ಲಾಕ್ ಡೌನ್ ದಿನಗಳಲ್ಲಿ 'ನೀರ್ ದೋಸೆ' ಹಾಗೂ ಸಿಗರೇಟ್ ಗಳನ್ನು ನೆನೆದ ಹರಿಪ್ರಿಯಾ!
ನೀರ್ ದೋಸೆ" ಚಿತ್ರದಲ್ಲಿ ಬೆಳ್ಳುಳ್ಳಿ ಅಲಿಯಾಸ್ ಕುಮುದಾ ಪಾತ್ರದ ಮೂಲಕ ಪ್ರೇಕ್ಷಕರ ನಿದ್ದೆಗೆಡಿಸಿದ್ದ ನಟಿ ಹರಿಪ್ರಿಯಾ ಲಾಕ್ ಡೌನ್ ದಿನಗಳಲ್ಲಿ ಮತ್ತೊಮ್ಮೆ ಆ ಪಾತ್ರದ ಕುರಿತು ಮಾತನಾಡಿದ್ದಾರೆ.

ನೀರ್ ದೋಸೆ" ಚಿತ್ರದಲ್ಲಿ ಬೆಳ್ಳುಳ್ಳಿ ಅಲಿಯಾಸ್ ಕುಮುದಾ ಪಾತ್ರದ ಮೂಲಕ ಪ್ರೇಕ್ಷಕರ ನಿದ್ದೆಗೆಡಿಸಿದ್ದ ನಟಿ ಹರಿಪ್ರಿಯಾ ಲಾಕ್ ಡೌನ್ ದಿನಗಳಲ್ಲಿ ಮತ್ತೊಮ್ಮೆ ಆ ಪಾತ್ರದ ಕುರಿತು ಮಾತನಾಡಿದ್ದಾರೆ.
ತಮ್ಮ ಬ್ಲಾಗಿನಲ್ಲಿ ಈ ಕುರಿತು ಬರೆದುಕೊಂಡ ನಟಿ ನಿರ್ದೇಶಕ ವಿಜಯಪ್ರಸಾದ್ ಅವರ ಚಿತ್ರದಲ್ಲಿ ಕೆಲಸ ಮಾಡಿದ ಅನುಭವ ಮತ್ತು ಧೂಮಪಾನದ ಪರಿಣಾಮಗಳನ್ನು ಹಂಚಿಕೊಂಡಿದ್ದಾರೆ. ಈ ಚಿತ್ರದಲ್ಲಿ ಜಗ್ಗೇಶ್ ಮುಖ್ಯ ಪಾತ್ರದಲ್ಲಿ ನಟಿಸಿದ್ದು, ದತ್ತಣ್ಣ ಮತ್ತು ಸುಮಲತಾ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ.
"ನಾನು ಧೂಮಪಾನ ಮಾಡುತ್ತೇನೆ ಎಂದು ನಾನು ಎಂದಿಗೂ ಯೋಚಿಸಿರಲಿಲ್ಲ, ಆದರೆ ಇಲ್ಲಿ ನಾನು ನನ್ನ ಬೆರಳುಗಳ ನಡುವೆ ಸಿಗರೇಟ್ ಹಿಡಿದಿರುತ್ತೇನೆ ಮತ್ತು ಅದನ್ನು ಹೇಗೆ ಪಫ್ ಮಾಡುವುದೆಂದು ಕಲಿತೆ" ಹರಿಪ್ರಿಯಾ ಹೇಳುತ್ತಾರೆ, ಇದಕ್ಕೆ ಸಂಬಂಧಿಸಿ ಧೂಮಪಾನಿಗಳಾಗಿದ್ದ ತನ್ನ ಸಹೋದರ ಮತ್ತು ಸ್ನೇಹಿತರಿಂದ ಸಲಹೆಗಳನ್ನು ನಟಿ ಪಡೆದಿದ್ದರಂತೆ.
“ನಾನು ಯಾವಾಗಲೂ ಧೂಮಪಾನವನ್ನು ತ್ಯಜಿಸುವಂತೆ ಹೇಳುತ್ತಿದ್ದೆ. ಆದರೆ ನಾನೇ ಒಂದು ದಿನ ಕೈನಲ್ಲಿ ಸಿಗರೇಟ್ ಹಿಡಿಯಲಿದ್ದೇನೆಂದು ಯಾರು ಭಾವಿಸಿದ್ದರು?"
ಧೂಮಪಾನವು ತುಂಬಾ ಕೆಟ್ಟ ಪರಿಣಾಮ ಬೀರುವುದರಿಂದ ಜನರು ಹೇಗೆ ವ್ಯಸನಿಯಾಗುತ್ತಾರೆ ಎಂದು ಹರಿಪ್ರಿಯಾ ಆಶ್ಚರ್ಯಪಡುತ್ತಾರೆ, ಅಲ್ಲದೆ ಈ ಸಿಗರೇಟ್ ಸೇವನೆ ಆಕೆಯ ಮೇಲೂ ಎಷ್ಟು ಕೆಟ್ಟ ಪರಿಣಾಮ ಬೀರಿದೆ ಎಂದೂ ನೆನಪಿಸಿಕೊಳ್ಳುತ್ತಾರೆ." ಆ ದಿನಗಳಲ್ಲಿ ನನಗೆ ಪ್ರತಿ ಸಾರಿ ಮೈಗ್ರೇನ್ ಪ್ರಾರಂಭವಾಗುತ್ತಿತ್ತು. ಇದು ನಾಲ್ಕು ವರ್ಷಗಳ ನಂತರವೂ ಇಂದಿಗೂ ನನ್ನ ಮೇಲೆ ಪರಿಣಾಮ ಬೀರುತ್ತಲಿದೆ. ಆದರೆ ಚಿತ್ರ ಜನಪ್ರಿಯತೆ ಎಲ್ಲವನ್ನೂ ಇಷ್ಟವಾಗಿಸಿದೆ. "ಅಲ್ಲದೆ ಮುಖೇಶ್ ಅವರ ಸಾಲುಗಳಾದ - ‘Smoking Kills’ ಎನ್ನುವ ಸಾಲನ್ನು ಹೇಳಲು ನಟಿ ಮರೆತಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


