ಮಹಾಬಲಿಪುರಂನಲ್ಲಿ ದಕ್ಷಿಣ ಭಾರತದ ಸಂಸ್ಕೃತಿ ಅನಾವರಣ; ಮೆಚ್ಚಿದ ಚೀನಾ ಅಧ್ಯಕ್ಷ ಕ್ಸಿ
ಭಾರತ ಪ್ರವಾಸದಲ್ಲಿರುವ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ದಕ್ಷಿಣ ಭಾರತದ ಸಂಸ್ಕೃತಿಗೆ ಮಾರುಹೋಗಿದ್ದು, ಮಹಾಬಲಿಪುರಂನಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಮೆಚ್ಚಿದ್ದಾರೆ.

ಚೆನ್ನೈ: ಭಾರತ ಪ್ರವಾಸದಲ್ಲಿರುವ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ದಕ್ಷಿಣ ಭಾರತದ ಸಂಸ್ಕೃತಿಗೆ ಮಾರುಹೋಗಿದ್ದು, ಮಹಾಬಲಿಪುರಂನಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಮೆಚ್ಚಿದ್ದಾರೆ.
ಇಂದು ಸಂಜೆ ಮಹಾಬಲಿಪುರಂಗೆ ಅಗಮಿಸಿದ ಕ್ಸಿ ಜಿನ್ ಪಿಂಗ್ ರನ್ನು ಪ್ರಧಾನಿ ಮೋದಿ ಸ್ವಾಗತಿಸಿದರು. ಬಳಿಕ ಉಭಯ ನಾಯಕರು ಮಹಾಬಲಿಪುರಂ ಇತಿಹಾಸ ಪ್ರಸಿದ್ಧ ದೇಗುಲಗಳಿಗೆ ತೆರಳಿ ಅಲ್ಲಿನ ದೇಗುಲಗಳ ಕೆತ್ತನೆಗಳನ್ನು ವೀಕ್ಷಿಸಿದರು. ಇಲ್ಲಿನ ಕರಾವಳಿ ತೀರದಲ್ಲಿರುವ ವಿಶ್ವಪಾರಂಪರಿಕ ಸ್ಥಳಗಳಲ್ಲಿ ಒಂದಾದ ದೇಗುಲದಲ್ಲಿ ಕ್ಸಿ ಜಿನ್ ಪಿಂಗ್ ಅವರಿಗಾಗಿಯೇ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಈ ವೇಳೆ ತಮಿಳುನಾಡಿನ ಸಂಸ್ಕೃತಿಕ ಕಲಾ ತಂಡಗಳು ದ್ರಾವಿಡ ಸಂಸ್ಕೃತಿಯನ್ನು ಸಾರುವ ಕಲಾ ಪ್ರದರ್ಶನಗಳನ್ನು ನೀಡಿದರು. ಪ್ರಮುಖವಾಗಿ ದಕ್ಷಿಣ ಭಾರತದ ಖ್ಯಾತ ನೃತ್ಯ ಮಾದರಿ ಯಕ್ಷಗಾನಕ್ಕೆ ಚೀನಾ ಅಧ್ಯಕ್ಷರು ಚಪ್ಪಾಳೆ ತಟ್ಟಿ ತಮ್ಮ ಸಂತೋಷ ಹಂಚಿಕೊಂಡರು. ಪಕ್ಕದಲ್ಲೇ ಕುಳಿತಿದ್ದ ಪ್ರಧಾನಿ ಮೋದಿ ಕ್ಸಿ ಜಿನ್ ಪಿಂಗ್ ಅವರಿಗೆ ಈ ನೃತ್ಯದ ಕುರಿತು ಮಾಹಿತಿ ನೀಡಿದರು.
ಯುನೆಸ್ಕೋದಿಂದ ಸಂರಕ್ಷಿತ ಪಾರಂಪರಿಕ ತಾಣ ಎಂದು ಗುರುತಿಸಲ್ಪಟ್ಟಿರುವ ಸಮುದ್ರದ ತಟದಲ್ಲಿರುವ ಪಲ್ಲವ ವಾಸ್ತುಶಿಲ್ಪ ಮೇಳೈಸಿರುವ ಮಹಾಬಲಿಪುರಂನ ದೇಗುಲ ಸಮುಚ್ಛಯದ ಶೋರ್ ದೇಗುಲದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಿದರು. ಕಲಾಕ್ಷೇತ್ರ ಫೌಂಡೇಶನ್ನ ಕಲಾವಿದರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ತಮಿಳುನಾಡಿನಲ್ಲಿ ಹುಟ್ಟಿದ ಭರತನಾಟ್ಯ ಪ್ರದರ್ಶನದೊಂದಿಗೆ ಆರಂಭಗೊಂಡು, ನೆರೆಯ ಕೇರಳದ ಕಥಕ್ಕಳಿಯೊಂದಿಗೆ ಕಾರ್ಯಕ್ರಮ ಮುಂದುವರಿಯಿತು.
ಅಂದಾಜು 30 ನಿಮಿಷ ನಡೆದ ಕಾರ್ಯಕ್ರಮದ ಕೊನೆಯಲ್ಲಿ ಮಹಾತ್ಮ ಗಾಂಧಿ ಅವರನ್ನು ಸ್ಮರಿಸುತ್ತಾ, ಶಾಂತಿಯ ಆಶಯವನ್ನು ವ್ಯಕ್ತಪಡಿಸಲಾಯಿತು. ರಘುಪತಿ ರಾಘವ ರಾಜಾರಾಂ ಹಾಡಿನೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು. ಚೀನಾದ ಅಧ್ಯಕ್ಷರು ಕುತೂಹಲದದಿಂದ ಕಾರ್ಯಕ್ರಮ ವೀಕ್ಷಿಸಿದರೆ, ಪ್ರಧಾನಿ ಮೋದಿ ತಾಳ ಹಾಕುತ್ತಾ, ಸಂಗೀತದ ಮಾಧುರ್ಯಕ್ಕೆ ತಲೆದೂಗುತ್ತಾ ಕಾರ್ಯಕ್ರಮವನ್ನು ಆಸ್ವಾದಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಪ್ರಧಾನಿ ಮೋದಿ ತಂಜಾವೂರ್ನ ಚಿತ್ರವನ್ನು ಜಿನ್ಪಿಂಗ್ಗೆ ಉಡುಗೊರೆಯಾಗಿ ಕೊಟ್ಟರು.
Related Article
63 ವರ್ಷದ ಹಿಂದೆ ಮಹಾಬಲಿಪುರಂ, ಜೆಮಿನಿ ಸ್ಟುಡಿಯೋಗೆ ಭೇಟಿ ಕೊಟ್ಟಿದ್ದ ಚೀನಾದ ಮೊದಲ ಪ್ರಧಾನಿ: ಒಂದು ನೆನಪು
ಅನೌಪಚಾರಿಕ ಶೃಂಗ ಸಭೆ: ಪಂಚೆಯಲ್ಲಿ ಚೀನಾ ಅಧ್ಯಕ್ಷರನ್ನು ಸ್ವಾಗತಿಸಿದ ಪ್ರಧಾನಿ, ಕ್ಸಿಗೆ ಮೋದಿ ಗೈಡ್
ಮಹಾಬಲಿಪುರಂನಲ್ಲಿ ಮೋದಿ-ಕ್ಸಿ ಭೇಟಿ: ಚೀನಾ ಅಧ್ಯಕ್ಷರಿಗಾಗಿ ಚೆಟ್ಟಿನಾಡು ವಿಶೇಷ ಖಾದ್ಯ
ಅನೌಪಚಾರಿಕ ಶೃಂಗ ಸಭೆ: ಚೆನ್ನೈಗೆ ಆಗಮಿಸಿದ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಗೆ ಅದ್ಧೂರಿ ಸ್ವಾಗತ
ಭಾರತ-ಚೀನಾ ದ್ವಿಪಕ್ಷೀಯ ಶೃಂಗ ಸಭೆ: ನಿಗದಿತ ಸಮಯಕ್ಕೂ ಮೊದಲೇ ಚೆನ್ನೈ ತಲುಪಿದ ಪ್ರಧಾನಿ ಮೋದಿ
ಮಹಾಬಲಿಪುರಂನಲ್ಲಿ 'ಡಾಮೊ' ನರೇಂದ್ರ ಮೋದಿ ಮತ್ತು ಕ್ಸಿಗೆ ಸಹಾಯ ಮಾಡ್ತಾರ?
ಮೋದಿ-ಕ್ಸಿ ಜಿನ್ ಪಿಂಗ್ ಭೇಟಿ: ತಮಿಳುನಾಡಿನಲ್ಲಿ ಬಿಗಿ ಪೊಲೀಸ್ ಭದ್ರತೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


