ಧೂಮಪಾನ ನಿಷೇಧ ಕಾನೂನು ಸಮರ್ಪಕ ಅನುಷ್ಠಾನಕ್ಕಾಗಿ ಪ್ರಧಾನಿ, ಸಿಎಂಗೆ ಪತ್ರ ಬರೆದ ನಳಿನಿ!
ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧ ಕಾನೂನು 2008ರ ಅಕ್ಟೋಬರ್ 2ರಂದು ಜಾರಿಗೆ ಬಂದಿದ್ದು ನಾಳೆಗೆ 12ನೇ ವಾರ್ಷಿಕೋತ್ಸವವನ್ನು ಆಚರಿಸಲಾಗುತ್ತಿದೆ. ಆದರೆ ಕಾನೂನು ಕಾನೂನಾಗೆ ಉಳಿದಿದೆ ಹೊರತು ಅದು ಸಮರ್ಪಕವಾಗಿ ಅನುಷ್ಠಾನವಾಗಲಿಲ್ಲ ಎಂದು ನಳಿನಿ ಸತ್ಯನಾರಾಯಣ ಅವರು ಆರೋಪಿಸಿ ಪ್ರಧಾನಿ, ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.

ಬೆಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧ ಕಾನೂನು 2008ರ ಅಕ್ಟೋಬರ್ 2ರಂದು ಜಾರಿಗೆ ಬಂದಿದ್ದು ನಾಳೆಗೆ 12ನೇ ವಾರ್ಷಿಕೋತ್ಸವವನ್ನು ಆಚರಿಸಲಾಗುತ್ತಿದೆ. ಆದರೆ ಕಾನೂನು ಕಾನೂನಾಗೆ ಉಳಿದಿದೆ ಹೊರತು ಅದು ಸಮರ್ಪಕವಾಗಿ ಅನುಷ್ಠಾನವಾಗಲಿಲ್ಲ ಎಂದು ನಳಿನಿ ಸತ್ಯನಾರಾಯಣ ಅವರು ಆರೋಪಿಸಿ ಪ್ರಧಾನಿ, ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.
ಪರೋಕ್ಷ ಧೂಮಪಾನದಿಂದ ಕ್ಯಾನ್ಸರ್‌ಗೆ ತುತ್ತಾದ ನಳಿನಿ ಸತ್ಯನಾರಾಯಣರವರು, ಮಾನ್ಯ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ, ಭಾರತ ಸರ್ಕಾರದ ಆರೋಗ್ಯ ಮಂತ್ರಿಗಳಾದ ಡಾ. ಹರ್ಷವರ್ಧನ್ ಹಾಗು ಮಾನ್ಯ ಮುಖ್ಯಮಂತ್ರಿ ಶ್ರೀ ಬಿ ಎಸ್ ಯಡಿಯೂರಪ್ಪನವರಿಗೆ ಪತ್ರ ಬರೆದಿದ್ದಾರೆ. ಈ ಪತ್ರದಲ್ಲಿ ಅವರು ದೇಶದಲ್ಲಿ ಇರುವ ಧೂಮಪಾನ ಮುಕ್ತ ಕಾನೂನನ್ನು ಸಮರ್ಪಕವಾಗಿ ಅನುಷ್ಠಾನ ಮಾಡಿ ಪರೋಕ್ಷ ಧೂಮಪಾನಿಗಳ ಆರೋಗ್ಯವನ್ನು ಕಾಪಾಡುವಂತೆ ಆಗ್ರಹಿಸಿದ್ದಾರೆ.
27 ಸೆಪ್ಟೆಂಬರ್ 2020ರಂದು ಇವರು ಬರೆದ ಪತ್ರದಲ್ಲಿ ನಳಿನಿ ಅವರು ಕ್ಯಾನ್ಸರ್‌ನಿಂದ ಅವರು ಅನುಭವಿಸಿರುವ ನೋವನ್ನು ತೋಡಿಕೊಂಡಿದ್ದಾರೆ. 10 ವರ್ಷಗಳ ಮುಂಚೆ ಅವರಿಗೆ ಗಂಟಲು ಕ್ಯಾನ್ಸರ್ ಇರುವು ಖಾತ್ರಿಯಾಗಿತ್ತು ಹಾಗು ವೈದ್ಯರು ಅವರ ಕ್ಯಾನ್ಸರ್‌ಗೆ ಪರೋಕ್ಷ ಧೂಮಪಾನ ಕಾರಣವಿರಬಹುದು ಎಂದು ಅಭಿಪ್ರಾಯಪಟ್ಟಿದ್ದರು.
ಈ ಸಿಗರೇಟ್ ನಿಷೇಧ, ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮ ಹಾಗೂ ಚಿತ್ರ ಸಹಿತ ಎಚ್ಚರಿಗೆ ಮುದ್ರಿಸುವುದನ್ನು ಕಡ್ಡಾಯಗೊಳಿಸಿರುವುದೇ ಸೇರಿದಂತೆ ತಂಬಾಕು ದುಷ್ಪರಿಣಾಮವನ್ನು ತಡೆಯಲು ತೆಗೆದುಕೊಂಡಿರುವ ಕ್ರಮಗಳ ಶ್ಲಾಘಿಸುವುದರೊಂದಿಗೆ, ಕೋಟ್ಪಾ ಕಾಯಿದೆಯ ಕೆಲವು ಸೆಕ್ಷನ್‌ಗಳು, ಅಸಮರ್ಪಕ ಹಾಗು ತಾತ್ಸಾರ ಮನಸ್ಥಿತಿಯಿಂದ ನಿಷ್ರಯೋಜಕವಾಗಿದೆ ಎಂದೂ ಅವರ ಕಳವಳ ವ್ಯಕ್ತಪಡಿಸಿದ್ದಾರೆ.
ನಳಿನಿ ಅವರು, ಪತ್ರದಲ್ಲಿ, ಶೇ. 17ರಷ್ಟು ಜನರು ಹೋಟೆಲ್, ಬಾರ & ರೆಸ್ಟೋರೆಂಟ್, ಪಬ್, ಕ್ಲಬ್ ಇತ್ಯಾದಿ ಸ್ಥಳಗಳಲ್ಲಿ ಪರೋಕ್ಷ ಧೂಮಪಾನಕ್ಕೆ ತುತ್ತಾಗುತ್ತಿದ್ದಾರೆ. ಕೋಟ್ಪಾ 2003 ಕಾಯಿದೆಯು 30ಕ್ಕಿಂತ ಹೆಚ್ಚಿನ ಆಸನ ಅಥವಾ ರೂಮ್ ವ್ಯವಸ್ಥೆ ಇರುವ, ರೆಸ್ಟೋರೆಂಟ್ ಹಾಗು ಹೋಟೆಲ್‌ಗಳಲ್ಲಿ, ಪ್ರತ್ಯೇಕ ಧೂಮಪಾನ ವಲಯ/ಕೊಠಡಿಯನ್ನು ನಿರ್ಮಾಣ ಮಾಡಲು ಅವಕಾಶ ಕಲ್ಪಿಸುತ್ತದೆ. ಇಂತಹ ಧೂಮಪಾನ ವಲಯಗಳ ಸ್ಥಾಪನೆಯಾಗಲು ಕಟ್ಟುನಿಟ್ಟಾದ ಕಾನೂನನ್ನು ಪಾಲನೆ ಮಾಡಬೇಕಾಗಿದೆ. ಆದರೆ, ಕಾಯಿದೆಯ ಪೂರ್ಣ ಅರಿವಿಲ್ಲದೆಯೋ ಅಥವಾ ಇನ್ನಾವುದೋ ಕಾರಣದಿಂದ, ಕಾನೂನನ್ನು ಉಲ್ಲಂಘನೆ ಮಾಡಿ ಧೂಮಪಾನ ವಲಯವನ್ನು ಸ್ಥಾಪಿಸಲಾಗುತ್ತಿದೆ.
ಇಂತಹ ದೋಷಯುಕ್ತ ಧೂಮಪಾನ ವಲಯಗಳಿಂದ, ಧೂಮಪಾನ ಮಾಡದ ಸಾವಿರಾರು ಮಕ್ಕಳು, ಮಹಿಳೆಯರು & ವೃದ್ಧರು ಪರೋಕ್ಷ ಧೂಮಪಾನಕ್ಕೆ ತುತ್ತಾಗುತ್ತಾರೆ. ಅಲ್ಲಿ ಕೆಲಸ ಮಾಡುವ ನೌಕರರಿಗೂ ಕ್ಯಾನ್ಸರ್, ಶ್ವಾಸಕೋಶ ಹಾಗು ಹೃದ್ರೋಗದಂತಹ ಕಾಯಿಲೆಗಳು ಸಂಭವಿಸುವ ಸಾಧ್ಯತೆಗಳಿವೆ. ಸಾರ್ವಜನಿಕ ಆರೋಗ್ಯ ದೃಷ್ಠಿಯಿಂದ, ರಾಜ್ಯದಲ್ಲಿ ಇಗಾಗಲೇ ಹೊರಡಿಸಿರುವ ಆದೇಶ ಹಾಗು ಸುತ್ತೋಲೆಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡಬೇಕೆಂದು, ಮಾನ್ಯ ಮುಖ್ಯಮಂತ್ರಿಗಳಿಗೆ ಕೋರಿದ್ದೇನೆ, ಎಂದೂ ನಳಿನಿ ಅವರು ವಿವರಿಸಿದ್ದಾರೆ.
ಪರೋಕ್ಷ ಧೂಮಪಾನದ ಹೊಗೆಯಿಂದ ಧೂಮಪಾನ ಮಾಡದವರಲ್ಲಿ ಸಾವು, ಅಂಗವೈಕಲ್ಯ ಹಾಗು ಕಾಯಿಲೆಗಳು ಉದ್ಭವಿಸುತ್ತದೆ. ಶ್ವಾಸಕೋಶ ಅಥವಾ ಹೃದಯ ಸಂಬಂಧಿ ಕಾಯಿಲೆ ಇರವವರಲ್ಲಿ, ಪರೋಕ್ಷ ಧೂಮಪಾನವು ಇನ್ನುಷ್ಟು ಹಾನಿಯುಂಟು ಮಾಡುತ್ತದೆ ಹಾಗು ಕೋವಿಡ್-೧೯ ಸೋಂಕು ತಗಲುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಪರೋಕ್ಷ ಧೂಮಪಾನಕ್ಕೆ ತುತ್ತಾಗಿ ಧ್ವನಿ ಕಳೆದುಕೊಂಡಿರುವ ನಳಿನಿಯವರು, ಧೂಮಪಾನ ವಲಯ ಕಾನೂನನ್ನು ಪರಿಷ್ಕರಿಸಿ ಎಲ್ಲಾ ಸಾರ್ವಜನಿಕ ಸ್ಥಳಗಳನ್ನು ಸಂಪೂರ್ಣ ಧೂಮಪಾನ ಮುಕ್ತ ಮಾಡಬೇಕೆಂದು ಮಾನ್ಯ ಪ್ರಧಾನ ಮಂತ್ರಿ ಹಾಗು ಕೇಂದ್ರ ಆರೋಗ್ಯ ಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ಈ ಕ್ರಮವನ್ನು ತೆಗೆದುಕೊಂಡಿದ್ದೇ ಆದರೆ ಅದು ಸಾರ್ವಜನಿಕ ಆರೋಗ್ಯಕ್ಕೆ ಪೂರಕವಾಗಲಿದೆ ಎಂದು ಪ್ರಸಿದ್ಧ ಹೃದ್ರೋಗ ತಜ್ಞರು ಹಾಗು ಕಾರ್ಡಿಯೋಲಜಿಸ್ಟ್ ಅಸೋಸಿಯೇಷನ್‌ನ ಸದಸ್ಯರಾಗಿರುವ ಡಾ. ವಿಜಯಲಕ್ಷ್ಮಿ ಬಾಳೇಕುಂದ್ರಿಯವರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


