'ಓ ಮೈ ಗಾಡ್' ಅಕ್ಷಯ್ ಕುಮಾರ್ ಗೆ 'ಶೀಲಾ ಕಿ ಜವಾನಿ' ಕತ್ರೀನಾ ಕೈಫ್ ಕಪಾಳ ಮೋಕ್ಷ ಮಾಡಿದ್ದೇಕೆ?
ಇಬ್ಬರೂ ಕಲಾವಿದರು ಜೊತೆಯಾಗಿ 6 ಕ್ಕೂ ಹೆಚ್ಚು ಹಿಟ್ ಸಿನಿಮಾಗಳನ್ನು ನೀಡಿದವರು. ಹೀಗಾಗಿ ರೊಮ್ಯಾನ್ಸ್ ಆಗಲಿ, ಕಪಾಳಕ್ಕೆ ಹೊಡೆಯುವ ದೃಶ್ಯವೇ ಆಗಲಿ ಯಾವುದಕ್ಕೂ ರೀಟೇಕ್ ಅವಶ್ಯಕತೆ ಬೀಳದು ಎಂದ ಕತ್ರೀನಾ.

ಮುಂಬೈ: ನಟಿ ತೆರೆ ಮೇಲೆ ರೊಮ್ಯಾನ್ಸ್ ಮಾಡುವ ನಟನ ಕಪಾಳಕ್ಕೆ ಯಾಕೆ ಹೊಡೆಯುತ್ತಾಳೆ ಎನ್ನುವುದಕ್ಕೆ ನೂರಾರು ಕಾರಣಗಳನ್ನು ಕೊಟ್ಟುಕೊಳ್ಳುವುದು ಸುಲಭ. ಆದರೆ ಅಕ್ಷಯ್ ಕುಮಾರ್ ಗೆ ಬಾಲಿವುಡ್ ನ ಹಾಟೆಸ್ಟ್ ಬೆಡಗಿ ಕತ್ರೀನಾ ಕೈಫ್ ಕಪಾಳಕ್ಕೆ ಹೊಡೆಯುವುದಕ್ಕೆ ಕಾರಣ ಬೇರೇನೂ ಅಲ್ಲ. ಸಿನಿಮಾ ಶೂಟಿಂಗ್.
ಅವರಿಬ್ಬರೂ ಸೂರ್ಯವಂಶಿ ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದಾರೆ. ಅದೇ ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಂದರ್ಭ ಅವರಿಬ್ಬರಿಗೂ ಒಂದು ಪ್ರಶ್ನೆಯನ್ನು ಕೇಳಲಾಗಿತ್ತು. ಇಬ್ಬರೂ ರೊಮ್ಯಾನ್ಸ್ ಮತ್ತು ಕಪಾಳಕ್ಕೆ ಹೊಡೆಯುವ ದೃಶ್ಯಗಳಲ್ಲಿ ನಟಿಸಿದ್ದೀರಿ. ಇವೆರಡರಲ್ಲಿ ಯಾವ ದೃಶ್ಯಕ್ಕೆ ರೀಟೇಕ್ ತೆಗೆದುಕೊಂಡಿದ್ದೀರಿ ಎನ್ನುವುದೇ ಆ ಪ್ರಶ್ನೆ.
ಇಬ್ಬರೂ ಕಲಾವಿದರು ಜೊತೆಯಾಗಿ 6 ಕ್ಕೂ ಹೆಚ್ಚು ಹಿಟ್ ಸಿನಿಮಾಗಳನ್ನು ನೀಡಿದವರು. ಹೀಗಾಗಿ ರೊಮ್ಯಾನ್ಸ್ ಆಗಲಿ, ಕಪಾಳಕ್ಕೆ ಹೊಡೆಯುವ ದೃಶ್ಯವೇ ಆಗಲಿ ಯಾವುದಕ್ಕೂ ರೀಟೇಕ್ ಅವಶ್ಯಕತೆ ಬೀಳದು ಎಂದು ಕತ್ರೀನಾ ಹೇಳಿದರು. ಅವರಿಬ್ಬರ ನಡುವೆ ತೆರೆ ಮೇಲೆ ಹೊಂದಾಣಿಕೆ ತುಂಬಾ ಚೆನ್ನಾಗಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ಈ ಸಂದರ್ಭ ಅಕ್ಷಯ್ ಕುಮಾರ್ ಒಂದು ಘಟನೆ ಬಿಚ್ಚಿಟ್ಟಿದ್ದಾರೆ. ಕಪಾಳಕ್ಕೆ ಹೊಡೆಯುವ ದೃಶ್ಯದಲ್ಲಿ ಕ್ಯಾಮೆರಾ ಕ್ಲೋಸಪ್ ನಲ್ಲಿ ಇಡಲಾಗಿತ್ತು. ಹೀಗಾಗಿ ಕಪಾಳಕ್ಕೆ ಹೊಡೆಯುವಾಗ ಕತ್ರೀನಾ ಕೈ ನನ್ನ ಕೆನ್ನೆಗೆ ಟಚ್ ಆಗಿದೆಯೋ ಇಲ್ಲವೋ ಎನ್ನುವುದು ಕ್ಯಾಮೆರಾದಲ್ಲಿ ಚೆನ್ನಾಗಿ ಗೊತ್ತಾಗುತ್ತಿದ್ದಿತು. ಹೀಗಾಗಿ ಕತ್ರೀನಾ ಹೊಡೆದಂತೆ ನಟಿಸುವುದು ಸಾಧ್ಯವಿರಲಿಲ್ಲ. ಹೀಗಾಗಿ ಕತ್ರೀನಾ ಈ ಸಂದರ್ಭವನ್ನು ಚೆನ್ನಾಗಿ ಉಪಯೋಗಿಸಿಕೊಂಡು ನಿಜಕ್ಕೂ ಹೊಡೆದುಬಿಟ್ಟಿದ್ದಳು ಎಂದು ಅಕ್ಷಯ್ ಚಟಾಕಿ ಹಾರಿಸಿದ್ದಾರೆ.
Related Article
ರಶ್ಮಿಕಾ ಮಂದಣ್ಣ ಅಭಿನಯದ 'ಪುಷ್ಪ', 'ಮಿಷನ್ ಮಜ್ನು' ಸದ್ಯದಲ್ಲಿಯೇ ತೆರೆಗೆ: ಕಾತರದಲ್ಲಿ ಅಭಿಮಾನಿಗಳು
52ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ; ಪನೋರಮಾ ವಿಭಾಗಕ್ಕೆ 4 ಕನ್ನಡ ಚಿತ್ರಗಳ ಆಯ್ಕೆ
ಶರಣ್-ಸುನಿ ಕಾಂಬಿನೇಷನ್ 'ಅವತಾರ ಪುರುಷ' ಬಿಡುಗಡೆ ದಿನಾಂಕ ಫಿಕ್ಸ್!
'ಟಾಮ್ ಅಂಡ್ ಜೆರ್ರಿ' ನಾಯಕಿ ಪಾತ್ರ ನಿಜಜೀವನದಲ್ಲಿ ನನ್ನನ್ನು ಹೋಲುತ್ತದೆ: ಚೈತ್ರಾ ರಾವ್
ಅಮೆರಿಕ ಡಲ್ಲಾಸ್ ಅಂತರಾಷ್ಟ್ರೀಯ ಚಿತ್ರೋತ್ಸವ: ಕುಮಾರ್ ಗೋವಿಂದ್ 'ಅತ್ಯುತ್ತಮ ನಟ'
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


