Smoking

ವಿಮಾನದಲ್ಲಿ ಬಾಬ್ಬಿ ಕಟಾರಿಯಾ ಧೂಮಪಾನ ವಿಡೀಯೋ ವೈರಲ್: ತನಿಖೆಗೆ ಆದೇಶಿಸಿದ ವಿಮಾನಯಾನ ಸಚಿವ ಸಿಂಧಿಯಾ
ಬಾಡಿ ಬಿಲ್ಡರ್ ಬಾಬ್ಬಿ ಕಟಾರಿಯಾ ಸ್ಪೈಸ್ ಜೆಟ್ ವಿಮಾನದಲ್ಲಿ ಧೂಮಪಾನ ಮಾಡುತ್ತಿರುವ ವೀಡಿಯೋ ವೈರಲ್ ಆಗಿದ್ದು, ಈ ಬಗ್ಗೆ ತನಿಖೆ ನಡೆಸುವುದಕ್ಕೆ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಆದೇಶಿಸಿದ್ದಾರೆ.

ಧೂಮಪಾನ ಮುಕ್ತ ಹೋಟೆಲ್/ರೆಸ್ಟೋರೆಂಟ್‌ಗಳು: ಆರೋಗ್ಯ ಮತ್ತು ವ್ಯವಹಾರದ ಸಮಗೆಲುವು
ಧೂಮಪಾನಕ್ಕೆ ಅವಕಾಶ ನೀಡದ ರೆಸ್ಟೋರೆಂಟ್ ಮತ್ತು ಹೋಟೆಲ್‌ಗಳು ಹೆಚ್ಚಿನ ಗ್ರಾಹಕರನ್ನು ಆಕರ್ಷಿಸುತ್ತಿದ್ದು, ಅಧಿಕ ವ್ಯವಹಾರವನ್ನು ನಡೆಸುತ್ತಿವೆ ಎಂಬ ವಿಚಾರ ಅಧ್ಯಯನಗಳಿಂದ ತಿಳಿದುಬಂದಿದೆ.

ಕೋಟ್ಪಾ ಕಾಯ್ದೆಗೆ ತಿದ್ದುಪಡಿಗೆ ಒತ್ತಾಯಿಸಿ ಕ್ಯಾನ್ಸರ್ ಜಯಿಸಿದವರಿಂದ ಕೇಂದ್ರ, ರಾಜ್ಯ ಸರ್ಕಾರಕ್ಕೆ ಪತ್ರ
ಕೋವಿಡ್ ಮೂರನೇ ಮತ್ತು ಭವಿಷ್ಯದ ಅಲೆಗಳ ವಿರುದ್ಧ ಹೋರಾಡಲು ಕೋಟ್ಪಾ ಕಾಯ್ದೆಗೆ ತಿದ್ದುಪಡಿ ತಂದು ತಂಬಾಕು ಮಾರಾಟ, ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮತ್ತು ಉಗುಳುವಿಕೆಯನ್ನು ನಿಷೇಧಿಸಬೇಕೆಂದು ಒತ್ತಾಯಿಸಿ ಕ್ಯಾನ್ಸರ್ ಜಯಿಸಿದವರು ಕೇಂದ್ರ, ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

ಕೋಟ್ಪಾಗೆ ಬಲ ತುಂಬಲು ತಿದ್ದುಪಡಿ ತರಬೇಕು, ಧೂಮಪಾನಕ್ಕೆ ಕನಿಷ್ಠ ಕಾನೂನು ವಯಸ್ಸನ್ನು 18 ರಿಂದ 21ಕ್ಕೆ ಏರಿಸಬೇಕು!
ತಂಬಾಕು ನಿಯಂತ್ರಣಕ್ಕೆ ಸದ್ಯ ಚಾಲ್ತಿಯಲ್ಲಿರುವ ಕೋಟ್ಪಾ 2003 ಕಾಯ್ದೆಯಲ್ಲಿ ಬಹಳಷ್ಟು ನ್ಯೂನತೆಗಳಿವೆ ಎಂದು ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ (ಏನ್ಎಲ್ಎಸ್ಐಯು) ಮಂಗಳವಾರ ಬಿಡುಗಡೆ ಮಾಡಿದ “ಭಾರತದಲ್ಲಿ ತಂಬಾಕು ನಿಯಂತ್ರಣ ಕಾನೂನು - ಮೂಲ ಮತ್ತು ಪ್ರಸ್ತಾವಿತ ಸುಧಾರಣೆಗಳು” ವರದಿ ಹೇಳಿದೆ.

ಧೂಮಪಾನ ನಿಷೇಧ ಕಾನೂನು ಸಮರ್ಪಕ ಅನುಷ್ಠಾನಕ್ಕಾಗಿ ಪ್ರಧಾನಿ, ಸಿಎಂಗೆ ಪತ್ರ ಬರೆದ ನಳಿನಿ!
ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧ ಕಾನೂನು 2008ರ ಅಕ್ಟೋಬರ್ 2ರಂದು ಜಾರಿಗೆ ಬಂದಿದ್ದು ನಾಳೆಗೆ 12ನೇ ವಾರ್ಷಿಕೋತ್ಸವವನ್ನು ಆಚರಿಸಲಾಗುತ್ತಿದೆ. ಆದರೆ ಕಾನೂನು ಕಾನೂನಾಗೆ ಉಳಿದಿದೆ ಹೊರತು ಅದು ಸಮರ್ಪಕವಾಗಿ ಅನುಷ್ಠಾನವಾಗಲಿಲ್ಲ ಎಂದು ನಳಿನಿ ಸತ್ಯನಾರಾಯಣ ಅವರು ಆರೋಪಿಸಿ ಪ್ರಧಾನಿ, ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.

ಲಾಕ್ ಡೌನ್ ದಿನಗಳಲ್ಲಿ 'ನೀರ್ ದೋಸೆ' ಹಾಗೂ ಸಿಗರೇಟ್ ಗಳನ್ನು ನೆನೆದ ಹರಿಪ್ರಿಯಾ!
ನೀರ್ ದೋಸೆ" ಚಿತ್ರದಲ್ಲಿ ಬೆಳ್ಳುಳ್ಳಿ ಅಲಿಯಾಸ್ ಕುಮುದಾ ಪಾತ್ರದ ಮೂಲಕ ಪ್ರೇಕ್ಷಕರ ನಿದ್ದೆಗೆಡಿಸಿದ್ದ ನಟಿ ಹರಿಪ್ರಿಯಾ ಲಾಕ್ ಡೌನ್ ದಿನಗಳಲ್ಲಿ ಮತ್ತೊಮ್ಮೆ ಆ ಪಾತ್ರದ ಕುರಿತು ಮಾತನಾಡಿದ್ದಾರೆ.

ಮೈಸೂರು: ಧೂಮಪಾನಕ್ಕೆ ಆಕ್ಷೇಪ, ಹುಡುಗನ ಕೈ ಮುರಿದ ಪುಂಡರು
ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡುತ್ತಿದ್ದನ್ನು ಪ್ರಶ್ನಿಸಿದ್ದಕ್ಕೆ 15 ವರ್ಷದ ಹುಡುಗನ ಮುಖದ ಮೇಲೆ ಅಪರಿಚಿತ ದುಷ್ಕರ್ಮಿಗಳು ಸಿಗರೇಟ್ ಹೊಗೆಬಿಟ್ಟು, ಹಿಗ್ಗಾಮುಗ್ಗಾ ಥಳಿಸಿ ಆತನ ಕೈ ಮುರಿದಿರುವ ಘಟನೆ ನಡೆದಿದೆ.

ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ: 2 ಕ್ಲಬ್ ಗಳಿಗೆ ದಂಡ, ಲೈಸೆನ್ಸ್ ರದ್ದುಗೊಳಿಸಿದ ಬಿಬಿಎಂಪಿ
ನಗರದ ಯುಬಿ ಸಿಟಿಯ ಶಿರೋ ಬಾರ್. ವಿಠಲ್ ಮಲ್ಯ ರಸ್ತೆಯ ಬಿಯರಿ ಕ್ಲಬ್ ಮೇಲೆ ದಾಳಿ ನಡೆಸಿದ ಬಿಬಿಎಂಪಿ ಅಧಿಕಾರಿಗಳು ಸಾರ್ವಜನಿಕ ಸ್ಥಳದಲ್ಲಿ ಧೂಮಾಪಾನ ಸೇವನೆಗೆ ಅವಕಾಶ ಮಾಡಿಕೊಟ್ಟ ಹಿನ್ನಲೆಯಲ್ಲಿ ಮಾಲೀಕರಿಗೆ ದಂಡ ವಿಧಿಸಿ, ತಾತ್ಕಾಲಿಕವಾಗಿ ಪರವಾನಗಿ ರದ್ದು ಮಾಡಿದ್ದಾರೆ.

ಧಮ್ ಮಾರೋ ಧಮ್: ಪಟಾಕಿ ಸಿಡಿಸಿದರೇ ಅಸ್ತಮಾ ಎಂದಿದ್ದ ಪ್ರಿಯಾಂಕಾ ವಿರುದ್ಧ ನೆಟಿಗರು ಗರಂ!
ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಈ ಹಿಂದೆ ಪಟಾಕಿ ಹೊಡೆಯಬೇಡಿ, ಇದರಿಂದ ಅಸ್ತಮಾ ರೋಗ ಬರುತ್ತದೆ ಎಂದು ಹೇಳಿ ವಿವಾದಕ್ಕೆ ಗುರಿಯಾಗಿದ್ದರು.

