ಬಾಲಿವುಡ್

ಓಹ್ ಮೈ ಗಾಡ್-2 ಗೆ ಚಿತ್ರೀಕರಣ ಪ್ರಾರಂಭಿಸಿದ ಅಕ್ಷಯ್ ಕುಮಾರ್

ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ಅವರ ಓ ಮೈ ಗಾಡ್ ಸಿನಿಮಾದ ಸೀಕ್ವೆಲ್ ಓಹ್ ಮೈ ಗಾಡ್-2 ಸಿನಿಮಾ ಚಿತ್ರೀಕರಣ ಪ್ರಾರಂಭಿಸಿರುವುದಾಗಿ ಘೋಷಿಸಿದ್ದಾರೆ.

ಓಹ್ ಮೈ ಗಾಡ್-2 ಗೆ ಚಿತ್ರೀಕರಣ ಪ್ರಾರಂಭಿಸಿದ ಅಕ್ಷಯ್ ಕುಮಾರ್
ಓಹ್ ಮೈ ಗಾಡ್-2
Published On :

ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ಅವರ ಓ ಮೈ ಗಾಡ್ ಸಿನಿಮಾದ ಸೀಕ್ವೆಲ್ ಓಹ್ ಮೈ ಗಾಡ್-2 ಸಿನಿಮಾ ಚಿತ್ರೀಕರಣ ಪ್ರಾರಂಭಿಸಿರುವುದಾಗಿ ಘೋಷಿಸಿದ್ದಾರೆ. 

2012 ರ ಜನಪ್ರಿಯ ಒಎಂಜಿ ಓಹ್ ಮೈ ಗಾಡ್ ಸಿನಿಮಾದ ಸೀಕ್ವೆಲ್ ಸಿನಿಮಾಗೆ ಅಮಿತ್ ರೈ ಚಿತ್ರಕಥೆ-ನಿರ್ದೇಶನ ಇರಲಿದೆ.

"ಒಎಂಜಿ-2 ಗೆ ನಿಮ್ಮ ಆಶೀರ್ವಾದ ಹಾಗೂ ಶುಭಾಶಗಳು ಅಗತ್ಯ" ಇದು ಪ್ರಮುಖ ಸಾಮಾಜಿಕ ವಿಷಯವನ್ನು ತೆರೆ ಮೇಲೆ ತರುವ ಪ್ರಮಾಣಿಕ ಹಾಗೂ ವಿನಮ್ರ ಯತ್ನವಾಗಿದೆ. ಆದಿಯೋಗಿಯ ಅಧ್ಯಾತ್ಮಿಕ ಶಕ್ತಿ ಸಿನಿಮಾ ಪ್ರಯಾಣದಾದ್ಯಂತ ಇರಲಿ" ಎಂದು ಅಕ್ಷಯ್ ಕುಮಾರ್ ಟ್ವೀಟ್ ಮಾಡಿದ್ದಾರೆ.

ಇದೇ ವೇಳೆ ಸಿನಿಮಾದ ಪೋಸ್ಟರ್ ನ್ನೂ ಅಕ್ಷಯ್ ಕುಮಾರ್ ಟ್ವೀಟ್ ನಲ್ಲಿ ಹಂಚಿಕೊಂಡಿದ್ದಾರೆ. ಸಿನಿಮಾ ಪ್ರೊಡಕ್ಷನ್ ನ ಮೂಲಗಳ ಪ್ರಕಾರ ಉಜ್ಜೈನ್ ನಲ್ಲಿ ಸಿನಿಮಾ ಶೂಟಿಂಗ್ ನಡೆಯುತ್ತಿದೆ. ಸೀಕ್ವೆಲ್ ಸಿನಿಮಾದಲ್ಲಿ ಪಂಕಜ್ ತ್ರಿಪಾಠಿ, ಯಾಮಿ ಗೌತಮ್ ನಟಿಸುತ್ತಿದ್ದಾರೆ.

ಅಮಲೇಂದು ಚೌದರಿ ಸಿನಿಮೆಟೋಗ್ರಾಫರ್ ಆಗಿ ಕಾರ್ಯನಿರ್ವಹಣೆ ಮಾಡುತ್ತಿದ್ದರೆ, ಚಂದ್ರಪ್ರಕಾಶ್ ದ್ವಿವೇದಿ ಕ್ರಿಯೇಟೀವ್ ಪ್ರಡ್ಯೂಸರ್ ಆಗಿದ್ದಾರೆ. ಓಮೈ ಗಾಡ್-2 ನ್ನು ಕೇಪ್ ಆಫ್ ಗುಡ್ ಫಿಲ್ಮ್ಸ್ ನ ವಿಪು ಡಿ ಶಾ, ರಾಜೇಶ್ ಬಾಹ್ಲ್, ಅಶ್ವಿನ್ ವರ್ದೆ ನಿರ್ಮಾಣ ಮಾಡುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.