
ಐಟಿ ನಿಯಮ ಪ್ರಶ್ನಿಸಿ ಫೇಸ್ ಬುಕ್, ವಾಟ್ಸಾಪ್ ಅರ್ಜಿ: ಕೇಂದ್ರ ಸರ್ಕಾರಕ್ಕೆ ದೆಹಲಿ ಹೈಕೋರ್ಟ್ ನೊಟೀಸ್
ಕೇಂದ್ರ ಸರ್ಕಾರ ತಂದಿರುವ ನೂತನ ಐಟಿ ನಿಯಮಗಳನ್ನು ಪ್ರಶ್ನಿಸಿ ಫೇಸ್ ಬುಕ್ ಮತ್ತು ವಾಟ್ಸಾಪ್ ಸಲ್ಲಿಸಿದ್ದ ಮನವಿಗೆ ಪ್ರತಿಕ್ರಿಯೆ ನೀಡುವಂತೆ ದೆಹಲಿ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ಆದೇಶ ನೀಡಿದೆ.

ಇನ್ನುಮುಂದೆ ವಾಟ್ಸಾಪ್ ನಿಂದಲೇ ಕೊರೊನಾ ಲಸಿಕೆ ಅಪಾಯಿಂಟ್ಮೆಂಟ್ ಬುಕ್ ಮಾಡಬಹುದು!
ಅಗಸ್ಟ್ 5 ರಂದು ಮೈ ಗವ್ ಕೊರೊನಾ ಸಹಾಯವಾಣಿ ವಾಟ್ಸಾಪ್ ಗ್ರೂಪಿನ ಮುಖಾಂತರ ಬಳಕೆದಾರರು ತಮ್ಮ ಲಸಿಕೆ ಪ್ರಮಾಣಪತ್ರವನ್ನು ಡೌನ್ ಲೋಡ್ ಮಾಡಿಕೊಳ್ಳುವ ಸವಲತ್ತನ್ನು ಜಾರಿಗೆ ತಂದಿತ್ತು. ಇದುವರೆಗೂ ಒಟ್ಟು 32 ಲಕ್ಷ ಮಂದಿ ಈ ಸವಲತ್ತನ್ನು ಬಳಸಿಕೊಂಡು ವ್ಯಾಕ್ಸಿನ್ ಸರ್ಟಿಫಿಕೆಟ್ ಅನ್ನು ಡೌನ್ ಲೋಡ್ ಮಾಡಿಕೊಂಡಿದ್ದರು.

ಮೇ 15 ರಿಂದ ಜೂನ್ 15 ರ ಅವಧಿಯಲ್ಲಿ ಎರಡು ಮಿಲಿಯನ್ ಭಾರತೀಯರ ವಾಟ್ಸಾಪ್ ಖಾತೆಗಳು ಬ್ಯಾನ್: ವರದಿ
ಮೇ 15 ರಿಂದ ಜೂನ್ 15 ರ ಅವಧಿಯಲ್ಲಿ ಎರಡು ಮಿಲಿಯನ್ ಭಾರತೀಯರ ಖಾತೆಗಳನ್ನು ವಾಟ್ಸಾಪ್ ಬ್ಯಾನ್ ಮಾಡಿದ್ದರೆ, 345 ಕುಂದುಕೊರತೆ ವರದಿಗಳನ್ನು ಸ್ವೀಕರಿಸಲಾಗಿದೆ. ಹೊಸ ಐಟಿ ನಿಯಮಗಳ ಅನುಸಾರ ಮೊದಲ ತಿಂಗಳ ಕುಂದುಕೊರತೆ ವರದಿಯಲ್ಲಿ ಕಂಪನಿ ಈ ಮಾಹಿತಿ ನೀಡಿದೆ.

ಹೊಸ ಗೌಪ್ಯತಾ ನೀತಿ ಒಪ್ಪಿಕೊಳ್ಳುವಂತೆ ಬಳಕೆದಾರರ ಒತ್ತಾಯಿಸುವುದಿಲ್ಲ: ದೆಹಲಿ ಹೈಕೋರ್ಟ್'ಗೆ ವಾಟ್ಸಾಪ್ ಹೇಳಿಕೆ
ದತ್ತಾಂಶ ಸಂರಕ್ಷಣಾ ಮಸೂದೆ ಜಾರಿಗೆ ಬರುವವರೆಗೂ ಹೊಸ ಗೌಪ್ಯತೆ ನೀತಿಯನ್ನು ಒಪ್ಪಿಕೊಳ್ಳುವಂತೆ ಬಳಕೆದಾರರನ್ನು ಒತ್ತಾಯಿಸುವುದಿಲ್ಲ ಎಂದು ದೆಹಲಿ ಹೈಕೋರ್ಟ್'ಗೆ ವಾಟ್ಸಾಪ್ ಶುಕ್ರವಾರ ಸ್ಪಷ್ಟಪಡಿಸಿದೆ.

ಭಾರತದಲ್ಲಿ ವಾಟ್ಸ್ ಆಪ್ ನಿಷೇಧಿಸಲು ನಿರ್ದೇಶನ ಕೋರಿ ಕೇರಳ ಹೈಕೋರ್ಟ್ ಗೆ ಸಾಫ್ಟ್ ವೇರ್ ಇಂಜಿನಿಯರ್ ಅರ್ಜಿ!
ಭಾರತದಲ್ಲಿ ವಾಟ್ಸ್ ಆಪ್ ನಿಷೇಧಿಸಲು ನಿರ್ದೇಶನ ಕೋರಿ ಕೇರಳ ಹೈಕೋರ್ಟ್ ಗೆ ಸಾಫ್ಟ್ ವೇರ್ ಇಂಜಿನಿಯರ್ ಒಬ್ಬರು ಅರ್ಜಿ ಸಲ್ಲಿಸಿದ್ದಾರೆ.

'ಬಳಕೆದಾರರ ಖಾಸಗಿತನ' ಎಂದಿಗೂ ನಮ್ಮ ಮೊದಲ ಆದ್ಯತೆ: ಕೇಂದ್ರದ ಆರೋಪಕ್ಕೆ ವಾಟ್ಸಾಪ್ ಪ್ರತಿಕ್ರಿಯೆ!
ಹೊಸ ಖಾಸಗಿತನ ನೀತಿಗಾಗಿ ತನ್ನ ಬಳಕೆದಾರರಿಂದ ಬಲವಂತದಿಂದ ಒಪ್ಪಿಗೆ ಪಡೆಯುತ್ತಿದೆ ಎಂದು ಕೇಂದ್ರ ಸರ್ಕಾರದ ಆರೋಪಕ್ಕೆ ಗುರುವಾರ ಪ್ರತಿಕ್ರಿಯಿಸಿರುವ ಮೇಸೆಂಜಿಂಗ್ ಆಪ್ ವಾಟ್ಸಾಪ್, ಬಳಕೆದಾರರ ಖಾಸಗಿತನಕ್ಕೆ ಹೆಚ್ಚಿನ ಆದ್ಯತೆಗೆ ಬದ್ಧವಾಗಿರುವುದಾಗಿ ಹೇಳಿದೆ.

ವಾಟ್ಸಾಪ್ 'ಮೋಸದ ಒಪ್ಪಿಗೆ' ಪಡೆದು ಬಳಕೆದಾರ ವಿರೋಧಿ ಅಭ್ಯಾಸದಲ್ಲಿ ತೊಡಗಿದೆ : ಹೈಕೋರ್ಟ್ ಗೆ ಕೇಂದ್ರ ಅಫಿಡವಿಟ್
ಕೇಂದ್ರ ಸರ್ಕಾರ ಗುರುವಾರ ದೆಹಲಿ ನ್ಯಾಯಾಲಯಕ್ಕೆ ಹೊಸದಾಗಿ ಅಫಿಡವಿಟ್ ಒಂದನ್ನು ಸಲ್ಲಿಸಿದ್ದು, ವಾಟ್ಸಾಪ್ ಹೊಸ ಖಾಸಗಿತನ ನೀತಿಗಾಗಿ 'ಮೋಸದ ಒಪ್ಪಿಗೆ' ಪಡೆಯುವ ಮೂಲಕ 'ಬಳಕೆದಾರ ವಿರೋಧಿ ಅಭ್ಯಾಸಗಳಲ್ಲಿ ತೊಡಗಿದೆಎಂದು ಹೇಳಿದೆ.

ಮಾಹಿತಿ ತಂತ್ರಜ್ಞಾನದ ಹೊಸ ನಿಯಮ ಪ್ರಶ್ನಿಸಿ ದೆಹಲಿ ಹೈಕೋರ್ಟ್ ಮೊರೆ ಹೋದ ವಾಟ್ಸ್ ಆಪ್
ಭಾರತದಲ್ಲಿ ಹೊಸ ಮಾಹಿತಿ ತಂತ್ರಜ್ಞಾನದ ನಿಯಮಗಳು ಜಾರಿಗೊಳಿಸಲಾಗುತ್ತಿರುವುದನ್ನು ಪ್ರಶ್ನಿಸಿ ವಾಟ್ಸ್ ಆಪ್ ದೆಹಲಿ ಹೈಕೋರ್ಟ್ ಮೊರೆ ಹೋಗಿದೆ.

ಸಲ್ಮಾನ್ ಖಾನ್ ಅಭಿನಯದ 'ರಾಧೆ' ಚಿತ್ರ: ಪೈರೆಸಿ ಕಂಡುಬಂದ ಅಕೌಂಟ್ ರದ್ದುಪಡಿಸುವಂತೆ ವಾಟ್ಸಾಪ್ ಗೆ ದೆಹಲಿ ಹೈಕೋರ್ಟ್ ಆದೇಶ
ಸಲ್ಮಾನ್ ಖಾನ್ ಅಭಿನಯದ ರಾಧೆ: ಯುವರ್ ಮೋಸ್ಟ್ ವಾಂಟೆಡ್ ಬಾಯ್ ಚಿತ್ರವನ್ನು ಅನಧಿಕೃತವಾಗಿ ಪೈರೇಟ್ಸ್ ಪ್ರತಿಗಳ ಶೇರ್ ಮಾಡುವುದು, ಸ್ಟೋರ್ ಮಾಡುವುದು, ಹಂಚುವುದು ಮತ್ತು ಮಾರಾಟ ಮಾಡುವುದು ಕಂಡುಬಂದರೆ ಅಂತಹ ಅಕೌಂಟ್ ಗಳನ್ನು ಇನ್ನು ಮುಂದೆ ರದ್ದುಗೊಳಿಸುವಂತೆ ದೆಹಲಿ ಹೈಕೋರ್ಟ್ ವಾಟ್ಸಾಪ್ ಗೆ ಆದೇಶ ನೀಡಿದೆ.

