Xi Jinping

ಮೋದಿ - ಕ್ಸಿ ಅನೌಪಚಾರಿಕ ಶೃಂಗಸಭೆ ಅಂತ್ಯ: ನೇಪಾಳಕ್ಕೆ ತೆರಳಿದ ಚೀನಾ ಅಧ್ಯಕ್ಷ
ಎರಡು ದಿನಗಳ ಭಾರತ ಪ್ರವಾಸದಲ್ಲಿದ್ದ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗಿನ ಅನೌಪಚಾರಿಕ ಶೃಂಗಸಭೆ ಬಳಿಕ ಶನಿವಾರ ನೇಪಾಳಕ್ಕೆ ತೆರಳಿದ್ದಾರೆ.

ವ್ಯಾಪಾರ ಕೊರತೆ ಕುರಿತು ಕ್ರಮ ಕೈಗೊಳ್ಳಲು ಚೀನಾ ಸಿದ್ಧವಾಗಿದೆ: ವಿದೇಶಾಂಗ ಕಾರ್ಯದರ್ಶಿ
ವ್ಯಾಪಾರ ಕೊರತೆ ಕುರಿತ ಭಾರತದ ಕಳವಳ ಪರಿಹರಿಸಲು ಪ್ರಮಾಣಿಕ ಕ್ರಮ ಕೈಗೊಳ್ಳಲು ಚೀನಾ ಸಿದ್ಧವಾಗಿದೆ ಎಂದು ಭಾರತದ ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆಯವರು ಶನಿವಾರ ಹೇಳಿದ್ದಾರೆ.

'ಚೆನ್ನೈ' ಮೂಲಕ ಭಾರತ-ಚೀನಾ ಸಂಬಂಧಗಳ ಹೊಸಯುಗ ಆರಂಭ: ಪ್ರಧಾನಿ ಮೋದಿ
ಚೆನ್ನೈ ಮೂಲಕ ಭಾರತ ಹಾಗೂ ಚೀನಾ ಸಂಬಂಧಗಳ ಹೊಸ ಯುಗ ಆರಂಭಗೊಂಡಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶನಿವಾರ ಹೇಳಿದ್ದಾರೆ.

ಮಹಾಬಲಿಪುರಂ ಶೃಂಗಸಭೆ: ಭಾರತ-ಚೀನಾ ನಿಯೋಗ ಮಟ್ಟದ ಮಾತುಕತೆ ಆರಂಭ
ಭಾರತ ಮತ್ತು ಚೀನಾ ನಡುವೆ ಬಹುನಿರೀಕ್ಷಿತ ನಿಯೋಗ ಮಟ್ಟದ ಮಾತುಕತೆ ಶನಿವಾರ ಇಲ್ಲಿ ಪ್ರಾರಂಭಗೊಂಡಿದೆ.

ಅನೌಪಚಾರಿಕ ಶೃಂಗಸಭೆ: ಗಡಿ ಭದ್ರತೆ, ಭಯೋತ್ಪಾದನೆ ಕುರಿತು ಮೋದಿ, ಕ್ಸಿ ಮಹತ್ವದ ಮಾತುಕತೆ
ಮಹಾಬಲಿಪುರಂನಲ್ಲಿ ನಡೆಯುತ್ತಿರುವ ಎರಡು ದಿನಗಳ ಅನೌಪಚಾರಿಕ ದ್ವಿಪಕ್ಷೀಯ ಶೃಂಗಸಭೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್'ಪಿಂಗ್ ಅವರು ಚೆನ್ನೈಗೆ ಆಗಮಿಸಿದ್ದು, 2ನೇ ದಿನದ ಅನೌಪಚಾರಿಕ ಶೃಂಗಸಭೆಯಲ್ಲಿ ಉಭಯ ನಾಯಕರು...

ಬೆಳ್ಳಂ ಬೆಳಗ್ಗೆ ಮಹಾಬಲಿಪುರಂ ಬೀಚ್‌ನಲ್ಲಿ ಪ್ರಧಾನಿ ಮೋದಿಯಿಂದ 'ಸ್ವಚ್ಛ ಭಾರತ', ವಿಡಿಯೋ!
ಭಾರತ ಪ್ರವಾಸದಲ್ಲಿರುವ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಜೊತೆ ಮಹಾಬಲಿಪುರಂನಲ್ಲಿ ತಂಗಿರುವ ಪ್ರಧಾನಿ ನರೇಂದ್ರ ಮೋದಿ ಅವರು ಬೆಳ್ಳಂ ಬೆಳಗ್ಗೆ ಬೀಚ್‌ನಲ್ಲಿ ತಿರುಗಾಡುತ್ತಿದ್ದಾಗ ಅಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಕವರ್ ಮತ್ತು ಬಾಟಲಿಗಳನ್ನು ಹೆಕ್ಕಿ ತೆಗೆದಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗಿದೆ.

ಮಹಾಬಲಿಪುರಂ: ಕ್ಸಿ ಜಿನ್ ಪಿಂಗ್ ಗೆ ಪ್ರಧಾನಿ ಮೋದಿ ವಿಶೇಷ ಭೋಜನ ಕೂಟ, ಭೂರಿ ಭೋಜನ!
ಭಾರತ ಪ್ರವಾಸದಲ್ಲಿರುವ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರಿಗೆ ಪ್ರಧಾನಿ ಮೋದಿ ಮಹಾಬಲಿಪುರಂನಲ್ಲಿ ವಿಶೇಷ ಭೋಜನಕೂಟ ಏರ್ಪಡಿಸಿದ್ದು, ಉಭಯ ನಾಯಕರು ಸುಧೀರ್ಘ ಸಮಯದ ಬಳಿಕ ಭೋಜನ ಕೂಟದಲ್ಲಿ ಪಾಲ್ಗೊಂಡಿದ್ದಾರೆ.

ಕ್ಸಿ ಜಿನ್ ಪಿಂಗ್ ಗೆ ಗೈಡ್ ಆದ ಮೋದಿ; ಪಂಚೆ, ಶರ್ಟ್, ಧೋತಿ.. ಪಕ್ಕಾ ದಕ್ಷಿಣದ ಸ್ಟೈಲ್ ನಲ್ಲಿ ಮಿಂಚಿದ ಪ್ರಧಾನಿ
ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಎರಡು ದಿನದ ಪ್ರವಾಸಕ್ಕಾಗಿ ಶುಕ್ರವಾರ ಭಾರತಕ್ಕೆ ಬಂದಿದ್ದು, ಪ್ರಧಾನಿ ನರೇಂದ್ರ ಮೋದಿ ಹಾಗೂ ಷಿ ಅವರು ತಮಿಳುನಾಡಿನ ಕಡಲತಡಿಯ ಪ್ರವಾಸಿತಾಣ ಮಾಮಲ್ಲಪುರಂಗೆ ಭೇಟಿ ನೀಡಿದರು.

ಮಹಾಬಲಿಪುರಂನಲ್ಲಿ ದಕ್ಷಿಣ ಭಾರತದ ಸಂಸ್ಕೃತಿ ಅನಾವರಣ; ಮೆಚ್ಚಿದ ಚೀನಾ ಅಧ್ಯಕ್ಷ ಕ್ಸಿ
ಭಾರತ ಪ್ರವಾಸದಲ್ಲಿರುವ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ದಕ್ಷಿಣ ಭಾರತದ ಸಂಸ್ಕೃತಿಗೆ ಮಾರುಹೋಗಿದ್ದು, ಮಹಾಬಲಿಪುರಂನಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಮೆಚ್ಚಿದ್ದಾರೆ.

