Netflix

ಮಾರ್ಚ್ 1 ರಿಂದ ನೆಟ್‌ಫ್ಲಿಕ್ಸ್‌ನಲ್ಲಿ 'ಕಾಂತಾರ' ಇಂಗ್ಲಿಷ್ ಆವೃತ್ತಿ ಬಿಡುಗಡೆ
ಮೂಲತಃ ಕನ್ನಡದಲ್ಲಿ ಬಿಡುಗಡೆಯಾದ ಕಾಂತಾರ ಸಿನಿಮಾ ತಮಿಳು, ತೆಲುಗು, ಮಲಯಾಳಂ, ಹಿಂದಿ ಮತ್ತು ತುಳು ಭಾಷೆಗಳಿಗೆ ಡಬ್ ಆಗುವ ಮೂಲಕ ದೇಶದಾದ್ಯಂತ ಯಶಸ್ವಿಯಾದ ಪ್ಯಾನ್ ಇಂಡಿಯಾ ಚಲನಚಿತ್ರಗಳಲ್ಲಿ ಒಂದಾಯಿತು. ಇದೀಗ ಇಂಗ್ಲೀಷ್ ಆವೃತ್ತಿಯಲ್ಲಿ ಸಿನಿಮಾ ಬಿಡುಗಡೆಯಾಗಲಿದೆ.

ನೆಟ್‌ಫ್ಲಿಕ್ಸ್‌ನಲ್ಲಿ ನಯನತಾರಾ-ವಿಘ್ನೇಶ್ ಶಿವನ್ ಮದುವೆ ಸಾಕ್ಷ್ಯಚಿತ್ರದ ತುಣುಕು ಬಿಡುಗಡೆ
ತಮ್ಮ ಮುಂಬರುವ ಸಾಕ್ಷ್ಯಚಿತ್ರ 'ನಯನತಾರಾ: ಬಿಯಾಂಡ್ ದಿ ಫೇರ್‌ಟೇಲ್'ನ ಒಂದು ತುಣುಕನ್ನು ನೆಟ್‌ಫ್ಲಿಕ್ಸ್ ಮಂಗಳವಾರ ಬಿಡುಗಡೆ ಮಾಡಿದೆ. ಇದು ಜೂನ್‌ನಲ್ಲಿ ನಡೆದ ನಟಿ ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ಅವರ ವಿವಾಹವನ್ನು ಕೇಂದ್ರೀಕರಿಸಿರುವ ಸಾಕ್ಷ್ಯಚಿತ್ರವಾಗಿದೆ.

ಭಾರತದಲ್ಲಿ ನೆಟ್ಫ್ಲಿಕ್ಸ್ ಚಂದಾದಾರಿಕೆ ದರ ಇಳಿಕೆ; ಮಾಸಿಕ ಬೇಸಿಕ್ ಪ್ಲ್ಯಾನ್ ವಿವರ ಹೀಗಿದೆ...
ಭಾರತದಲ್ಲಿ ನೆಟ್ಫ್ಲಿಕ್ಸ್ ಚಂದಾದಾರಿಕೆ ದರ ಇಳಿಕೆಯಾಗಿದ್ದು, ಶೇ.60 ರಷ್ಟು ಕಡಿತಗೊಳಿಸುತ್ತಿರುವುದಾಗಿ ಹೇಳಿದೆ.

ಕುಟುಂಬದ ಬೆಂಬಲವಿದ್ದರೆ ಮಹಿಳೆಯರು ಯಾವುದೇ ಸಾಧನೆ ಮಾಡಬಹುದು: 'ಅರಣ್ಯಕ್' ನಟಿ ರವೀನಾ ಟಂಡನ್
‘ಅರಣ್ಯಕ್’ ಧಾರಾವಾಹಿ ಸರಣಿಯಲ್ಲಿ ಪ್ರಾಮಾಣಿಕ ಪೋಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ರವೀನಾ, ಮಹಿಳೆಯರು ಸಮವಸ್ತ್ರ ಧರಿಸಿ ಖಡಕ್ ಆಗಿ ಕರ್ತವ್ಯ ನಿರ್ವಹಿಸುವ ಜೊತೆಗೆ ಆದರ್ಶ ಗೃಹಿಣಿಯೂ ಆಗಿರಬಲ್ಲಳು ಎಂಬ ಸಂದೇಶವನ್ನು ಧಾರಾವಾಹಿ ನೀಡುತ್ತದೆ ಎಂದರು.

'ಮನಿ ಹೈಸ್ಟ್' ನೆಟ್ ಫ್ಲಿಕ್ಸ್ ಥ್ರಿಲ್ಲರ್ ಧಾರಾವಾಹಿ ಸರಣಿ ಕಡೆಯ ಭಾಗದ ಪೋಸ್ಟರ್ ಬಿಡುಗಡೆ: ಪ್ರಸಾರ ದಿನಾಂಕ ನಿಗದಿ
ಸ್ಪೇನ್ ರಾಷ್ಟ್ರೀಯ ಬ್ಯಾಂಕಿಂದ ಸಾವಿರಾರು ಕೋಟಿ ರೂ. ಕಳವು ಮಾಡುವ ಮಹಾನ್ ಚಾಣಾಕ್ಷ ಮಿಸ್ಟರ್ ಪ್ರೊಫೆಸರ್ ಮತ್ತು ಆತನ ತಂಡದ ಕೃತ್ಯಕ್ಕೆ ತೆರೆ ಬೀಳುವ ದಿನಾಂಕ ನಿಗದಿಯಾಗಿದೆ.

ದಕ್ಷಿಣ ಭಾರತೀಯರನ್ನು ಚಂದಗಾಣಿಸುವ ಯತ್ನದಲ್ಲಿ ಕರಣ್ ಜೋಹರ್ ಸಿನಿಮಾ ಯಶಸ್ವಿ: ಮೀನಾಕ್ಷಿ ಸುಂದರೇಶ್ವರ್ ಚಿತ್ರವಿಮರ್ಶೆ
ಸೌತ್ ಇಂಡಿಯನ್ ಎಂದ ಕೂಡಲೆ ಹೊರಗಿನವರಿಗೆ ಯಾವೆಲ್ಲಾ ವಸ್ತುಗಳು, ಸಂಗತಿಗಳು ನೆನಪಾಗುವವೋ ಅವೆಲ್ಲವೂ ಈ ಸಿನಿಮಾದಲ್ಲಿ ಅಡಕ. ಬಾಗಿಲ ತೋರಣ, ತೆಂಗಿನ ಕಾಯಿ, ಇಡ್ಲಿ ಸಾಂಬಾರ್, ತೊಟ್ಟಿ ಮನೆ, ಅಟ್ಟ, ರಜಿನಿಕಾಂತ್, ಜಿಗರ್ಥಂಡ ಪೇಯ, ಪಾಯಸಂ, ರೇಷಿಮೆ ಸೀರೆ, ಫಿಲ್ಟರ್ ಕಾಫಿ. You name it. ಸಿನಿಮಾದ ಪ್ರತಿ ಫ್ರೇಮ್ ಕೂಡಾ ಮದುವೆ ಫೋಟೊ ಶೂಟಿನಂತೆ ಕಂಗೊಳಿಸುತ್ತದೆ.

ಬಾಲಿವುಡ್ ನಲ್ಲಿ ಸ್ವಜನಪಕ್ಷಪಾತಕ್ಕಿಂತ ಹೆಚ್ಚಾಗಿ ವರ್ಣಭೇದ ತಾಂಡವ: ನವಾಜುದ್ದೀನ್ ಸಿದ್ದಿಕಿ ಬಾಂಬ್
ಬಾಲಿವುಡ್ ನಲ್ಲಿ ಸ್ವಜನಪಕ್ಷಪಾತ (ನೆಪೋಟಿಸಂ), ಗ್ರೂಪಿಸಂ ಹಾವಳಿ ಇದೆ. ಆದರೆ ಅದಕ್ಕಿಂತ ಹೆಚ್ಚಾಗಿ ಇರುವುದು ವರ್ಣಭೇದ ಎಂದು ಬಾಲಿವುಡ್ ನ ಬಂಡುಕೋರ ಎಂದೇ ಹೆಸರಾದ ನವಾಜುದ್ದೀನ್ ಬಾಂಬ್ ಸಿಡಿಸಿದ್ದಾರೆ.

ಟ್ಯಾಗೋರ್ ಕಾದಂಬರಿಗಳ ರೆಬೆಲ್ ನಾಯಕಿಯರು: ಲೈಂಗಿಕತೆಯ ತುಮುಲದಲ್ಲಿರುವ ವಿಧವೆ ಬಿನೋದಿನಿ
ಟಾಗೋರರ ನಾಯಕಿಯರು ಚಲನಚಿತ್ರಗಳಲ್ಲಿ ತೋರಿಸುವಂತೆ ಸೈಡ್ ಲೈನಿನಲ್ಲಿ ಬರುವುದಿಲ್ಲ. ಅವಳೇ ನಾಯಕ ಹಾಗೂ ನಾಯಕಿ. ಅವಳು ತನ್ನ ರಕ್ಷಣೆಗೆ ನಾಯಕನ ಆಗಮನಕ್ಕಾಗಿ ಕಾಯುವುದಿಲ್ಲ- ತಾನೇ ಹೋರಾಡುತ್ತಾಳೆ. ಅನುರಾಗ್ ಬಸು ನಿರ್ದೇಶಿಸಿರುವ ನೆಟ್ ಫ್ಲಿಕ್ಸ್ ಸರಣಿ 'ಸ್ಟೋರೀಸ್ ಬೈ ರಬೀಂದ್ರನಾಥ್ ಟ್ಯಾಗೋರ್' ಟಾಗೋರರ ಆಶಯವನ್ನು ದೃಶ್ಯರೂಪದಲ್ಲಿ ಪ್ರೇಕ್ಷಕನ ಮುಂದೆ ತೆರೆದಿಡುತ್ತದೆ.

'ಕ್ರೈಮ್ ಸ್ಟೋರೀಸ್: ಇಂಡಿಯಾ ಡಿಟೆಕ್ಟಿವ್' ಪ್ರಸಾರ ಮಾಡದಂತೆ ನೆಟ್ ಫ್ಲಿಕ್ಸ್ ಗೆ ಹೈಕೋರ್ಟ್ ಸೂಚನೆ
ಮರ್ಡರಡ್ ಮದರ್ ಎಂಬ ಶೀರ್ಷಿಕೆಯ 'ಕ್ರೈಮ್ ಸ್ಟೋರೀಸ್: ಇಂಡಿಯಾ ಡಿಟೆಕ್ಟಿವ್' ಸರಣಿಯ ಮೊದಲ ಸರಣಿಯನ್ನು ನಿರ್ಬಂಧಿಸುವಂತೆ ಕರ್ನಾಟಕ ಹೈಕೋರ್ಟ್ ನೆಟ್ ಫ್ಲಿಕ್ಸ್ ಗೆ ಸೂಚಿಸಿದೆ.

