ಮನರಂಜನೆ

ಗೀತಾ ಬ್ಯಾಂಗಲ್ ಸ್ಟೋರ್ ಚಿತ್ರದ ಟ್ರೈಲರ್

ಬಹುತೇಕ ಹೊಸ ಪ್ರತಿಭೆಗಳೇ ನಟಿಸಿರುವ ಗೀತಾ ಬ್ಯಾಂಗಲ್ ಸ್ಟೋರ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ತನ್ನ ಮೇಕಿಂಗ್ ಮೂಲಕವೇ ನಿರೀಕ್ಷೆ ಹೆಚ್ಚಿಸಿದೆ. ಚಿತ್ರವನ್ನು ಮಂಜು ಮಿತ್ರಾ ಅವರು ನಿರ್ದೇಶಿಸಿದ್ದು, ಸಿ ಕೆಂಪರಾಜು ಅವರು ನಿರ್ಮಾಣ ಮಾಡುತ್ತಿದ್ದಾರೆ. ಇನ್ನು ಚಿತ್ರಕ್ಕೆ ವಿ ಮನೋಹರ್ ಅವರು ಸಂಗೀತ ನೀಡಿದ್ದಾರೆ.

ಗೀತಾ ಬ್ಯಾಂಗಲ್ ಸ್ಟೋರ್ ಚಿತ್ರದ ಟ್ರೈಲರ್
ಲವ್ ಯು ಆಲಿಯಾ ಸಿನೆಮಾ ಟ್ರೇಲರ್

ಲವ್ ಯು ಆಲಿಯಾ ಸಿನೆಮಾ ಟ್ರೇಲರ್

ಬಹುತಾರಗಣದ ಇಂದ್ರಜಿತ್ ಲಂಕೇಶ್ ನಿರ್ದೇಶಕದ 'ಲವ್ ಯು ಆಲಿಯಾ' ಸಿನೆಮಾದ ಟ್ರೇಲರ್ ಬಿಡುಗಡೆಯಾಗಿದೆ. ರವಿಚಂದ್ರನ್, ಚಂದನ್, ಭೂಮಿಕಾ ಮುಖ್ಯಪಾತ್ರದಲ್ಲಿರುವ ಈ ಸಿನೆಮಾದಲ್ಲಿ ಬಾಲಿವುಡ್ ತಾರೆ ಸನ್ನಿ ಲಿಯೋನ್ ಕೂಡ ಕಾಣಿಸಿಕೊಂಡಿರುವುದು ವಿಶೇಷ. ಸನ್ನಿ ಲಿಯೋನ್ ಜೊತೆ ಹಾಡೊಂದಕ್ಕೆ ಹೆಜ್ಜೆ ಹಾಕಿರುವುದು ಮಜಾ ಟಾಕೀಸ್ ಖ್ಯಾತಿಯ ಸೃಜನ್.

ಐರಾವತದಲ್ಲಿ ದರ್ಶನ್ ಖಡಕ್ ಪೊಲೀಸ್ ಅವತಾರ: ಟ್ರೇಲರ್ ಬಿಡುಗಡೆ

ಐರಾವತದಲ್ಲಿ ದರ್ಶನ್ ಖಡಕ್ ಪೊಲೀಸ್ ಅವತಾರ: ಟ್ರೇಲರ್ ಬಿಡುಗಡೆ

ಈ ಹಿಂದೆ ಅಯ್ಯ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದ ದರ್ಶನ್ ಮತ್ತೆ ಐರಾವತ ಚಿತ್ರದಲ್ಲಿ ಖಡಕ್ ಪೊಲೀಸ್ ಅವತಾರದಲ್ಲಿ ಮಿಂಚಿದ್ದಾರೆ. ಚಿತ್ರದಲ್ಲಿ ರಥ ಬಂದ್ರೆ ಗಾಳಿ ಬೀಸುತ್ತೆ, ಐರಾವತ ಬಂದ್ರೆ ಬಿರುಗಾಳಿ ಬೀಸುತ್ತೆ ಎಂಬ ಖಡಕ್ ಡೈಲಾಗ್ ಗಳಿವೆ. ಐರಾವತ ಚಿತ್ರದ ಅಧಿಕೃತ ಟ್ರೇಲರ್ ಬಿಡುಗಡೆಯಾಗಿದ್ದು, ಅಭಿಮಾನಿಗಳಲ್ಲಿ ನಿರೀಕ್ಷೆ ಮೂಡಿಸಿದೆ.

ಉಪ್ಪಿ2 ಚಿತ್ರದಲ್ಲಿ ಉಪ್ಪಿ ಡಿಫರೆಂಟ್ ಸ್ಟೈಲ್

ಉಪ್ಪಿ2 ಚಿತ್ರದಲ್ಲಿ ಉಪ್ಪಿ ಡಿಫರೆಂಟ್ ಸ್ಟೈಲ್

ಸ್ಯಾಂಡಲ್ ವುಡ್ ನಲ್ಲಿ ಭಾರೀ ನಿರೀಕ್ಷೆ ಮೂಡಿಸಿರುವ ಉಪೇಂದ್ರ ನಿರ್ದೇಶನದ ಉಪ್ಪಿ2 ಚಿತ್ರ ಆಗಸ್ಟ್ 14 ರಂದು ರಾಜ್ಯಾದಂತ್ಯ ಬಿಡುಗಡೆಯಾಗುತ್ತಿದೆ. ಚಿತ್ರಮಂದಿರಗಳ ಮುಂದೆ ಉಲ್ಟಾ ಕಟ್ ಔಟ್ ಗಳನ್ನು ಕಟ್ಟುವ ಮೂಲಕ ಉಪ್ಪಿಗಿಂತ ರುಚಿ ಬೇರೆಯಿಲ್ಲ ಎಂದು ತೋರಿಸಿದ್ದರು. ಇದೀಗ ಬಿಡುಗಡೆಯಾಗಿರುವ ಉಪ್ಪಿ2 ಚಿತ್ರದ ಅಧಿಕೃತ ಟೀಸರ್ ನಲ್ಲೂ ಉಪ್ಪಿ ಡಿಫರೆಂಟಾಗಿ ಕಾಣಿಸಿಕೊಂಡಿದ್ದಾರೆ.