ಜಾಕಿಚಾನ್ ಅಭಿನಯದ ಕುಂಗ್ ಫು ಯೋಗ ಚಿತ್ರದ ಟ್ರೈಲರ್ಮಾರ್ಷಲ್ ಆರ್ಟ್ಸ್ ಸೂಪರ್ ಸ್ಟಾರ್ ಜಾಕಿಚಾನ್ ನಟಿಸಿರುವ ಕುಂಗ್ ಫು ಯೋಗ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ಭಾರತದ ಕಲಾವಿದರಾದ ಸೋನು ಸೂದ್ ಮತ್ತು ದಿಶಾ ಪಂಟಾಣಿ ಕಾಣಿಸಿಕೊಂಡಿದ್ದಾರೆ. ಚಿತ್ರ 2017ಕ್ಕೆ ಬಿಡುಗಡೆಯಾಗಲಿದೆ.
ರಂಗೂನ್ ಚಿತ್ರದ ಟ್ರೈಲರ್ಬಾಲಿವುಡ್ ನಟಿ ಕಂಗನಾ ರಣಾವತ್ ಮತ್ತು ಶಾಹಿದ್ ಕಪೂರ್ ಅಭಿನಯದ ರಂಗೂನ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ವಿಶಾಲ್ ಭಾರದ್ವಜ್ ನಿರ್ದೇಶಿಸಿದ್ದಾರೆ. ಚಿತ್ರ ಫೆಬ್ರವರಿ 24ರಂದು ಬಿಡುಗಡೆಯಾಗಲಿದೆ.
ಲೀ ಸಿನೆಮಾದ ಟ್ರೇಲರ್ಸುಮಂತ್ ಶೈಲೇಂದ್ರ ಮತ್ತು ನಭಾ ನಟೇಶ್ ಮುಖ್ಯ ಪಾತ್ರಗಳಲ್ಲಿ ನಟಿಸಿರುವ, ಎಚ್ ಎಂ ಶ್ರೀನಂದನ್ ಬರೆದು ನಿರ್ದೇಶಿಸಿರುವ 'ಲೀ' ಸಿನೆಮಾ ಜನವರಿ ೧೩ ಕ್ಕೆ ಬಿಡುಗಡೆಯಾಗಲಿದೆ.
ಆ ದಿನಗಳು ಚೇತನ್ ಅಭಿನಯದ ನೂರೊಂದು ನೆನಪು ಚಿತ್ರದ ಟೀಸರ್ಆ ದಿನಗಳು ಚೇತನ್ ಅಭಿನಯದ ನೂರೊಂದು ನೆನಪು ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ಮೇಗನಾ ರಾಜ್, ರಾಜವರ್ಧನ್, ಯಶ್ ಶೆಟ್ಟಿ ಅಭಿನಯಿಸಿದ್ದಾರೆ. ಚಿತ್ರವನ್ನು ಕುಮರೇಶನ್ ನಿರ್ದೇಶಿಸಿದ್ದು ಸುರಜ್ ದೇಸಾಯಿ ಮತ್ತು ಮನೀಶ್ ದೇಸಾಯಿ ನಿರ್ಮಿಸಿದ್ದಾರೆ.
ನಾನೇ ನೆಕ್ಸ್ಟ್ ಸಿಎಂ ಚಿತ್ರದ ಟ್ರೈಲರ್ರಾಗಿಣಿ ದ್ವಿವೇದಿ ಅಭಿನಯದ ನಾನೇ ನೆಕ್ಸ್ಟ್ ಸಿಎಂ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಮುಸಂಜೆ ಮಹೇಶ್ ನಿರ್ದೇಶಿಸಿದ್ದು ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದಾರೆ.
ತಂದೆ-ಮಗಳ ಅವಿನಾಭಾವ ಸಂಬಂಧ; ಪುಷ್ಪಕ ವಿಮಾನ ಚಿತ್ರದ ಟ್ರೈಲರ್ಸ್ಯಾಂಡಲ್ವುಡ್ ನಟ ರಮೇಶ್ ಅರವಿಂದ್ ಅವರ 100ನೇ ಚಿತ್ರ ಪುಷ್ಪಕ ವಿಮಾನ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ನವ ನಿರ್ದೇಶಕ ಎಸ್ ರವೀಂದ್ರನಾಥ್ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ರಮೇಶ್ ಅವರಿಗೆ ಮಗಳಾಗಿ ಯುವಿನ ಪಾರ್ಥವಿ ಕಾಣಿಸಿಕೊಂಡಿದ್ದು, ರಚಿತ ರಾಮ್ ಮತ್ತು ಜೂಹಿ ಚಾವ್ಲ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ಲೂಸ್ ಮಾದ ಯೋಗಿ ಅಭಿನಯದ ದುನಿಯಾ-2 ಟೀಸರ್ ಬಿಡುಗಡೆದುನಿಯಾ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ಲೂಸ್ ಮಾದ ಯೋಗಿ ಇದೀಗ ದುನಿಯಾ-2 ಚಿತ್ರದಲ್ಲಿ ಅಭಿನಯಿಸುತ್ತಿದ್ದು ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಟೀಸರ್ ನಲ್ಲಿ ಯೋಗಿಯ ಗೆಟಪ್ ಹೇಗಿರಲಿದೆ ಎಂಬುದರ ಒಂದು ಝಲಕ್ ಇದೆ. ಚಿತ್ರವನ್ನು ಹರಿ ಎಂಬುವರು ನಿರ್ದೇಶಿಸುತ್ತಿದ್ದಾರೆ. ಯೋಗಿಗೆ ನಾಯಕಿಯಾಗಿ ಹಿತಾ ಚಂದ್ರಶೇಖರ್ ಸಾಥ್ ನೀಡಲಿದ್ದಾರೆ.
ಬಹುನಿರೀಕ್ಷಿತ 'ರಾಜಕುಮಾರ' 2ನೇ ಟೀಸರ್ ಬಿಡುಗಡೆಮಿಸ್ಟರ್ ಅಂಡ್ ಮಿಸ್ಸಸ್ ರಾಮಾಚಾರಿ ಖ್ಯಾತಿಯ ನಿರ್ದೇಶಕ ಸಂತೋಷ್ ಆನಂದರಾಮ್ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಜೋಡಿಯ ರಾಜಕುಮಾರ ಚಿತ್ರದ 2ನೇ ಟೀಸರ್ ಬಿಡುಗಡೆಯಾಗಿದೆ. ಚಿತ್ರದಲ್ಲಿನ ಕಲಾವಿದರ ಇಂಟ್ರಡಕ್ಷನ್ ಸೀನ್ ಗಳು ಟೀಸರ್ ನಲ್ಲಿದೆ.
ಎದುರಾಳಿಯನ್ನು 48 ಸೆಕೆಂಡ್ನಲ್ಲಿ ನೆಲಕ್ಕೆ ಕೆಡವಿದ ಕಿಕ್ ಬಾಕ್ಸರ್ಅಮೆರಿಕದ ಲಾಸ್ ವೆಗಾಸ್ ನಲ್ಲಿ ನಡೆದ ಪ್ರತಿಷ್ಠಿತ ಯುಎಫ್ಸಿ ಪ್ರಶಸ್ತಿ ಕಾದಾಟದಲ್ಲಿ ಬ್ರೆಜಿಲ್ ನ ಅಮಂಡಾ ನ್ಯೂನ್ಸ್ ಅಮೆರಿಕದ ಮಹಿಳಾ ಮಾರ್ಷಲ್ ಆರ್ಟ್ಸ್ ಸ್ಪರ್ಧಿ ರೋಡಾ ರೂಸಿಯನ್ನು ಕೇವಲ 48 ಸೆಕೆಂಡ್ ನಲ್ಲಿ ಸೋಲಿಸಿದರು.
ಭೀಕರ ಅಪಘಾತಕ್ಕೆ ಸಿಲುಕಬೇಕಿದ್ದ ಮಕ್ಕಳನ್ನು ಸಿನಿಮಾ ಸ್ಟೈಲ್‌ನಲ್ಲಿ ಕಾಪಾಡಿದ ತಂದೆಇಂಡೋನೇಷಿಯಾದ ಜಂಬಿ ನಗರದಲ್ಲಿ ಬೈಕ್ ಮೆಕ್ಯಾನಿಕ್ ತಮ್ಮ ಗ್ಯಾರೇಜಿನಲ್ಲಿ ಬೈಕ್ ರಿಪೇರಿ ಮಾಡುತ್ತಿದ್ದಾಗ ಅವರ ಮಕ್ಕಳಿಬ್ಬರು ಗ್ಯಾರೇಜ್ ಮುಂದೆ ಆಡುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಇನ್ನೇನು ಮಕ್ಕಳಿಗೆ ಗುದ್ದಬೇಕು ಅಷ್ಟರಲ್ಲಿ ತಂದೆ ಕ್ಷಣಮಾತ್ರದಲ್ಲಿ ಮಕ್ಕಳಿಬ್ಬರನ್ನು ತಬ್ಬಿ ಹಿಂದಕ್ಕೆ ಪಲ್ಟಿ ಹೊಡೆದು ಇಂತಿಷ್ಟು ಗಾಯವಾಗದಂತೆ ಮಕ್ಕಳನ್ನು ಕಾಪಾಡಿ ಸೂಪರ್ ತಂದೆ ಎನಿಸಿಕೊಂಡಿದ್ದಾರೆ.