿದ ನಿತ್ಯಹಸಿರಿನ 'ಮುತ್ತಿನ ಹಾರ' ಹಾಡು

ದಿವಂಗತ ಬಾಲಮುರಳಿಕೃಷ್ಣ ಹಾಡಿದ ನಿತ್ಯಹಸಿರಿನ 'ಮುತ್ತಿನ ಹಾರ' ಹಾಡು

ಖ್ಯಾತ ಕರ್ನಾಟಕ ಸಂಗೀತ ಗಾಯಕ ಡಾ. ಎಂ ಬಾಲಮುರಳಿಕೃಷ್ಣ ನಮ್ಮನ್ನಗಲಿದ್ದಾರೆ. ಅವರು ಕನ್ನಡ ಚಲನಚಿತ್ರ ರಂಗಕ್ಕೆ ನೀಡಿದ ಕೊಡುಗೆಯು ಅಪಾರ. ಸಂಧ್ಯಾರಾಗ, ಹಂಸಗೀತೆ ಮುಂತಾದ ಸಂಗೀತ ಪ್ರಧಾನ ಚಿತ್ರಗಳಿಗೆ ಜೀವ ತುಂಬಿದವರು ಅವರು. ಅವರು ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ 'ಮುತ್ತಿನ ಹಾರ' ಸಿನಿಮಾಗಾಗಿ ಹಾಡಿದ ಈ ಹಾಡು ಕನ್ನಡಿಗರ ಮನಸ್ಸಿನಲ್ಲಿ ನಿತ್ಯ ಹಸಿರಾಗಿ ಉಳಿದಿದೆ.

'ಉಪ್ಪು ಹುಳಿ ಖಾರ' ೩೬೦ ಡಿಗ್ರಿ ಪ್ರಚಾರ ಹಾಡು

'ಉಪ್ಪು ಹುಳಿ ಖಾರ' ೩೬೦ ಡಿಗ್ರಿ ಪ್ರಚಾರ ಹಾಡು

ಇಮ್ರಾನ್ ಸರ್ದಾರಿಯಾ ನಿರ್ದೇಶನದ 'ಉಪ್ಪು ಹುಳಿ ಖಾರ' ಸಿನೆಮಾದ ಈ ಪ್ರಚಾರ ಹಾಡಿಗೆ ವಿಶೇಷ ೩೬೦ ಡಿಗ್ರಿ ವರ್ಚುಯಲ್ ಕ್ಯಾಮರಾ ಬಳಸಲಾಗಿದೆ. ಕನ್ನಡ ಚಿತ್ರರಂಗದಲ್ಲಿ ಇದೆ ಎರಡನೇ ಬಾರಿಗೆ ಈ ಕ್ಯಾಮರಾ ಬಳಸಲಾಗಿದೆ ಎನ್ನಲಾಗುತ್ತಿದೆ. ಇದನ್ನು ಪರಿಣಾಮಕಾರಿಯಾಗಿ ನೋಡಲು ವಿ ಆರ್ ಗ್ಲಾಸ್ ಬಳಸಿ ನೋಡಬೇಕು ಎನ್ನುತ್ತದೆ ಚಿತ್ರತಂಡ.

ವೈರಲ್ ಆಯ್ತು 'ಎಲ್ಲಿದ್ದೀರಾ ಯಶ್' ಅಭಿಮಾನಿಗಳ ಸಾಂಗ್ ವಿಡಿಯೋ

ವೈರಲ್ ಆಯ್ತು 'ಎಲ್ಲಿದ್ದೀರಾ ಯಶ್' ಅಭಿಮಾನಿಗಳ ಸಾಂಗ್ ವಿಡಿಯೋ

ರಾಕಿಂಗ್ ಸ್ಟಾರ್ ಯಶ್ ಅವರನ್ನು ಅನಾವಶ್ಯಕವಾಗಿ ಎಳೆದು ತರುತ್ತಿದ್ದ ಮಾಧ್ಯಮಗಳು ಪ್ರತಿ ಸಾರಿ ಎಲ್ಲಿದ್ದೀರಾ ಯಶ್ ಎಂದು ಪ್ರಶ್ನೆ ಮಾಡುತ್ತಿದ್ದವು. ಇದೀಗ ಯಶ್ ಅಭಿಮಾನಿಗಳು ಎಲ್ಲಿದ್ದೀರಾ ಯಶ್ ಎಂಬ ಹಾಡೊಂದನ್ನು ಮಾಡಿ ಯೂಟ್ಯೂಬ್ ಗೆ ಅಪ್ ಲೋಡ್ ಮಾಡಿದ್ದಾರೆ. ಈ ಹಾಡು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋ ಕೃಪೆ: ವಿವೇಕ್ ಗೌಡ

2000 ಮುಖಬೆಲೆಯ ನೋಟಿನ ಗುಣಮಟ್ಟ ತಿಳಿಯಬೇಕೆ; ಈ ವಿಡಿಯೋ ನೋಡಿ!

2000 ಮುಖಬೆಲೆಯ ನೋಟಿನ ಗುಣಮಟ್ಟ ತಿಳಿಯಬೇಕೆ; ಈ ವಿಡಿಯೋ ನೋಡಿ!

500-1000 ಮುಖಬೆಲೆಯ ನೋಟುಗಳ ಚಲಾವಣಿ ರದ್ದುಗೊಳಿಸಿರುವ ಕೇಂದ್ರ ಸರ್ಕಾರ ಇದೀಗ 2 ಸಾವಿರ ಮುಖಬೆಲೆಯ ನೋಟುಗಳನ್ನು ಚಲಾವಣೆಗೆ ಬಿಟ್ಟಿದೆ. ಈ ಮಧ್ಯೆ ಆಕರ್ಷಕವಾಗಿರುವ 2000 ರುಪಾಯಿ ನೋಟಿನ ಜತೆ ಜನರ ಸೆಲ್ಫಿ ಕ್ರೇಜ್ ಜಾಸ್ತಿಯಾಗಿದ್ದರೆ. ಕೆಲವರು ನೋಟಿನ ಗುಣಮಟ್ಟ ತಿಳಿಯುವ ಸಲುವಾಗಿ ನಾನಾ ಬಗೆಯ ಪರೀಕ್ಷೆಗಳನ್ನು ಮಾಡುತ್ತಿದ್ದಾರೆ. ನೋಟಿನ ಗುಣಮಟ್ಟ ತಿಳಿಯಬೇಕಾದರೆ ಈ ವಿಡಿಯೋ ನೋಡಿ.