
ಹೊಸ ಗೌಪ್ಯತೆ ನೀತಿ ಹಿಂಪಡೆಯಲು ಭಾರತ ಮತ್ತೊಮ್ಮೆ ತಾಕೀತು, ಯಾವುದೇ ಖಾತೆ ಡಿಲೀಟ್ ಮಾಡಿಲ್ಲ ಎಂದ ವಾಟ್ಸಾಪ್
ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯವು ಮೇ 18 ರಂದು ನೀಡಿದ ಹೇಳಿಕೆಯಲ್ಲಿ ವಾಟ್ಸಾಪ್ ತನ್ನವಿವಾದಾತ್ಮಕ ನೀತಿಯನ್ನು ಹಿಂತೆಗೆದುಕೊಳ್ಳುವಂತೆ ಮತ್ತೆ ಕೇಳಿದೆ. ಅಲ್ಲದೆ ಪ್ರತಿಕ್ರಿಯಿಸಲು ಏಳು ದಿನಗಳ ಕಾಲಾವಕಾಶ ಕೊಟ್ಟಿದೆ.

ಹೊಸ ಗೌಪ್ಯತೆ ನೀತಿ ಹಿಂಪಡೆಯುವಂತೆ ವಾಟ್ಸಾಪ್‌ಗೆ ಐಟಿ ಸಚಿವಾಲಯ ಸೂಚನೆ
ಹೊಸ ಗೌಪ್ಯತಾ ನೀತಿಯನ್ನು ಹಿಂಪಡೆದುಕೊಳ್ಳುವಂತೆ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಬುಧವಾರ ವಾಟ್ಸಾಪ್‌ಗೆ ನಿರ್ದೇಶನ ನೀಡಿದೆ ಎಂದು ಮೂಲಗಳು ತಿಳಿಸಿವೆ.

ನೂತನ ಗೌಪ್ಯತಾ ನೀತಿ: ನಿಲುವು ಸ್ಪಷ್ಟಪಡಿಸುವಂತೆ ಕೇಂದ್ರ, ವಾಟ್ಸಾಪ್, ಫೇಸ್'ಬುಕ್'ಗೆ ದೆಹಲಿ 'ಹೈ' ನೋಟಿಸ್
ತ್ವರಿತ ಸಂದೇಶ ಕಳುಹಿಸುವ ಅಪ್ಲಿಕೇಶನ್ ವಾಟ್ಸಾಪ್ ತನ್ನ ಬಳಕೆದಾರರಿಗೆ ವಿಧಿಸಿರುವ ನೂತನ ಗೌಪ್ಯತಾ ನೀತಿ ಕುರಿತು ನಿಲುವು ಸ್ಪಷ್ಟಪಡಿಸುವಂತೆ ಕೇಂದ್ರ ಸರ್ಕಾರ, ವಾಟ್ಸಾಪ್, ಫೇಸ್'ಬುಕ್'ಗೆ ದೆಹಲಿ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.

ವಾಟ್ಸಾಪ್ ಹೊಸ ಗೌಪ್ಯತೆ ನೀತಿ ಒಪ್ಪಿಕೊಳ್ಳಲ್ಲು ಇಂದೇ ಕೊನೆ ದಿನ: ಹೊಸ ನೀತಿಗೆ ಸಮ್ಮತಿಸದಿದ್ದವರ ಖಾತೆ ಏನಾಗಲಿದೆ? ಇಲ್ಲಿದೆ ವಿವರ
ವಾಟ್ಸಾಪ್ ತನ್ನ ಬಳಕೆದಾರರಿಗೆ ಮೇ 15 ರೊಳಗೆ ಅದರ ಹೊಸ ಗೌಪ್ಯತೆ ನೀತಿಯನ್ನು ಒಪ್ಪಿಕೊಳ್ಳಬೇಕು ಎಂದು ಹೇಳಿದೆ, ಹಾಗೊಮ್ಮೆ ಒಪ್ಪಿಕೊಳ್ಳದೆ ಹೋದಲ್ಲಿ ನಿಮ್ಮಖಾತೆ ರದ್ದಾಗಲಿದೆಯೆ? ತಿಳಿಯಲು ಮುಂದೆ ಓದಿ.

ಗೌಪ್ಯತೆ ನೀತಿಯನ್ನು ತನಿಖೆ ಮಾಡುವ ಸಿಸಿಐ ಆದೇಶ ವಿರುದ್ಧ ಫೇಸ್‌ಬುಕ್, ವಾಟ್ಸಾಪ್ ಮನವಿ ದೆಹಲಿ ಹೈಕೋರ್ಟ್ ನಲ್ಲಿ ವಜಾ
ವಾಟ್ಸಾಪ್‌ನ ಹೊಸ ಗೌಪ್ಯತೆ ನೀತಿಯ ಬಗ್ಗೆ ತನಿಖೆ ನಡೆಸುವಂತೆ ಭಾರತದ ಸ್ಪರ್ಧಾ ಆಯೋಗ ಸಿಸಿಐ ಆದೇಶವನ್ನು ಪ್ರಶ್ನಿಸಿ ಸಾಮಾಜಿಕ ಜಾಲತಾಣ ವೇದಿಕೆಗಳಾದ ಫೇಸ್‌ಬುಕ್ ಮತ್ತು ವಾಟ್ಸಾಪ್ ಸಲ್ಲಿಸಿದ್ದ ಮನವಿಯನ್ನು ದೆಹಲಿ ಹೈಕೋರ್ಟ್ ಗುರುವಾರ ವಜಾಗೊಳಿಸಿದೆ.

ಈ ಮೊಬೈಲ್ ಫೋನ್ ಗಳಲ್ಲಿ ಜನವರಿ 1 ರಿಂದ ವಾಟ್ಸ್ ಆಪ್ ಕಾರ್ಯನಿರ್ವಹಣೆ ಸ್ಥಗಿತ!
ಮೆಸೇಜಿಂಗ್ ಆಪ್ ವಾಟ್ಸ್ ಆಪ್ ಜನವರಿ 1 ರಿಂದ ನಿರ್ದಿಷ್ಟ ಮೊಬೈಲ್ ಫೋನ್ ಗಳಲ್ಲಿ ಕಾರ್ಯನಿರ್ವಹಣೆಯನ್ನು ಸ್ಥಗಿತಗೊಳಿಸಲಿದೆ.

ವಾಟ್ಸಪ್ ಮೂಲಕ ಹಣ ರವಾನೆಗೆ ಯಾವುದೇ ರೀತಿಯ ಶುಲ್ಕವಿಲ್ಲ: ಮಾರ್ಕ್ ಜುಕರ್ ಬರ್ಗ್!
ವಾಟ್ಸಪ್ ಮೂಲಕ ಹಣ ರವಾನೆಗೆ ಯಾವುದೇ ರೀತಿಯ ಶುಲ್ಕವಿಲ್ಲ ಎಂದು ವಾಟ್ಸಪ್ ನ ಮಾಲೀಕತ್ವವಿರುವ ಫೇಸ್ ಬುಕ್ ಸಿಇಒ ಮಾರ್ಕ್ ಜುಕರ್ ಬರ್ಗ್ ಹೇಳಿದ್ದಾರೆ.

ವಾಟ್ಸ್ ಆಪ್ ಮೂಲಕವೂ ಎಲ್ ಪಿಜಿ ಬುಕ್ ಮಾಡಬಹುದು: ಇಲ್ಲಿದೆ ಪೂರ್ಣ ಮಾಹಿತಿ
ನ.1 ರಿಂದ ಎಲ್ ಪಿಜಿ ಬುಕಿಂಗ್ ನಲ್ಲಿ ಹಲವು ಬದಲಾವಣೆಗಳಾಗಿದ್ದು, ಬುಕ್ಕಿಂಗ್ ಮಾಡುವುದಕ್ಕೆ ಬಳಕೆ ಮಾಡುವ ನಂಬರ್ ಸಹ ಬದಲಾವಣೆಯಾಗಿದೆ.

ಹಳೆ ವಾಟ್ಸಪ್ ಡಿಲೀಟ್, ಹೊಸದನ್ನು ಇನ್ಸ್ಟಾಲ್ ಮಾಡಿದ ನಟಿ ರಾಗಿಣಿ: ಸಾಕ್ಷ್ಯ ನಾಶಕ್ಕೆ ಯತ್ನ?
ಡ್ರಗ್ಸ್ ಜಾಲಕ್ಕೆ ಸಂಬಂಧಿಸಿ ಸಿಸಿಬಿ ಕಚೇರಿಗೆ ಹಾಜರಾಗಿರುವ ನಟಿ ರಾಗಿಣಿ ದ್ವಿವೇದಿಯ ಹಲವು ನಡೆ ಅಧಿಕಾರಿಗಳ ಅನುಮಾನಕ್ಕೆ ಎಡೆಮಾಡಿದೆ. ರಾಗಿಣಿ ತನ್ನ ಹಳೆಯ ವಾಟ್ಸಪ್ ಅನ್ನು ಡಿಲೀಟ್ ಮಾಡಿರುವುದು ಈ ಅನುಮಾನಕ್ಕೆ ಕಾರಣವಾಗಿದೆ

