ಬಾಲಿವುಡ್ ನಲ್ಲಿ ಸ್ವಜನಪಕ್ಷಪಾತಕ್ಕಿಂತ ಹೆಚ್ಚಾಗಿ ವರ್ಣಭೇದ ತಾಂಡವ: ನವಾಜುದ್ದೀನ್ ಸಿದ್ದಿಕಿ ಬಾಂಬ್
ಬಾಲಿವುಡ್ ನಲ್ಲಿ ಸ್ವಜನಪಕ್ಷಪಾತ (ನೆಪೋಟಿಸಂ), ಗ್ರೂಪಿಸಂ ಹಾವಳಿ ಇದೆ. ಆದರೆ ಅದಕ್ಕಿಂತ ಹೆಚ್ಚಾಗಿ ಇರುವುದು ವರ್ಣಭೇದ ಎಂದು ಬಾಲಿವುಡ್ ನ ಬಂಡುಕೋರ ಎಂದೇ ಹೆಸರಾದ ನವಾಜುದ್ದೀನ್ ಬಾಂಬ್ ಸಿಡಿಸಿದ್ದಾರೆ.

ಬಾಲಿವುಡ್ ನ ಬಂಡುಕೋರ ಎಂದೇ ಹೆಸರಾದ ನವಾಜುದ್ದೀನ್ ಸಿದ್ದಿಕಿ ಇತ್ತೀಚಿಗೆ ನೀಡಿದ ಸಂದರ್ಶನವೊಂದರಲ್ಲಿ ಬಾಲಿವುಡ್ ಕಾರ್ಯ ನಿರ್ವಹಿಸುತ್ತಿರುವ ಬಗೆಯನ್ನು ಮತ್ತೆ ಟೀಕಿಸಿದ್ದಾರೆ. ಬಾಲಿವುಡ್ ನಲ್ಲಿ ಸ್ವಜನಪಕ್ಷಪಾತ (ನೆಪೋಟಿಸಂ), ಗ್ರೂಪಿಸಂ ಹಾವಳಿ ಇದೆ. ಆದರೆ ಅದಕ್ಕಿಂತ ಹೆಚ್ಚಾಗಿ ಇರುವುದು ವರ್ಣಭೇದ ಎಂದು ನವಾಜುದ್ದೀನ್ ಬಾಂಬ್ ಸಿಡಿಸಿದ್ದಾರೆ.
ಬಾಲಿವುಡ್ ಮಂದಿ ಬಿಳಿ ತೊಗಲಿನ ಕಲಾವಿದರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಾರೆ. ನಾನು ಬಹಳ ಹಿಂದಿನಿಂದಲೂ ಅದರ ವಿರುದ್ಧ ಹೋರಾಡುತ್ತಾ ಬಂದಿದ್ದೇನೆ ಎನ್ನುವ ನವಾಜುದ್ದೀನ್ ಸಿದ್ದಿಕಿ ಈ ಕಾಲಘಟ್ಟದಲ್ಲೂ ಬಿಳಿ ತೊಗಲಿನ ಮೇಲಿನ ಅಂಧಾಭಿಮಾನ ಹೋಗದೇ ಇರುವುದಕ್ಕೆ ಬೇಸರಿಸಿದ್ದಾರೆ.
ಕಪ್ಪು ಅಥವಾ ಕಂದು ತೊಗಲಿನ ಕಲಾವಿದರು ನಾಯಕ ಅಥವಾ ನಾಯಕಿಯರಾಗಿ ನಟಿಸುವ ದಿನಗಳು ಒಟಿಟಿ ಸೇವೆಯಿಂದಾಗಿ ಭಾರತದಲ್ಲಿ ಬರಲಿರುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ. ಏಕೆಂದರೆ ಅಲ್ಲಿ ಮುಖ್ಯವಾಗಿ ಕಂಟೆಟ್ ಕಡೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಾರೆಯೇ ವಿನಾ ಮಿಕ್ಕೆಲ್ಲಾ ಸಂಗತಿ ನಗಣ್ಯ ಎನ್ನುವುದು ಅವರ ಅಭಿಪ್ರಾಯ.
ನೆಟ್ ಫ್ಲಿಕ್ಸ್ ಮತ್ತಿತರ ಒಟಿಟಿ ಪ್ಲಾಟ್ ಫಾರ್ಮ್ ಗಳು ಬಂದ ನಂತರವೂ ಕಂಟೆಂಟ್ ವಿಷಯದಲ್ಲಿ ಮುಖ್ಯವಾಹಿನಿ ಸಿನಿಮಾಗಳಲ್ಲಿ ಪ್ರೇಕ್ಷಕರಿಗೆ ವಂಚನೆ ಎಸಗಲಾಗುತ್ತಿದೆ ಎಂದು ನವಾಜ್ ಖೇದ ವ್ಯಕ್ತಪಡಿಸಿದ್ದಾರೆ.
ಯಾವುದೋ ಒಂದು ಸಿನಿಮಾ ಬಾಕ್ಸಾಫೀಸಿನಲ್ಲಿ ಹಿಟ್ ಆದರೆ ಸಾಕು ಅದೇ ಮಾದರಿಯ ಹತ್ತು ಹಲವು ಸಿನಿಮಾಗಳು ಸರದಿ ಪ್ರಕಾರ ತೆರೆಗೆ ಅಪ್ಪಳಿಸುತ್ತವೆ. ಈ ಸಿನಿಮಾಗಳು ಬೇರೆ ಬೇರೆ ಎಂದು ತೋರಿದರೂ ಅವುಗಳ ಮೂಲ ಫಾರ್ಮ್ಯುಲ ಒಂದೇ ಆಗಿರುತ್ತದೆ.
Related Article
ಬಾಲಿವುಡ್ ಹಾಟ್ ಬೆಡಗಿ ಪೂನಂ ಪಾಂಡೆ ಪತಿ ಅರೆಸ್ಟ್
ರಣ್ ಬೀರ್ ಜೊತೆಗೆ ರಿಲೇಷನ್ ಶಿಪ್ ಅಧಿಕೃತವಾಗಿ ಬಹಿರಂಗಪಡಿಸಿದ ಆಲಿಯಾ
ಓಹ್ ಮೈ ಗಾಡ್-2 ಗೆ ಚಿತ್ರೀಕರಣ ಪ್ರಾರಂಭಿಸಿದ ಅಕ್ಷಯ್ ಕುಮಾರ್
'ಇಂಟು ದ ವೈಲ್ಡ್ ವಿತ್' ಕಾರ್ಯಕ್ರಮಕ್ಕೆ ಹಿಂದೂ ಮಹಾಸಾಗರದಲ್ಲಿ ನಟ ಅಜಯ್ ದೇವಗನ್ ರೋಚಕ ಚಿತ್ರೀಕರಣ
ಅಶ್ಲೀಲ ಚಿತ್ರ ನಿರ್ಮಾಣ ಪ್ರಕರಣದಲ್ಲಿ ಜಾಮೀನು: ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಜೈಲಿನಿಂದ ಬಿಡುಗಡೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


