ರಣ್ ಬೀರ್ ಜೊತೆಗೆ ರಿಲೇಷನ್ ಶಿಪ್ ಅಧಿಕೃತವಾಗಿ ಬಹಿರಂಗಪಡಿಸಿದ ಆಲಿಯಾ
ರಣ್ ಬೀರ್ ಕಪೂರ್ ಮತ್ತು ಆಲಿಯಾ ಜೊತೆ ಇರುವ ಫೋಟೋಗಳು ಮತ್ತು ಅವರ ಕುರಿತ ಗಾಸಿಪ್ಪುಗಳು ಬಾಲಿವುಡ್ ಪಟ್ಟಣದಲ್ಲಿ ಹರಿದಾಡಿದ್ದವು. ಆದರೆ, ಈ ಬಗ್ಗೆ ಇದುವರೆಗೂ ರಣ್ ಬೀರ್ ಆಗಲಿ ಆಲಿಯಾ ಆಗಲಿ ಇಲ್ಲವೇ ಅವರ ಕುಟುಂಬ ಸದಸ್ಯರಾಗಲಿ ಗುಟ್ಟು ಬಿಟ್ಟುಕೊಟ್ಟಿರಲಿಲ್ಲ.

ಮುಂಬೈ: ಶುಭಕಾರ್ಯವನ್ನು ಶುಭ ಸಂದರ್ಭಗಳಲ್ಲೇ ಮಾಡುವುದು ಭಾರತೀಯರು ಅನೂಚಾನವಾಗಿ ರೂಢಿಸಿಕೊಂಡು ಬಂದಿರುವ ಅಭ್ಯಾಸ. ಬಾಲಿವುಡ್ ತಾರೆಯರಾದ ರಣ್ ಬೀರ್ ಕಪೂರ್ ಮತ್ತು ಆಲಿಯಾ ಭಟ್ ತಾವಿಬ್ಬರೂ ರಿಲೇಷನ್ ಶಿಪ್ ನಲ್ಲಿ ಇರುವುದನ್ನು ದೀಪಾವಳಿಯ ಈ ಶುಭ ಸಂದರ್ಭದಲ್ಲಿಯೇ ಅಧಿಕೃತವಾಗಿ ಬಹಿರಂಗಪಡಿಸಿರುವುದು ವಿಶೇಷ.
ಇದುವರೆಗೂ ರಣ್ ಬೀರ್ ಕಪೂರ್ ಮತ್ತು ಆಲಿಯಾ ಜೊತೆ ಇರುವ ಫೋಟೋಗಳು ಮತ್ತು ಅವರ ಕುರಿತ ಗಾಸಿಪ್ಪುಗಳು ಬಾಲಿವುಡ್ ಪಟ್ಟಣದಲ್ಲಿ ಹರಿದಾಡಿದ್ದವು. ಆದರೆ, ಈ ಬಗ್ಗೆ ಇದುವರೆಗೂ ರಣ್ ಬೀರ್ ಆಗಲಿ ಆಲಿಯಾ ಆಗಲಿ ಇಲ್ಲವೇ ಅವರ ಕುಟುಂಬ ಸದಸ್ಯರಾಗಲಿ ಗುಟ್ಟು ಬಿಟ್ಟುಕೊಟ್ಟಿರಲಿಲ್ಲ.
ಇದೀಗ ಮೊದ ಬಾರಿಗೆ ಆಲಿಯಾ ತಾವು ರಣ್ ಬೀರ್ ಜೊತೆಗಿರುವ ಫೋಟೊ ಒಂದನ್ನು ಇನ್ ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಪೋಸ್ಟ್ ನಲ್ಲಿ "Some love...Happy Diwali" ಎಂದು ಆಲಿಯಾ ಬರೆದುಕೊಂಡಿದ್ದಾರೆ.
ಈ ಪೋಸ್ಟ್ ಗೆ ಬಾಲಿವುಡ್ ತಾರೆಯರು ಕಾಮೆಂಟ್ ಮಾಡಿ ಪ್ರೀತಿಯ ಎಮೋಜಿಗಳನ್ನು ಕಾಮೆಂಟ್ ರೂಪದಲ್ಲಿ ಪ್ರಕಟಿಸಿದ್ದಾರೆ. ಇದೀಗ ಅಲಿಯಾ- ರಣ್ ಬೀರ್ ತಮ್ಮ ಸಂಬಂಧವನ್ನು ಜಗತ್ತಿನ ಮುಂದೆ ಅಧಿಕೃತವಾಗಿ ತೋರ್ಪಡಿಸಿಕೊಂಡಿರುವುದರಿಂದ ಅವರಿಬ್ಬರ ವಿವಾಹದ ಸುದ್ದಿ ಕೇಳಿಬರುವ ದಿನಗಳು ದೂರವಿಲ್ಲ ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ಇಂಟರ್ನೆಟ್ ನಲ್ಲಿ ಕಿಚ್ಚು ಹೊತ್ತಿಸಿದ ಪರಮ್ ಸುಂದರಿ: ಕೃತಿ ಸನೋನ್ ಹಾಡಿಗೆ ತಾಳ ಹಾಕಿದ ಟಾಪ್ ಪರಮ ಸುಂದರಿಯರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


