ದಸರಾ ರಜೆಗೆ ಎಲ್ಲಿಗೆ ಹೋಗ್ತೀರಾ? ಕರ್ನಾಟಕದಲ್ಲೇ ಇವೆ ನೋಡಲೇಬೇಕಾದ ಸ್ವರ್ಗಸದೃಶ ತಾಣಗಳು!ನಾಡಹಬ್ಬದ ಸಂಭ್ರಮದಲ್ಲೇ ನಾಡನ್ನು ನೋಡುವ ಸಮಯ ಇದು. ಈ ದಸರಾ ರಜೆಗೆ ಪಾಸ್‌ಪೋರ್ಟ್ ಬೇಡ, ಪ್ಲಾನ್ ಮಾತ್ರ ಸಾಕು. ಅರಮನೆಯಿಂದ ಬೀಚ್ ವರೆಗೆ - ಕರ್ನಾಟಕದ ಮಸ್ತ್ ತಾಣಗಳ ಕುರಿತ ಮಾಹಿತಿ ಇಲ್ಲಿದೆ:
ಹಂಪಿ ಮಹಾನವಮಿ ದಿಬ್ಬ: ವಿಜಯನಗರ ಸಾಮ್ರಾಜ್ಯದ ವೈಭವ ಸಾರುವ ಕಲ್ಲಿನ ವೇದಿಕೆ; ನವರಾತ್ರಿ ಸಂಭ್ರಮಕ್ಕೆ ಸಾಕ್ಷಿಯಾದ ಐತಿಹಾಸಿಕ ಸ್ಮಾರಕ..!ನವರಾತ್ರಿಯ 9 ದಿನಗಳ ಕಾಲ ಇಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಧಾರ್ಮಿಕ ಆಚರಣೆಗಳು ಹಾಗೂ ಸೈನಿಕ ಪ್ರದರ್ಶನಗಳು ನಡೆಯುತ್ತಿದ್ದವು. ವಿಜಯದಶಮಿಯಂದು ಈ ಸಂಭ್ರಮ ಮತ್ತಷ್ಟು ವೈಭವ ಪಡೆಯುತ್ತಿತ್ತು.
ಬೆಂಗಳೂರಿನಲ್ಲಿ ಗಣೇಶ ಚತುರ್ಥಿ ಸಂಭ್ರಮ: ಈ ನಾಲ್ಕು ತಾಣಗಳಲ್ಲಿ ಹಬ್ಬದ ವೈಭವ ಕಣ್ತುಂಬಿಕೊಳ್ಳಿ..!2026ರ ಗಣೇಶೋತ್ಸವ ಸೆಪ್ಟೆಂಬರ್ 14ರಂದು ನಡೆಯಲಿದ್ದು, ನಗರದ ವಿವಿಧೆಡೆ ಗಣೇಶ ಮೂರ್ತಿಗಳ ಅಲಂಕಾರ, ಧಾರ್ಮಿಕ ಕಾರ್ಯಕ್ರಮಗಳು, ಭಜನೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ವಿಶೇಷ ಪೂಜೆಗಳು ನಡೆಯಲಿವೆ.
ಕಗ್ಗತ್ತಲಲ್ಲಿ ಕಾಡಿನ ಸುತ್ತಾಟ, ಚಂದ್ರನ ಬೆಳಕಿನಲ್ಲಿ ವನ್ಯಜೀವಿಗಳ ದರ್ಶನ: ಭಾರತದಲ್ಲಿ ಇದೇ ಮೊದಲು; ಇಲ್ಲಿದೆ ಕುಕ್ರೈಲ್ ನೈಟ್ ಸಫಾರಿ ಡಿಟೇಲ್ಸ್..!ಸಿಂಗಾಪುರದ ನೈಟ್ ಸಫಾರಿ ಜಗತ್ತಿನ ಅತ್ಯಂತ ಪ್ರಸಿದ್ಧ ರಾತ್ರಿ ವನ್ಯಜೀವಿ ಅನುಭವಗಳಲ್ಲಿ ಒಂದಾಗಿದೆ. ಇದೇ ಮಾದರಿಯಲ್ಲಿ ಕುಕ್ರೈಲ್ ನೈಟ್ ಸಫಾರಿಯಲ್ಲೂ ಪ್ರಾಣಿಗಳನ್ನು ಅವುಗಳ ಹೆಚ್ಚು ಸಕ್ರಿಯವಾಗಿರುವ ರಾತ್ರಿ ಸಮಯದಲ್ಲಿ ವೀಕ್ಷಿಸಲು ಅವಕಾಶ ಕಲ್ಪಿಸಲಾಗುತ್ತದೆ.
ಆಕಾಶದಲ್ಲಿ ಹಾರುತ್ತಾ ಭಾರತದ ಸೌಂದರ್ಯ ಕಣ್ತುಂಬಿಕೊಳ್ಳಿ: ಜೀವನದಲ್ಲಿ ಒಮ್ಮೆಯಾದರೂ ಮಾಡಲೇಬೇಕಾದ 5 ಹೆಲಿಕಾಪ್ಟರ್ ಯಾನಗಳು..!ನೆಲದ ಮೇಲಿಂದ ನೋಡಿದಾಗ ಕಾಣುವ ದೃಶ್ಯಕ್ಕಿಂತ ಆಕಾಶದಿಂದ ಕಾಣುವ ಅದೇ ಪ್ರದೇಶದ ಸೌಂದರ್ಯವೇ ವಿಭಿನ್ನ. ಪರ್ವತಗಳ ನಡುವೆ ಹಾರುವುದು, ನೀಲಿಗಪ್ಪು ಸಮುದ್ರದ ಮೇಲೆ ಸಾಗುವುದು, ಹಸಿರು ಕಣಿವೆಗಳನ್ನು ಮೇಲಿನಿಂದ ವೀಕ್ಷಿಸುವುದು ಪ್ರವಾಸಿಗರಿಗೆ ವಿಶಿಷ್ಟ ಅನುಭವ ನೀಡುತ್ತದೆ.
ಭಾರತದಲ್ಲಿ ರಾವಣನನ್ನು ಆರಾಧಿಸುವ 5 ಪ್ರಸಿದ್ಧ ದೇವಾಲಯಗಳು: ದಸರಾ ದಿನ ರಾವಣ ದಹನವಲ್ಲ, ಪೂಜೆ ನಡೆಯುವ ಅಪರೂಪದ ತಾಣಗಳಿವು..!ರಾಮ-ರಾವಣರ ಯುದ್ಧದಲ್ಲಿ ರಾವಣ ಸೋತು ನೆಲಕ್ಕುರುಳಿದಾಗ, ರಾಮನು ಲಕ್ಷ್ಮಣನಿಗೆ ರಾವಣನ ಬಳಿಗೆ ತೆರಳಿ ಆತನಿಂದ ಜ್ಞಾನವನ್ನು ಕಲಿಯುವಂತೆ ಸೂಚಿಸಿದನೆಂಬ ಪ್ರಸಿದ್ಧ ಕಥೆಯಿದೆ. ಶತ್ರುವಾಗಿದ್ದರೂ ರಾವಣನಲ್ಲಿದ್ದ ಜ್ಞಾನ ಮತ್ತು ಅನುಭವವನ್ನು ಗೌರವಿಸಬೇಕು ಎಂಬ ಸಂದೇಶವನ್ನು ಈ ಪ್ರಸಂಗ ಸಾರುತ್ತದೆ.
ವೀಕೆಂಡ್ ಟ್ರಿಪ್ಗೆ ಬೆಸ್ಟ್ ಸ್ಪಾಟ್: ಕೇವಲ 20 ರೂಪಾಯಿಯಲ್ಲಿ ಬೆಂಗಳೂರಿನಲ್ಲೇ ನೋಡಿ 18ನೇ ಶತಮಾನದ ರಾಜವೈಭವ..!ಕೆ.ಆರ್.ಮಾರುಕಟ್ಟೆ ರಸ್ತೆಯ ಸಮೀಪ, ಐತಿಹಾಸಿಕ ಬೆಂಗಳೂರು ಕೋಟೆಯ ಆವರಣದೊಳಗೆ ಕಾಣಸಿಗುವ ಈ ಅರಮನೆ ನಗರಿಯ ಆಧುನಿಕ ವೇಗದ ನಡುವೆ ನಿಂತಿರುವ ಇತಿಹಾಸದ ಮೌನ ಸಾಕ್ಷಿಯಂತೆ ಭಾಸವಾಗುತ್ತದೆ.
ವಿದೇಶ ಪ್ರವಾಸ ಅಲ್ಲ, ಇದು ಅಂಚೆ ಪಯಣ; ಎಲ್ಲರ ಗಮನ ಸೆಳೆಯುತ್ತಿದೆ ಕರ್ನಾಟಕ ಅಂಚೆ ಇಲಾಖೆಯ ವಿಶಿಷ್ಟ ಪಾಸ್‌ಪೋರ್ಟ್ ಯೋಜನೆ!ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಅಂಚೆ ಕಚೇರಿಗಳ ಮುಂದೆ ಇತ್ತೀಚೆಗೆ ಉದ್ದನೆಯ ಸರತಿ ಸಾಲುಗಳು ಕಾಣಿಸುತ್ತಿವೆ. ಆದರೆ ಇದು ವೀಸಾ ಪಾಸ್ ಪೋರ್ಟ್ ಗಾಗಿ ಅಲ್ಲ. ಇದು ಪಾಸ್ ಪೋರ್ಟ್ ಆಕಾರದಲ್ಲಿರುವ ವಿಶೇಷ ಸ್ಟ್ಯಾಂಪ್ ಪುಸ್ತಕಕ್ಕಾಗಿ. ಅದುವೇ, ಫಿಲಾಟೆಲಿ ಪಾಸ್ ಪೋರ್ಟ್; ಆ ಕುರಿತ ವರದಿ ಇಲ್ಲಿದೆ:
ರಾಮಾಯಣದ ಪವಿತ್ರ ನೆನಪುಗಳ ಹೊತ್ತ ಸೀತಾ ಗುಹೆ: ಪಂಚವಟಿಯಲ್ಲಿರುವ ಈ ಗುಹೆಯ ವಿಶೇಷತೆ ಏನು? ನಾಸಿಕ್‌ಗೆ ಹೋದರೆ ಈ ತಾಣ ನೋಡುವುದು ಮರೆಯದಿರಿ!ಸೀತಾ ಗುಹೆ ಒಂದು ಚಿಕ್ಕದಾದ ನೈಸರ್ಗಿಕ ಗುಹೆಯಾಗಿದ್ದು, ಇದರೊಳಗೆ ಶ್ರೀರಾಮ, ಸೀತಾದೇವಿ ಹಾಗೂ ಲಕ್ಷ್ಮಣರ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗಿದೆ. ಜೊತೆಗೆ, ಸೀತಾದೇವಿ ಪ್ರತಿದಿನ ಪೂಜಿಸುತ್ತಿದ್ದರೆಂದು ನಂಬಲಾಗುವ ಶಿವಲಿಂಗವೂ ಇಲ್ಲಿದೆ.
ನಮ್ಮ ₹10 ಈ ದೇಶದಲ್ಲಿ ₹1260! ಕೇವಲ ₹35 ಸಾವಿರಕ್ಕೆ ವಿದೇಶ ಪ್ರವಾಸ, ಕಡಿಮೆ ಬಜೆಟ್ನಲ್ಲಿ ರಾಜಾತಿಥ್ಯ ಸಿಗುವ ಆ ದೇಶ ಯಾವುದು ಗೊತ್ತಾ?ನಮ್ಮ ದೇಶದಲ್ಲಿ ಕೇವಲ ₹10 ರೂಪಾಯಿಗೆ ಸಿಗುವ ಒಂದು ಸಣ್ಣ ವಸ್ತು, ಭಾರತದಿಂದ ಕೇವಲ 3 ಗಂಟೆಗಳ ದೂರದಲ್ಲಿರುವ ದೇಶದ ಹಣದ ಲೆಕ್ಕದಲ್ಲಿ ಬರೋಬ್ಬರಿ 1260 ರೂಪಾಯಿ ಆಗುತ್ತದೆ ಎಂದರೆ ನಿಜಕ್ಕೂ ನಂಬಲು ಸಾಧ್ಯವಿಲ್ಲ. ಹಾಗಾದ್ರೆ, ಕೇವಲ ₹35,000 ರೂಪಾಯಿಯಲ್ಲಿ 4 ದಿನದ ರಾಜಾತಿಥ್ಯ ಅನುಭವ ಪಡೆಯಬಹುದು.
ರಾಜ್ಯ'ಹಿಂದಿ ಕಲಿತ್ಕೊಂಡ್ ಬಾ, ಇಲ್ಲ ಕೆಲ್ಸ ಬಿಟ್ ಹೋಗು'; ಕನ್ನಡಿಗರ ಆಕ್ರೋಶಕ್ಕೆ ಮಣಿದ ಹಿಂದಿವಾಲಾ ಕ್ಷಮೆ ಯಾಚನೆ! Video