ರಾಜ್ಯ

ವಿದೇಶ ಪ್ರವಾಸ ಅಲ್ಲ, ಇದು ಅಂಚೆ ಪಯಣ; ಎಲ್ಲರ ಗಮನ ಸೆಳೆಯುತ್ತಿದೆ ಕರ್ನಾಟಕ ಅಂಚೆ ಇಲಾಖೆಯ ವಿಶಿಷ್ಟ ಪಾಸ್‌ಪೋರ್ಟ್ ಯೋಜನೆ!

ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಅಂಚೆ ಕಚೇರಿಗಳ ಮುಂದೆ ಇತ್ತೀಚೆಗೆ ಉದ್ದನೆಯ ಸರತಿ ಸಾಲುಗಳು ಕಾಣಿಸುತ್ತಿವೆ. ಆದರೆ ಇದು ವೀಸಾ ಪಾಸ್ ಪೋರ್ಟ್ ಗಾಗಿ ಅಲ್ಲ. ಇದು ಪಾಸ್ ಪೋರ್ಟ್ ಆಕಾರದಲ್ಲಿರುವ ವಿಶೇಷ ಸ್ಟ್ಯಾಂಪ್ ಪುಸ್ತಕಕ್ಕಾಗಿ. ಅದುವೇ, ಫಿಲಾಟೆಲಿ ಪಾಸ್ ಪೋರ್ಟ್; ಆ ಕುರಿತ ವರದಿ ಇಲ್ಲಿದೆ:

ವಿದೇಶ ಪ್ರವಾಸ ಅಲ್ಲ, ಇದು ಅಂಚೆ ಪಯಣ; ಎಲ್ಲರ ಗಮನ ಸೆಳೆಯುತ್ತಿದೆ ಕರ್ನಾಟಕ ಅಂಚೆ ಇಲಾಖೆಯ ವಿಶಿಷ್ಟ ಪಾಸ್‌ಪೋರ್ಟ್ ಯೋಜನೆ!
ಕರ್ನಾಟಕ ಫಿಲಟೇಲಿ ಪಾಸ್‌ಪೋರ್ಟ್
Published On :

ಬೆಂಗಳೂರು: ಪಾಸ್‌ಪೋರ್ಟ್ ಎಂದರೆ ವಿದೇಶಗಳಿಗೆ ಪ್ರಯಾಣಿಸುವಾಗ ವ್ಯಕ್ತಿಯ ಗುರುತು ಮತ್ತು ರಾಷ್ಟ್ರೀಯತೆಯನ್ನು ದೃಢೀಕರಿಸುವ ಅಧಿಕೃತ ಸರ್ಕಾರಿ ದಾಖಲೆಯಾಗಿದ್ದು, ಇದನ್ನು ಕೇಂದ್ರ ಸರ್ಕಾರ ಮಾತ್ರವೇ ಕೊಡುತ್ತೆ! ಆದ್ರೆ, ಇತ್ತೀಚೆಗೆ ನಮ್ಮ ಕರ್ನಾಟಕದಲ್ಲಿ ಭಾರತೀಯ ಅಂಚೆ ಇಲಾಖೆ ವಿಶಿಷ್ಟವಾದ ಪಾಸ್‌ಪೋರ್ಟ್ ಬಿಡುಗಡೆ ಮಾಡಿದ್ದು, ಇದನ್ನ ಖರೀದಿಸಲು ಜನರು  ಕ್ಯೂ ನಿಲ್ಲುತ್ತಿದ್ದಾರೆ. ಹಾಗಾದ್ರೆ, ಪಾಸ್‌ಪೋರ್ಟ್ ಯಾವುದು? ಅದರ ವೈಶಿಷ್ಟ್ಯವೇನು? ಎನ್ನುವುದರ ಕುರಿತ ಮಾಹಿತಿ ಇಲ್ಲಿದೆ:

ಅಂಚೆ ಇಲಾಖೆಯಿಂದ ಹೊರಬಂತು ಫಿಲಟೇಲಿ ಪಾಸ್‌ಪೋರ್ಟ್!

ಫಿಲಾಟೆಲಿ ಪಾಸ್‌ಪೋರ್ಟ್ (Philately Passport) ಎಂಬುದು ಇಂಡಿಯಾ ಪೋಸ್ಟ್ (ಭಾರತೀಯ ಅಂಚೆ ಇಲಾಖೆ) ಪ್ರವಾಸಿಗರು ಮತ್ತು ಸ್ಟಾಂಪ್ ಸಂಗ್ರಾಹಕರಿಗಾಗಿ ಪರಿಚಯಿಸಿರುವ ಒಂದು ವಿಶೇಷ ಸ್ಮರಣಿಕೆ ಬುಕ್‌ಲೆಟ್ ಆಗಿದೆ. ಇತ್ತೀಚೆಗೆ ಕರ್ನಾಟಕ ಅಂಚೆ ವೃತ್ತವು ಇದರ ಹೊಸ ಆವೃತ್ತಿಯನ್ನು ಬಿಡುಗಡೆ ಮಾಡಿದಾಗ, ಬೆಂಗಳೂರಿನ ಜಿಪಿಒ ಸೇರಿದಂತೆ ರಾಜ್ಯದ ಪ್ರಮುಖ ಅಂಚೆ ಕಚೇರಿಗಳಲ್ಲಿ ಇದನ್ನು ಖರೀದಿಸಲು ಜನ ನೂರಾರು ಮೀಟರ್ ಉದ್ದದ ಕ್ಯೂ ನಿಂತಿದ್ದರು.

ಏನಿದರ ಸ್ಪೆಷಾಲಿಟಿ?

ಇದು ನೋಡಲು ಅಸಲಿ ಪಾಸ್‌ಪೋರ್ಟ್‌ನಂತೆಯೇ ಇರುವ ನೀಲಿ ಬಣ್ಣದ ಚಿಕ್ಕ ಪುಸ್ತಕವಾಗಿದೆ. ಇದರಲ್ಲಿ, ನೀವು ಕರ್ನಾಟಕದ ವಿವಿಧ ಪ್ರವಾಸಿ ತಾಣಗಳು ಅಥವಾ ಪರಂಪರೆ ಸ್ಥಳಗಳಿಗೆ ಭೇಟಿ ನೀಡಿದಾಗ, ಆ ನೆನಪನ್ನು ಡಿಜಿಟಲ್ ಫೋಟೋಗಳ ಬದಲಿಗೆ ಭೌತಿಕವಾಗಿ ದಾಖಲಿಸಲು ಇರುವ ವಿಶಿಷ್ಟ ವಿಧಾನವಿದು. ಅಂದ್ರೆ, ಈ ಫಿಲಟೇಲಿ ಪಾಸ್‌ಪೋರ್ಟ್ ಪುಟಗಳಲ್ಲಿ ಕರ್ನಾಟಕದ ಐತಿಹಾಸಿಕ ಸ್ಥಳಗಳ ಹತ್ತಿರದ ಅಂಚೆ ಕಚೇರಿಗಳ ವಿಶೇಷ ಮುದ್ರೆ ಮತ್ತು ಅಂಚೆ ಚೀಟಿಗಳನ್ನು ಸಂಗ್ರಹಿಸಬಹುದಾಗಿದೆ.

ಇದು ಹೇಗೆ ಕೆಲಸ ಮಾಡುತ್ತದೆ?

  • ಮೊದಲು ಈ ಪಾಸ್‌ಪೋರ್ಟ್ ಅನ್ನು ನಿಗದಿಪಡಿಸಿದ ಅಂಚೆ ಕಚೇರಿಗಳಿಂದ ₹600 ಪಾವತಿಸಿ ಖರೀದಿಸಬೇಕು.

  • ಆ ನಂತರ ನೀವು ಹಂಪಿ, ಮೈಸೂರು ಅರಮನೆ, ಚಿತ್ರದುರ್ಗ ಕೋಟೆ ಅಥವಾ ಬನ್ನೇರುಘಟ್ಟದಂತಹ ಕರ್ನಾಟಕದ ಐತಿಹಾಸಿಕ/ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡಬೇಕು.

  • ಆಯಾ ಪ್ರವಾಸಿ ತಾಣದ ಹತ್ತಿರವಿರುವ ಸೀಲ್ ಲಭ್ಯವಿರುವ ನಿರ್ದಿಷ್ಟ ಅಂಚೆ ಕಚೇರಿಗೆ ಹೋಗಿ, ನಿಮ್ಮ ಪಾಸ್‌ಪೋರ್ಟ್‌ಗೆ ಅಲ್ಲಿನ ವಿಶೇಷ ಚಿತ್ರಾತ್ಮಕ ಮುದ್ರೆ ಮತ್ತು ದಿನಾಂಕದ ಸೀಲ್ ಅನ್ನು ಹಾಕಿಸಿಕೊಳ್ಳಬೇಕು.

  • ಅದರಂತೆ, ಈ ಪಾಸ್‌ಪೋರ್ಟ್‌ನ ಇತ್ತೀಚಿನ ಆವೃತ್ತಿಯಲ್ಲಿ ಕರ್ನಾಟಕದಾದ್ಯಂತ ಸುಮಾರು 100 ಪ್ರವಾಸಿ ತಾಣಗಳ ಮುದ್ರೆಗಳನ್ನು ಸಂಗ್ರಹಿಸಲು ಅವಕಾಶ ನೀಡಲಾಗಿದೆ.

ಜನರ ಈ ಕ್ರೇಜ್‌ಗೆ ಕಾರಣವೇನು?

ಯುವ ಪೀಳಿಗೆ ಹಾಗೂ ಪ್ರವಾಸಿಗರಲ್ಲಿ ಅಂಚೆ ಚೀಟಿ ಸಂಗ್ರಹಿಸುವ ಹವ್ಯಾಸವನ್ನು ಮರುಜೀವಗೊಳಿಸಲು ಇದು ನೆರವಾಗಿದೆ. ಕರ್ನಾಟಕದಾದ್ಯಂತ ಸುತ್ತಾಡಿ ಎಲ್ಲಾ 100 ಮುದ್ರೆಗಳನ್ನು ಸಂಗ್ರಹಿಸಿ ಪಾಸ್‌ಪೋರ್ಟ್ ಭರ್ತಿ ಮಾಡುವುದನ್ನು ಯುವಕರು ಒಂದು ರೋಮಾಂಚಕ 'ಟ್ರಾವೆಲ್ ಚಾಲೆಂಜ್' ನಂತೆ ಸ್ವೀಕರಿಸುತ್ತಿದ್ದಾರೆ. ಅದರಲ್ಲೂ, ಅಂಚೆ ಇಲಾಖೆಯು ಇವುಗಳನ್ನು ಸೀಮಿತ ಸಂಖ್ಯೆಯಲ್ಲಿ (ಉದಾಹರಣೆಗೆ ಬೆಂಗಳೂರು ಜಿಪಿಒದಲ್ಲಿ ಕೇವಲ 1,000 ಪ್ರತಿಗಳು) ಮಾರಾಟಕ್ಕಿಟ್ಟಿದ್ದರಿಂದ ಮೊದಲ ದಿನವೇ ಭಾರಿ ಮುಗಿಬೀಳುವಿಕೆ ಉಂಟಾಗಿತ್ತು. ಸದ್ಯಕ್ಕೆ ಇದು ಬೆಂಗಳೂರು, ಮೈಸೂರು, ಮಂಗಳೂರು ಮತ್ತು ಬೆಳಗಾವಿ ಮುಖ್ಯ ಅಂಚೆ ಕಚೇರಿಗಳಲ್ಲಿ ಮಾತ್ರ ಲಭ್ಯವಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.