'ವಿಕ್ಕಿ ಕೌಶಲ್ ಲುಕ್ ಬಗ್ಗೆ ಈಗ ಯಾರೂ ಟ್ರೋಲ್ ಮಾಡಲ್ಲ': ಕತ್ರಿನಾ ಕೈಫ್ ಜೊತೆಗಿನ ನಟನ ಇತ್ತೀಚಿನ ಫೋಟೊಗೆ ನೆಟ್ಟಿಗರ ಪ್ರತಿಕ್ರಿಯೆ
ಗಣಪತಿ ಹಬ್ಬದ ಆಚರಣೆಯ ನಂತರ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದ ಕತ್ರಿನಾ ಕೈಫ್ ಅವರನ್ನು 'ಬಾಡಿ-ಶೇಮಿಂಗ್' ಮಾಡಲಾಗಿತ್ತು. ಅಂತರ್ಜಾಲದ ಒಂದು ಭಾಗ ಬಾಲಿವುಡ್ ನಟಿ ವಿರುದ್ಧ ತೀವ್ರ ಟೀಕೆ ಮಾಡಿತ್ತು.
ಲಂಡನ್ನಲ್ಲಿರುವ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಅವರ ಫೋಟೊವೊಂದು ವೈರಲ್ ಆಗಿದ್ದು, ಪುರುಷ ಮತ್ತು ಮಹಿಳಾ ಸೆಲೆಬ್ರಿಟಿಗಳು ತಮ್ಮ ಲುಕ್ ವಿಚಾರದಲ್ಲಿ ಎದುರಿಸುವ ಸೂಕ್ಷ್ಮ ಟೀಕೆಗಳ ಕುರಿತು ಆನ್ಲೈನ್ನಲ್ಲಿ ಚರ್ಚೆ ಹುಟ್ಟುಹಾಕಿದೆ.
ಶನಿವಾರ ಅಭಿಮಾನಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ಎನ್ನಲಾದ ಈ ಚಿತ್ರದಲ್ಲಿ, ಕತ್ರಿನಾ ಮತ್ತು ವಿಕ್ಕಿ ದಂಪತಿ ಕ್ಯಾಶುಯಲ್ ಉಡುಪಿನಲ್ಲಿ ಕಾಣಿಸಿಕೊಂಡಿದೆ.
ವಿಕ್ಕಿ ಟೋಪಿ, ಕನ್ನಡಕ ಮತ್ತು ಗಡ್ಡದೊಂದಿಗೆ ಕಾಣಿಸಿಕೊಂಡಿದ್ದರೆ, ಕತ್ರಿನಾ ಗಾಢ ಬಣ್ಣದ ಉಡುಪು ಹಾಗೂ ಸನ್-ಗ್ಲಾಸ್ ಧರಿಸಿದ್ದಾರೆ.
ಈ ಫೋಟೊ ಸಾಮಾಜಿಕ ಜಾಲತಾಣ ಬಳಕೆದಾರರಿಂದ ವ್ಯಾಪಕ ಪ್ರತಿಕ್ರಿಯೆಗೆ ಕಾರಣವಾಗಿದ್ದು, ಕೆಲವರು ವಿಕ್ಕಿ ಅವರ ಲುಕ್ ಬಗ್ಗೆ ಪ್ರತಿಕ್ರಿಯಿಸಿದ್ದರೆ, ಇನ್ನು ಕೆಲವರು ಪುರುಷರು ಮತ್ತು ಮಹಿಳೆಯರನ್ನು ಅವರ ಲುಕ್ ಆಧಾರದ ಮೇಲೆ ನಿರ್ಣಯಿಸುವ ರೀತಿಯಲ್ಲಿರುವ ವ್ಯತ್ಯಾಸವನ್ನು ಎತ್ತಿ ತೋರಿಸಿದ್ದಾರೆ.
ಒಬ್ಬ ಬಳಕೆದಾರರು, 'ವಿಕ್ಕಿಯವರ ಲುಕ್ ಬಗ್ಗೆ ಈಗ ಯಾರೊಬ್ಬರೂ ಟ್ರೋಲ್ ಮಾಡುವುದಿಲ್ಲ' ಎಂದು ಬರೆದಿದ್ದಾರೆ. ಇನ್ನೊಬ್ಬರು, 'ಟ್ರೋಲಿಂಗ್ ಕೇವಲ ಅವರ ಪತ್ನಿಗೆ ಮಾತ್ರ ಮೀಸಲಾಗಿರುವುದು, ಹೌದಲ್ಲವೇ?' ಎಂದಿದ್ದಾರೆ. ಮೂರನೇ ಬಳಕೆದಾರರು, 'ಇದು ದ್ವಂದ್ವ ನಿಲುವು' ಎಂದು ಬರೆದಿದ್ದಾರೆ.
ಗಣಪತಿ ಹಬ್ಬದ ಆಚರಣೆಯ ನಂತರ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದ ಬಾಲಿವುಡ್ ನಟಿ ಕತ್ರಿನಾ ಕೈಫ್ ಅವರನ್ನು 'ಬಾಡಿ-ಶೇಮಿಂಗ್' ಮಾಡಲಾಗಿತ್ತು. ಅಂತರ್ಜಾಲದ ಒಂದು ಭಾಗ ನಟಿಯ ವಿರುದ್ಧ ತೀವ್ರ ಟೀಕೆ ಮಾಡಿತ್ತು.
ಆನ್ಲೈನ್ ಟೀಕೆಗಳ ಪರಿಣಾಮ ಹಾಗೂ ವೈಯಕ್ತಿಕ ಆಯ್ಕೆಗಳನ್ನು ನಿರ್ಧರಿಸುವಲ್ಲಿ ಸಾರ್ವಜನಿಕ ಅಭಿಪ್ರಾಯಕ್ಕೆ ಮಣೆ ಹಾಕಬಾರದು ಎಂಬ ವಿಷಯಗಳ ಕುರಿತು ಕತ್ರಿನಾ ಈ ಹಿಂದೆಯೂ ಮಾತನಾಡಿದ್ದಾರೆ. ಲಂಡನ್ನಲ್ಲಿ ನಡೆದ ತಮ್ಮ ಸೌಂದರ್ಯವರ್ಧಕ ಬ್ರ್ಯಾಂಡ್ನ ಮೊದಲ ವಾರ್ಷಿಕೋತ್ಸವದ ಕಾರ್ಯಕ್ರಮವೊಂದರಲ್ಲಿ, ಅವರು ಸಾಮಾಜಿಕ ಜಾಲತಾಣಗಳಲ್ಲಿನ ಚರ್ಚೆಗಳು ಮತ್ತು ಆತ್ಮಗೌರವದ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದರು.
'ಸಾಮಾಜಿಕ ಜಾಲತಾಣಗಳಲ್ಲಿನ ಅಭಿಪ್ರಾಯಗಳು ಅಥವಾ ನಿರೂಪಣೆಗಳು ನಮ್ಮ ಆತ್ಮಗೌರವ ಮತ್ತು ಮೌಲ್ಯದ ಮೇಲೆ ಪ್ರಭಾವ ಬೀರದಂತೆ ನಾವು ಎಚ್ಚರಿಕೆ ವಹಿಸಬೇಕು ಎಂದು ನನಗೆ ಅನ್ನಿಸುತ್ತದೆ; ಏಕೆಂದರೆ ಅಲ್ಲಿ ಅಸಂಖ್ಯಾತ ಅಭಿಪ್ರಾಯಗಳು ಇರುತ್ತವೆ. ನಾವು ಅವೆಲ್ಲಕ್ಕೂ ಮಣಿಯಲು ಅಥವಾ ಅವುಗಳಿಗೆ ತಕ್ಕಂತೆ ನಡೆದುಕೊಳ್ಳಲು ಹೋದರೆ, ನಮಗಾಗಿ ಸ್ವತಃ ನಿರ್ಧಾರಗಳನ್ನು ತೆಗೆದುಕೊಳ್ಳುವ ನಮ್ಮ ಸಾಮರ್ಥ್ಯಕ್ಕೆ ಅದು ಅಡ್ಡಿಯಾಗುತ್ತದೆ. ವೈಯಕ್ತಿಕವಾಗಿ ಹೇಳುವುದಾದರೆ, ಟೀಕೆಗಳು ಅಥವಾ ಪ್ರತಿಕ್ರಿಯೆಗಳನ್ನು ಎದುರಿಸಿದಾಗಲೆಲ್ಲ, ಅವು ನನ್ನ ನಡವಳಿಕೆಯನ್ನು ನಿರ್ಧರಿಸಲು ನಾನು ಅವಕಾಶ ನೀಡಿದ್ದಿದ್ದರೆ, ಬಹುಶಃ ನಾನು ಭಯದಿಂದ ಜಡಗಟ್ಟಿಹೋಗಿ ಜೀವನದಲ್ಲಿ ಮುಂದೆ ಸಾಗಲು ಸಾಧ್ಯವಾಗುತ್ತಿರಲಿಲ್ಲವೇನೋ ಎಂದು ನನಗೆ ಅನ್ನಿಸುತ್ತದೆ' ಎಂದಿದ್ದರು.
ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ 2021ರ ಡಿಸೆಂಬರ್ನಲ್ಲಿ ವಿವಾಹವಾದರು ಮತ್ತು 2025ರ ನವೆಂಬರ್ನಲ್ಲಿ ತಮ್ಮ ಮೊದಲ ಮಗು ವಿಹಾನ್ಗೆ ಸ್ವಾಗತ ಕೋರಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


