ಮೋದಿ - ಕ್ಸಿ ಅನೌಪಚಾರಿಕ ಶೃಂಗಸಭೆ ಅಂತ್ಯ: ನೇಪಾಳಕ್ಕೆ ತೆರಳಿದ ಚೀನಾ ಅಧ್ಯಕ್ಷ
ಎರಡು ದಿನಗಳ ಭಾರತ ಪ್ರವಾಸದಲ್ಲಿದ್ದ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗಿನ ಅನೌಪಚಾರಿಕ ಶೃಂಗಸಭೆ ಬಳಿಕ ಶನಿವಾರ ನೇಪಾಳಕ್ಕೆ ತೆರಳಿದ್ದಾರೆ.

ಚೆನ್ನೈ: ಎರಡು ದಿನಗಳ ಭಾರತ ಪ್ರವಾಸದಲ್ಲಿದ್ದ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗಿನ ಅನೌಪಚಾರಿಕ ಶೃಂಗಸಭೆ ಬಳಿಕ ಶನಿವಾರ ನೇಪಾಳಕ್ಕೆ ತೆರಳಿದ್ದಾರೆ.
ನಿನ್ನೆ ಚೆನ್ನೈಗೆ ಆಗಮಿಸಿದ ಚೀನಾ ಅಧ್ಯಕ್ಷರಿಗೆ ತಮಿಳುನಾಡು ಸರ್ಕಾರ ಅದ್ಧೂರಿ ಸ್ವಾಗತ ನೀಡಿತ್ತು. ಬಳಿಕ ಸಂಜೆ ಮಹಾಬಲಿಪುರಂಗೆ ತೆರಳಿದ ಚೀನಾ ಅಧ್ಯಕ್ಷರನ್ನು ಪ್ರಧಾನಿ ಮೋದಿ ಸ್ವಾಗತಿಸಿದರು.
ಕ್ಸಿ ಜಿನ್ ಪಿಂಗ್ ಅವರು ಅನೌಪಚಾರಿಕ ಶೃಂಗಸಭೆಯ ಬಳಿಕ ಇಂದು ನೇಪಾಳಕ್ಕೆ ತೆರಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಕ್ಸಿ ನಡುವೆ ನಡೆದ ಎರಡನೇ ಅನೌಪಚಾರಿಕ ಶೃಂಗ ಸಭೆ ಇದಾಗಿದೆ. ಕಳೆದ ವರ್ಷ ಚೀನಾದ ವುಹಾನ್ ನಲ್ಲಿ ಉಭಯ ನಾಯಕರ ನಡುವೆ ಮೊದಲ ಮಾತುಕತೆ ನಡೆದಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


