ವಿಡಿಯೋ

ಸಿಕ್ರೆಟ್ ಸೂಪರ್ ಸ್ಟಾರ್ ಹಿಂದಿ ಸಿನೆಮಾ ಟೀಸರ್

ಗಾಯಕಿಯಾಗುವ ಕನಸು ಹೊತ್ತ ೧೪ ವರ್ಷದ ಬಾಲಕಿಯ ಕಥೆ ಇರುವ 'ಸಿಕ್ರೆಟ್ ಸೂಪರ್ ಸ್ಟಾರ್' ಸಿನೆಮಾದ ಟೀಸರ್ ಬಿಡುಗಡೆಯಾಗಿದೆ. ಅಮೀರ್ ಖಾನ್ ಮತ್ತು ಕಿರಣ್ ರಾವ್ ನಿರ್ಮಾಣದ ಈ ಸಿನೆಮಾದಲ್ಲಿ ಜೈರಾ ವಾಸಿಂ, ಮೆಹೆರ್ ವಿಜ್, ರಾಜ್ ಅರುಣ್, ಅಮಿರ್ ಖಾನ್ ನಟಿಸಿದ್ದಾರೆ.

ಸಿಕ್ರೆಟ್ ಸೂಪರ್ ಸ್ಟಾರ್ ಹಿಂದಿ ಸಿನೆಮಾ ಟೀಸರ್
ಆಶಿಕಿ-2 ಜೋಡಿ ಆದಿತ್ಯ-ಶ್ರದ್ಧಾ ಅಭಿನಯದ ಓಕೆ ಜಾನು ಚಿತ್ರದ ಟ್ರೈಲರ್

ಆಶಿಕಿ-2 ಜೋಡಿ ಆದಿತ್ಯ-ಶ್ರದ್ಧಾ ಅಭಿನಯದ ಓಕೆ ಜಾನು ಚಿತ್ರದ ಟ್ರೈಲರ್

ಆಶಿಕಿ-2 ಚಿತ್ರ ಖ್ಯಾತಿಯ ಆದಿತ್ಯ ರಾಯ್ ಮತ್ತು ನಟಿ ಶ್ರದ್ಧಾ ಕಪೂರ್ ಅಭಿನಯದ ಓಕೆ ಜಾನು ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಶಾದ್ ಅಲಿ ನಿರ್ದೇಶನದ ಚಿತ್ರವನ್ನು ಕರಣ್ ಜೋಹಾರ್ ನಿರ್ಮಾಣ ಮಾಡಿದ್ದಾರೆ. ಟ್ರೈಲರ್ ನಲ್ಲಿ ಇಬ್ಬರು ಶೃಂಗಾರ ಸನ್ನಿವೇಶಗಳಲ್ಲಿ ಕಾಣಿಸಿಕೊಂಡಿದ್ದು ಸಿನಿಮಾ ರಸಿಕರಲ್ಲಿ ಕುತೂಹಲ ಕೆರಳಿಸಿದೆ.

ವಾರ್ ಫಾರ್ ದಿ ಪ್ಲಾನೆಟ್ ಆಫ್ ದಿ ಏಪ್ಸ್ ಚಿತ್ರದ ಟ್ರೈಲರ್

ವಾರ್ ಫಾರ್ ದಿ ಪ್ಲಾನೆಟ್ ಆಫ್ ದಿ ಏಪ್ಸ್ ಚಿತ್ರದ ಟ್ರೈಲರ್

ಪ್ಲಾನೆಟ್ ಆಫ್ ದಿ ಏಪ್ಸ್ ಸರಣಿಯ ಮೂರನೇ ಭಾಗ ಇದೀಗ ತೆರೆಗೆ ಬರಲು ಸಿದ್ಧವಾಗಿದ್ದು ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ವಾರ್ ಫಾರ್ ದಿ ಪ್ಲಾನೆಟ್ ಆಫ್ ದಿ ಏಪ್ಸ್ ಶೀರ್ಷಿಕೆ ಹೊಂದಿರುವ ಈ ಚಿತ್ರವನ್ನು ಡಾನ್ ಆಫ್ ದಿ ಪ್ಲಾನೆಟ್ ಆಫ್ ದಿ ಏಪ್ಸ್ ಚಿತ್ರದ ನಿರ್ದೇಶಕ ಮ್ಯಾಟ್ ರೀವ್ಸ್ ನಿರ್ದೇಶಿಸಿದ್ದಾರೆ. ಚಿತ್ರ 2017ಕ್ಕೆ ತೆರೆಕಾಣಲಿದೆ.

ಸಿಂಪಲ್ ಸುನಿ'ರ ಆಪರೇಶನ್ ಅಲಮೇಲಮ್ಮ ಚಿತ್ರದ ಟೀಸರ್

ಸಿಂಪಲ್ ಸುನಿ'ರ ಆಪರೇಶನ್ ಅಲಮೇಲಮ್ಮ ಚಿತ್ರದ ಟೀಸರ್

ಯೂಟರ್ನ್ ಚಿತ್ರ ಖ್ಯಾತಿಯ ನಟಿ ಶ್ರದ್ಧಾ ಶ್ರೀನಾಥ್ ಹಾಗೂ ನಟ ರಿಶಿ ಅಭಿನಯದ ಸಿಂಪಲ್ ಸುನಿ ನಿರ್ದೇಶನದ ಆಪರೇಶನ್ ಅಲಮೇಲಮ್ಮ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಈ ಚಿತ್ರದ ಟೀಸರ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಚಿತ್ರವನ್ನು ಸ್ಟಾರ್ ಫಾಬ್ ಹಾಗೂ ಸೂನಿ ಸಿನಿಮಾಸ್ ಜತೆಯಾಗಿ ನಿರ್ಮಾಣ ಮಾಡುತ್ತಿದ್ದಾರೆ.