ದೇಶ

ಗುಜರಾತ್‌ನಿಂದ ದೆಹಲಿಯವರೆಗೆ: 'ಗುಜರಾತ್ ಮಾದರಿ ಹರಿಕಾರ',ಸಾರ್ವಜನಿಕ ಜೀವನದಲ್ಲಿ ಪ್ರಧಾನಿ ಮೋದಿ 25 ವರ್ಷಗಳ ಸಾರ್ಥಕ ಸೇವೆ!

ಮೋದಿ ಗುಜರಾತ್ ಮುಖ್ಯಮಂತ್ರಿಯಾದಾಗ, ವರ್ಷದ ಆರಂಭದಲ್ಲಿ ಸಂಭವಿಸಿದ ಕಚ್ ಭೂಕಂಪದ ಪರಿಣಾಮಗಳಿಂದ ಚೇತರಿಸಿಕೊಳ್ಳುತ್ತಿತ್ತು. ಅವರ ಸರ್ಕಾರವು ಪುನರ್ನಿರ್ಮಾಣ, ಜಲ ನಿರ್ವಹಣೆ, ನೀರಾವರಿ ಮತ್ತು ಮೂಲಸೌಕರ್ಯಗಳ ಅಭಿವೃದ್ಧಿಯತ್ತ ಗಮನಹರಿಸಿತು.

ಗುಜರಾತ್‌ನಿಂದ ದೆಹಲಿಯವರೆಗೆ: 'ಗುಜರಾತ್ ಮಾದರಿ ಹರಿಕಾರ',ಸಾರ್ವಜನಿಕ ಜೀವನದಲ್ಲಿ ಪ್ರಧಾನಿ ಮೋದಿ 25 ವರ್ಷಗಳ ಸಾರ್ಥಕ ಸೇವೆ!
ನರೇಂದ್ರ ಮೋದಿ
Published On :

ನವದೆಹಲಿ: ಅಕ್ಟೋಬರ್ 7 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಸಾರ್ವಜನಿಕ ಸೇವೆಯಲ್ಲಿ ತಮ್ಮ 25 ವರ್ಷಗಳನ್ನು ಪೂರೈಸುತ್ತಿದ್ದಾರೆ. 2001ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಮೂಲಕ ಪ್ರಾರಂಭವಾದ ಅವರ ರಾಜಕೀಯ ಪಯಣಕ್ಕೆ ಇದು ಸಾಕ್ಷಿಯಾಗಿದೆ.

ಬಿಜೆಪಿ ಈ ಮೈಲಿಗಲ್ಲನ್ನು 'ಸೇವಾ ಸಂಕಲ್ಪ ಅಭಿಯಾನ'ದ ಮೂಲಕ ಆಚರಿಸುತ್ತಿದೆ. ಇದರ ಅಂಗವಾಗಿ ವಿವಿಧ ಕಾರ್ಯಕ್ರಮಗಳು, ಜನಸಂಪರ್ಕ ಅಭಿಯಾನಗಳು ಮತ್ತು ಮೋದಿಯವರ ಜನ್ಮಸ್ಥಳವಾದ ವಡ್ನಗರವನ್ನು ಅವರ ಸಂಸದೀಯ ಕ್ಷೇತ್ರವಾದ ವಾರಣಾಸಿಯೊಂದಿಗೆ ಜೋಡಿಸುವ ಯಾತ್ರೆಗಳನ್ನು ಹಮ್ಮಿಕೊಂಡಿದೆ.

ಮೋದಿ ಗುಜರಾತ್ ಮುಖ್ಯಮಂತ್ರಿಯಾದಾಗ, ವರ್ಷದ ಆರಂಭದಲ್ಲಿ ಸಂಭವಿಸಿದ ಕಚ್ ಭೂಕಂಪದ ಪರಿಣಾಮಗಳಿಂದ ಚೇತರಿಸಿಕೊಳ್ಳುತ್ತಿತ್ತು. ಅವರ ಸರ್ಕಾರವು ಪುನರ್ನಿರ್ಮಾಣ, ಜಲ ನಿರ್ವಹಣೆ, ನೀರಾವರಿ ಮತ್ತು ಮೂಲಸೌಕರ್ಯಗಳ ಅಭಿವೃದ್ಧಿಯತ್ತ ಗಮನಹರಿಸಿತು. ಚೆಕ್ ಡ್ಯಾಮ್‌ಗಳು (ತಡೆ ಅಣೆಕಟ್ಟುಗಳು) ಮತ್ತು ನರ್ಮದಾ ಕಾಲುವೆ ವ್ಯವಸ್ಥೆಯ ವಿಸ್ತರಣೆಯು ರಾಜ್ಯದಲ್ಲಿ ಬಲವಾದ ಕೃಷಿ ಮತ್ತು ಕೈಗಾರಿಕಾ ಬೆಳವಣಿಗೆಗೆ ಕಾರಣವಾಯಿತು.

ಬಿಜೆಪಿ 2002ರ ಗುಜರಾತ್ ಚುನಾವಣೆಯಲ್ಲಿ ಜಯಗಳಿಸಿತು, ಮೋದಿ 12 ವರ್ಷಗಳಿಗೂ ಹೆಚ್ಚು ಕಾಲ ಮುಖ್ಯಮಂತ್ರಿಯಾಗಿ ಮುಂದುವರಿದರು. ಅವರ ಆಡಳಿತವು "ಗುಜರಾತ್ ಮಾದರಿ" ಎಂಬ ಪರಿಕಲ್ಪನೆಯೊಂದಿಗೆ ಗುರುತಿಸಲ್ಪಟ್ಟಿತು.

ಇದು ಮೂಲಸೌಕರ್ಯ, ಹೂಡಿಕೆ, ನೀರಾವರಿ ಮತ್ತು ತ್ವರಿತ ನಿರ್ಧಾರ ಕೈಗೊಳ್ಳುವಿಕೆ ಮೇಲೆ ಪ್ರಭಾವ ಬೀರಿತು. ಬೆಂಬಲಿಗರು ರಾಜ್ಯದ ಆರ್ಥಿಕ ಸಾಧನೆಯನ್ನು ಎತ್ತಿ ತೋರಿಸಿದರೆ, ಟೀಕಾಕಾರರು ಬೆಳವಣಿಗೆಯ ಹಂಚಿಕೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದರು ಹಾಗೂ ಸಾಮಾಜಿಕ ಮತ್ತು ಆರ್ಥಿಕ ಫಲಿತಾಂಶಗಳಲ್ಲಿನ ಅಸಮಾನತೆಗಳನ್ನು ಪ್ರಸ್ತಾಪಿಸಿದರು.

2013ರಲ್ಲಿ, ಮೋದಿ ಅವರನ್ನು ಬಿಜೆಪಿಯ ಪ್ರಧಾನ ಮಂತ್ರಿ ಅಭ್ಯರ್ಥಿಯಾಗಿ ಘೋಷಿಸಲಾಯಿತು. ಒಂದು ವರ್ಷದ ನಂತರ, ಬಿಜೆಪಿ ಲೋಕಸಭೆಯಲ್ಲಿ 282 ಸ್ಥಾನಗಳನ್ನು ಗೆದ್ದುಕೊಂಡಿತು. ಗಾಂಧಿನಗರದಿಂದ ದೆಹಲಿಗೆ ಮೋದಿಯವರ ಆಗಮನವು ರಾಜ್ಯ ಮಟ್ಟದ ಆಡಳಿತದಿಂದ ರಾಷ್ಟ್ರೀಯ ಆಡಳಿತಕ್ಕೆ ಬದಲಾವಣೆಯನ್ನು ಸೂಚಿಸಿತು. ಮುಂದಿನ ದಶಕದಲ್ಲಿ, ಸರ್ಕಾರವು ಹಲವಾರು ಆರ್ಥಿಕ, ಸಾಮಾಜಿಕ ಮತ್ತು ವಿದೇಶಾಂಗ ನೀತಿ ಯೋಜನೆಗಳನ್ನು ಕೈಗೊಂಡಿತು.

2017ರಲ್ಲಿ ಜಾರಿಗೆ ತರಲಾದ ಸರಕು ಮತ್ತು ಸೇವಾ ತೆರಿಗೆ (GST)ಯು ಹೆಚ್ಚಿನ ಪರೋಕ್ಷ ತೆರಿಗೆಗಳನ್ನು ಒಂದು ಸಾಮಾನ್ಯ ರಾಷ್ಟ್ರೀಯ ಚೌಕಟ್ಟಿನ ಅಡಿಯಲ್ಲಿ ತಂದಿತು. 'ದಿವಾಳಿತನ ಮತ್ತು ದಿವಾಳಿ ಪ್ರಕ್ರಿಯೆ ಸಂಹಿತೆ'ಯು (Insolvency and Bankruptcy Code) ಕಾರ್ಪೊರೇಟ್ ದಿವಾಳಿತನವನ್ನು ಪರಿಹರಿಸಲು ಔಪಚಾರಿಕ ಕಾರ್ಯವಿಧಾನವನ್ನು ಸೃಷ್ಟಿಸಿತು. ಅದೇ ಸಮಯದಲ್ಲಿ, ಬ್ಯಾಂಕುಗಳ ಒತ್ತಡಕ್ಕೊಳಗಾದ ಆಸ್ತಿಗಳನ್ನು (stressed assets) ನಿಭಾಯಿಸುವ ಪ್ರಯತ್ನಗಳು ಕೆಟ್ಟ ಸಾಲಗಳ (bad loans) ಗುರುತಿಸುವಿಕೆ ಮತ್ತು ಬ್ಯಾಂಕಿಂಗ್ ವಲಯದ ಪುನರ್ರಚನೆಗೆ ಕಾರಣವಾದವು.

2016ರಲ್ಲಿ ಕೈಗೊಂಡ ನೋಟು ಅಮಾನ್ಯೀಕರಣದಲ್ಲಿ ಹೆಚ್ಚಿನ ಮೌಲ್ಯದ ಕರೆನ್ಸಿ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯಲಾಗಿತ್ತು. ಅವರ ಮೊದಲ ಅವಧಿಯ ಅತ್ಯಂತ ಚರ್ಚಿತ ಆರ್ಥಿಕ ನಿರ್ಧಾರಗಳಲ್ಲಿ ಒಂದಾಗಿತ್ತು. ಮೂಲಸೌಕರ್ಯ ಅಭಿವೃದ್ಧಿಯು ಮೋದಿ ಸರ್ಕಾರದ ಪ್ರಮುಖ ಕಾರ್ಯಸೂಚಿಯಾಗಿ ಮುಂದುವರೆದಿದೆ. ಸಂಪರ್ಕ ಕಲ್ಪಿಸುವ ಯೋಜನೆಗಳು ಈಶಾನ್ಯ ಭಾರತ ಮತ್ತು ಜಮ್ಮು-ಕಾಶ್ಮೀರದ ಮೇಲೂ ಗಮನಹರಿಸಿವೆ.

ಡಿಜಿಟಲ್ ಪಾವತಿಗಳು ಸಾರ್ವಜನಿಕ ಮೂಲಸೌಕರ್ಯದ ವಿಸ್ತರಣೆಯು ಮತ್ತೊಂದು ಯಶಸ್ಸಿನ ಮೈಲಿಗಲ್ಲಾಗಿದೆ. 2016 ರಲ್ಲಿ ಉರಿ ದಾಳಿಯ ನಂತರ, ಭಾರತವು ಗಡಿಯಾಚೆಗಿನ ಸರ್ಜಿಕಲ್ ಸ್ಟ್ರೈಕ್ ಅನ್ನು ಘೋಷಿಸಿತು. 2019 ರಲ್ಲಿ ಪುಲ್ವಾಮಾ ದಾಳಿಯ ನಂತರ, ಭಾರತವು ಬಾಲಕೋಟ್‌ನಲ್ಲಿ ವಾಯುದಾಳಿ ನಡೆಸಿತು. 2025 ರಲ್ಲಿ, ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಸರ್ಕಾರವು ಆಪರೇಷನ್ ಸಿಂಧೂರ್ ಅನ್ನು ಘೋಷಿಸಿತು. ಈ ಕ್ರಮಗಳನ್ನು ಗಡಿಯಾಚೆಗಿನ ಭಯೋತ್ಪಾದನೆಗೆ ಹೆಚ್ಚು ನೇರ ಪ್ರತಿಕ್ರಿಯೆಯ ಭಾಗವಾಗಿ ನೋಡಲಾಯಿತು.

ರಾಜತಾಂತ್ರಿಕತೆಯ ಭಾಗವಾಗಿ ಈ ವಿಧಾನವು ಕಾರ್ಯತಂತ್ರದ ಸ್ವಾಯತ್ತತೆ, ಇಂಧನ ಭದ್ರತೆ ದೀರ್ಘಕಾಲೀನ ತತ್ವಗಳೊಂದಿಗೆ ಕಾರ್ಯತಂತ್ರದ ಪಾಲುದಾರಿಕೆಗಳನ್ನು ಸಮತೋಲನಗೊಳಿಸುವುದನ್ನು ಒಳಗೊಂಡಿತ್ತು. ಕೋವಿಡ್ -19 ಅವರ ಆಡಳಿತದ ಮತ್ತೊಂದು ಪ್ರಮುಖ ಪರೀಕ್ಷೆಯನ್ನು ಪ್ರತಿನಿಧಿಸಿತು. ಭಾರತವು 2021 ರಲ್ಲಿ ರಾಷ್ಟ್ರವ್ಯಾಪಿ ಲಸಿಕೆ ಕಾರ್ಯಕ್ರಮವನ್ನು ಪ್ರಾರಂಭಿಸಿತು, ಅದು ಎರಡು ಬಿಲಿಯನ್‌ಗಿಂತಲೂ ಹೆಚ್ಚು ಡೋಸ್‌ಗಳನ್ನು ನೀಡಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.