ಮನರಂಜನೆ

ನೋಡಿ ಸ್ವಾಮಿ ನಾವಿರೋದ್ ಹೀಗೆ: ಶಂಕರನಾಗ್ ಅವರ ಅಪರೂಪದ ಸ್ಟೇಜ್ ವಿಡಿಯೋ

ಕನ್ನಡ ಚಿತ್ರರಂಗ ಕಂಡ ಮಹಾನ್ ಕ್ರಿಯಾಶೀಲ ವ್ಯಕ್ತಿ ಹಾಗೂ ಅತ್ಯದ್ಭುತ ನಟ ಕಮ್ ನಿರ್ದೇಶಕ. ಅವರಿಗೆ ಇಂದು 61ನೇ ಜನ್ಮದಿನ. ಶಂಕರನಾಗ್ ಮರೆಯಾಗಿ 25 ವರ್ಷಗಳೇ ಕಳೆದರು ಅವರ ನೆನಪು ಮಾತ್ರ ನಮ್ಮನ್ನು ಇನ್ನು ಕಾಡುತ್ತಲೇ ಇದೆ. 1982ರಲ್ಲಿ ಜಯನಗರದ ಕಾಸ್ಮೋಪಾಲಿಟನ್ ಕ್ಲಬ್ ನಲ್ಲಿ ಶಂಕರ್ ನಾಗ್ ನೀಡಿದ್ದ ಸ್ಟೇಜ್ ಶೋ ವಿಡಿಯೋವೊಂದನ್ನು ಅವರ ಸ್ಮರಣಾರ್ಥ ಇಲ್ಲಿ ಹಾಕಲಾಗಿದೆ.

ನೋಡಿ ಸ್ವಾಮಿ ನಾವಿರೋದ್ ಹೀಗೆ: ಶಂಕರನಾಗ್ ಅವರ ಅಪರೂಪದ ಸ್ಟೇಜ್ ವಿಡಿಯೋ
ಶಾರುಕ್ ಖಾನ್ 'ಫ್ಯಾನ್' ಟೀಸರ್

ಶಾರುಕ್ ಖಾನ್ 'ಫ್ಯಾನ್' ಟೀಸರ್

ಇತ್ತೀಚೆಗಷ್ಟೇ ೫೦ ನೆಯ ವಸಂತಕ್ಕೆ ಕಾಲಿಟ್ಟ ಬಾಲಿವುಡ್ ಬಾದ್ ಶಃ ಅವರ 'ಫ್ಯಾನ್' ಚಲನಚಿತ್ರಕ್ಕೆ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ. ಮುಂದಿನ ವರ್ಷ ಏಪ್ರಿಲ್ ಗೆ ಬಿಡುಗಡೆಯಾಗಲಿರುವ ಈ ಸಿನೆಮಾದ ಮೊದಲ ಟೀಸರ್ ಬಿಡುಗಡೆಯಾಗಿದ್ದು, ಒಂದು ವಾರದ ಅವಧಿಯಲ್ಲಿ ೩೮ ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಣೆಯಾಗಿರುವುದು ವಿಶೇಷ. ಮನೀಶ್ ಶರ್ಮಾ ನಿರ್ದೇಶನದ ಈ ಚಿತ್ರ ಯಶ್ ಫಿಲಂಸ್ ಬ್ಯಾನರ್ ನಡಿ ನಿರ್ಮಾಣವಾಗುತ್ತಿದೆ.

ಆಸ್ಕರ್ ಸ್ಪರ್ಧೆಯಲ್ಲಿರುವ c/o ಫುಟ್ ಪಾತ್-೨ ಟ್ರೇಲರ್

ಆಸ್ಕರ್ ಸ್ಪರ್ಧೆಯಲ್ಲಿರುವ c/o ಫುಟ್ ಪಾತ್-೨ ಟ್ರೇಲರ್

ಯುವ ನಿರ್ದೇಶಕ ಕಿಶನ್ ನಿರ್ದೇಶನದ ಕನ್ನಡ ಚಲನಚಿತ್ರ 'ಕೇರ್ ಆಫ್ ಪುಟ್ ಪಾತ್-೨' ಆಸ್ಕರ್ ಸ್ಪರ್ಧೆಗೆ ಲ್ಯಾಟರಲ್ ಪ್ರವೇಶ ಪಡೆದಿರುವುದು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ತೆಲುಗು ಮತ್ತು ಹಿಂದಿಗೂ ಡಬ್ ಆಗಿರುವ ಈ ಸಿನೆಮಾದ ಟ್ರೇಲರ್ ಈಗ ಬಿಡುಗಡೆಯಾಗಿದೆ. ಅಮೆರಿಕಾಕ್ಕೆ ಹಾರಿರುವ ಕಿಶನ್ ಆಸ್ಕರ್ಸ್ ಗೆದ್ದು ತಂದರೆ ವಿಮಾನ ನಿಲ್ದಾಣದಿಂದ ಮೆರವಣಿಗೆಯಲ್ಲಿ ಕರೆತರಲಾಗುವುದು ಎಂದು ಸಾ ರಾ ಗೋವಿಂದು ಹೇಳಿರುವುದು ವಿಶೇಷ!

'ಬಾಜಿರಾವ್ ಮಸ್ತಾನಿ' ಸಿನೆಮಾದ ದಿವಾನಿ ಮಸ್ತಾನಿ ಹಾಡಿನ ವಿಡಿಯೋ

'ಬಾಜಿರಾವ್ ಮಸ್ತಾನಿ' ಸಿನೆಮಾದ ದಿವಾನಿ ಮಸ್ತಾನಿ ಹಾಡಿನ ವಿಡಿಯೋ

ಮರಾಠಿ ರಾಜನೊಬ್ಬನ ಪ್ರೇಮಕಥೆ ಆಧಾರಿತ ಐತಿಹಾಸಿಕ ಸಿನೆಮಾ 'ಬಾಜಿರಾವ್ ಮಸ್ತಾನಿ' ಸಿನೆಮಾದ ನಿರ್ದೇಶಕ ಸಂಜಯ್ ಲೀಲಾ ಭನ್ಸಾಲಿ. ವೈಭವಯುತ ಸೆಟ್ ಹಾಕುವುದರಲ್ಲಿ ಪರಿಣಿತರಾದ ಸಂಜಯ್ ಈ ಸಿನೆಮಾಗೆ ಸಂಗೀತವನ್ನು ಕೂಡ ನಿರ್ದೇಶಿಸಿದ್ದಾರೆ. ಈ ಸಿನೆಮಾದ ಹಾಡೊಂದರಲ್ಲಿ ದೀಪಿಕಾ ಪಡುಕೋಣೆ ಹೆಜ್ಜೆ ಹಾಕಿರುವುದನ್ನು ಇಲ್ಲಿ ನೋಡಬಹುದು. ನೆನ್ನೆಯಷ್ಟೇ ಬಿಡುಗಡೆಯಾದ ಈ ವಿಡಿಯೋವನ್ನು ೧ ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿರುವುದು ಕುತೂಹಲ.