ಧಮ್ ಮಾರೋ ಧಮ್: ಪಟಾಕಿ ಸಿಡಿಸಿದರೇ ಅಸ್ತಮಾ ಎಂದಿದ್ದ ಪ್ರಿಯಾಂಕಾ ವಿರುದ್ಧ ನೆಟಿಗರು ಗರಂ!
ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಈ ಹಿಂದೆ ಪಟಾಕಿ ಹೊಡೆಯಬೇಡಿ, ಇದರಿಂದ ಅಸ್ತಮಾ ರೋಗ ಬರುತ್ತದೆ ಎಂದು ಹೇಳಿ ವಿವಾದಕ್ಕೆ ಗುರಿಯಾಗಿದ್ದರು.

Published On :
ಬೆಂಗಳೂರು: ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಈ ಹಿಂದೆ ಪಟಾಕಿ ಹೊಡೆಯಬೇಡಿ, ಇದರಿಂದ ಅಸ್ತಮಾ ರೋಗ ಬರುತ್ತದೆ ಎಂದು ಹೇಳಿ ವಿವಾದಕ್ಕೆ ಗುರಿಯಾಗಿದ್ದರು. ಇದೀಗ ಪತಿ ನಿಕ್ ಜೊತೆ ಪ್ರಿಯಾಂಕ್ ಸಿಗರೇಟ್ ಸೇದುತ್ತಿರುವುದಕ್ಕೆ ನೆಟಿಗರು ಗರಂ ಆಗಿದ್ದಾರೆ.
ಮಿಯಾಮಿ ಯಾಚ್ ಬೀಚ್ ನಲ್ಲಿ ಪ್ರಿಯಾಂಕಾ ಚೋಪ್ರಾ ತನ್ನ ಪತಿ ನಿಕ್ ಜೋನಸ್ ಮತ್ತು ತಾಯಿ ಮಧು ಚೋಪ್ರಾ ಜೊತೆ ಸಿಗರೇಟು ಸೇದುತ್ತಾ ಕುಳಿತ್ತಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ. ಈ ಫೋಟೋ ಕಂಡ ನೆಟಿಗರು ಪ್ರಿಯಾಂಕರನ್ನು ತರಾಟೆ ತೆಗೆದುಕೊಂಡಿದ್ದರು.
ಪ್ರಿಯಾಂಕಾಳನ್ನು ನೆಟಿಗರು ಕಪಟಿ ಎಂದು ಕರೆದಿದ್ದಾರೆ. ಈ ಬಗ್ಗೆ ಪ್ರಿಯಾಂಕಾ ಚೋಪ್ರಾ ಸಹೋದರಿ ಪರಿಣಿತ ಚೋಪ್ರಾರನ್ನು ಕೇಳಿದ್ದಕ್ಕೆ ಮೌನಕ್ಕೆ ಶರಣಾಗಿದ್ದಾರೆ.
ಇನ್ನು ಈ ಪ್ರಶ್ನೆಗೆ ಉತ್ತರಿಸಲು ನನಗೆ ಯಾವುದೇ ಹಕ್ಕಿಲ್ಲ. ಹಾಗಾಗಿ ನಾನು ಏನನ್ನು ಹೇಳುವುದಿಲ್ಲ ಎಂದು ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Bollywoodಬಾಲಿವುಡ್priyanka chopraಪ್ರಿಯಾಂಕಾ ಚೋಪ್ರಾಮಿಯಾಮಿParineeti ChopraSmokingಧೂಮಪಾನMiamiಪರಿಣಿತಿ ಚೋಪ್ರಾ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


