ಇನ್ನುಮುಂದೆ ವಾಟ್ಸಾಪ್ ನಿಂದಲೇ ಕೊರೊನಾ ಲಸಿಕೆ ಅಪಾಯಿಂಟ್ಮೆಂಟ್ ಬುಕ್ ಮಾಡಬಹುದು!
ಅಗಸ್ಟ್ 5 ರಂದು ಮೈ ಗವ್ ಕೊರೊನಾ ಸಹಾಯವಾಣಿ ವಾಟ್ಸಾಪ್ ಗ್ರೂಪಿನ ಮುಖಾಂತರ ಬಳಕೆದಾರರು ತಮ್ಮ ಲಸಿಕೆ ಪ್ರಮಾಣಪತ್ರವನ್ನು ಡೌನ್ ಲೋಡ್ ಮಾಡಿಕೊಳ್ಳುವ ಸವಲತ್ತನ್ನು ಜಾರಿಗೆ ತಂದಿತ್ತು. ಇದುವರೆಗೂ ಒಟ್ಟು 32 ಲಕ್ಷ ಮಂದಿ ಈ ಸವಲತ್ತನ್ನು ಬಳಸಿಕೊಂಡು ವ್ಯಾಕ್ಸಿನ್ ಸರ್ಟಿಫಿಕೆಟ್ ಅನ್ನು ಡೌನ್ ಲೋಡ್ ಮಾಡಿಕೊಂಡಿದ್ದರು.

ನವದೆಹಲಿ: ಮೈ ಗವ್ ಕೊರೊನಾ ಸಹಾಯವಾಣಿ(MyGov Corona Helpdesk)ಯ ವಾಟ್ಸಾಪ್ ಗುಂಪಿನ ಸಹಾಯದಿಂದ ಇನ್ನುಮುಂದೆ ವಾಟ್ಸಾಪ್ ಬಳಕೆದಾರರು ತಮ್ಮ ಹತ್ತಿರದ ಲಸಿಕಾ ಕೇಂದ್ರಗಳ ಮಾಹಿತಿ ಪಡೆಯಬಹುದು ಮತ್ತುಆಅ ಕೇಂದ್ರದಲ್ಲಿ ಲಸಿಕೆಯನ್ನು ಬುಕ್ ಮಾಡಬಹುದು.
ಅಗಸ್ಟ್ 5 ರಂದು ಮೈ ಗವ್ ಕೊರೊನಾ ಸಹಾಯವಾಣಿ ವಾಟ್ಸಾಪ್ ಗ್ರೂಪಿನ ಮುಖಾಂತರ ಬಳಕೆದಾರರು ತಮ್ಮ ಲಸಿಕೆ ಪ್ರಮಾಣಪತ್ರವನ್ನು ಡೌನ್ ಲೋಡ್ ಮಾಡಿಕೊಳ್ಳುವ ಸವಲತ್ತನ್ನು ಜಾರಿಗೆ ತಂದಿತ್ತು. ಇದುವರೆಗೂ ಒಟ್ಟು 32 ಲಕ್ಷ ಮಂದಿ ಈ ಸವಲತ್ತನ್ನು ಬಳಸಿಕೊಂಡು ವ್ಯಾಕ್ಸಿನ್ ಸರ್ಟಿಫಿಕೆಟ್ ಅನ್ನು ಡೌನ್ ಲೋಡ್ ಮಾಡಿಕೊಂಡಿದ್ದರು. ಇದೀಗ ಮತ್ತೊಂದು ಹೊಸ ಸವಲತ್ತನ್ನು ವಾಟ್ಸಾಪ್ ಬಳಕೆದಾರರಿಗೆ ನೀಡಲು ಮೈ ಗವ್ ಕೊರೊನಾ ಸಹಾಯವಾಣಿ ಮುಂದಾಗಿದೆ.
ನಾಗರಿಕರು ಕೊರೊನಾ ಸಂಬಂಧಿ ಮಾಹಿತಿಯನ್ನು ಪಡೆದುಕೊಳ್ಳಲು ಮೈ ಗವ್ ಕೊರೊನಾ ಸಹಾಯವಾಣಿ ಅಧಿಕೃತ ಮೂಲವಾಗಿದೆ.
ಮೈ ಗವ್ ಕೊರೊನಾ ಸಹಾಯವಾಣಿ ಸೇವೆಯನ್ನು ಪಡೆದುಕೊಳ್ಳಲು ವಾಟ್ಸಾಪ್ ಬಳಕೆದಾರರು ಮಾಡಬೇಕಿರುವುದಿಷ್ಟೇ.
+91 9013151515 ಈ ವಾಟ್ಸಾಪ್ ನಂಬರನ್ನು ನಿಮ್ಮ ಮೊಬೈಲಿನಲ್ಲಿ ಸೇವ್ ಮಾಡಿಕೊಳ್ಳಿ. ಲಸಿಕೆ ಬುಕ್ ಮಾಡಲು ಈ ಸಂಖ್ಯೆಗೆ Book Slot ಎಂದು ಟೈಪ್ ಮಾಡಿ ಕಳಿಸಿ. ಆಗ ನಿಮ್ಮ ಮೊಬೈಲ್ ಸಂಖ್ಯೆಗೆ ಒಟಿಪಿ ಕಳಿಸಲ್ಪಡುತ್ತದೆ. ಅದನ್ನು ನಮೂದಿಸಿದರೆ ನಂತರ ನಿಮಗೆ ಬೇಕಾದ ದಿನಾಂಕ ಮತ್ತು ಸ್ಥಳವನ್ನು ಆಯ್ಕೆ ಮಾಡಿಕೊಳ್ಳಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


