'ಮನಿ ಹೈಸ್ಟ್' ನೆಟ್ ಫ್ಲಿಕ್ಸ್ ಥ್ರಿಲ್ಲರ್ ಧಾರಾವಾಹಿ ಸರಣಿ ಕಡೆಯ ಭಾಗದ ಪೋಸ್ಟರ್ ಬಿಡುಗಡೆ: ಪ್ರಸಾರ ದಿನಾಂಕ ನಿಗದಿ
ಸ್ಪೇನ್ ರಾಷ್ಟ್ರೀಯ ಬ್ಯಾಂಕಿಂದ ಸಾವಿರಾರು ಕೋಟಿ ರೂ. ಕಳವು ಮಾಡುವ ಮಹಾನ್ ಚಾಣಾಕ್ಷ ಮಿಸ್ಟರ್ ಪ್ರೊಫೆಸರ್ ಮತ್ತು ಆತನ ತಂಡದ ಕೃತ್ಯಕ್ಕೆ ತೆರೆ ಬೀಳುವ ದಿನಾಂಕ ನಿಗದಿಯಾಗಿದೆ.

ಕ್ಯಾಲಿಫೋರ್ನಿಯ: ಸ್ಪ್ಯಾನಿಷ್/ ಇಂಗ್ಲಿಷ್ ದ್ವಿಭಾಷಾ ಧಾರವಾಹಿ ಸರಣಿ ಮನಿ ಹೈಸ್ಟ್ ನ (ಸ್ಪ್ಯಾನಿಷ್ ಹೆಸರು- ಲಾ ಕಾಸ ಡಿ ಪಪೆಲ್) ಕಡೆಯ ಭಾಗದ ಪೋಸ್ಟರ್ ಅನ್ನು ನೆಟ್ ಫ್ಲಿಕ್ಸ್ ಬಿಡುಗಡೆಗೊಳಿಸಿದೆ. ಇದರೊಂದಿಗೆ ರಾಷ್ಟ್ರೀಯ ಬ್ಯಾಂಕಿಂದ ಸಾವಿರಾರು ಕೋಟಿ ರೂ. ಕಳವು ಮಾಡುವ ಮಹಾನ್ ಚಾಣಾಕ್ಷ ಮಿಸ್ಟರ್ ಪ್ರೊಫೆಸರ್ ಮತ್ತು ಆತನ ತಂಡದ ಕೃತ್ಯಕ್ಕೆ ತೆರೆ ಬೀಳಲಿದೆ.
ಬ್ಯಾಂಕೊಳಗೆ ಸಿಲುಕಿಕೊಂಡಿರುವ ಪ್ರೊಫೆಸರ್ ತಂಡ ತನ್ನ ಕೃತ್ಯದಲ್ಲಿ ಸಫಲಗೊಳ್ಳುವುದೋ ಇಲ್ಲವೋ ಎನ್ನುವುದನ್ನು ತಿಳಿದುಕೊಳ್ಲಲು ಇಡೀ ಜಗತ್ತೇ ಕಾತರದಿಂದ ಕಾದಿದೆ. ಈ ಧಾರಾವಾಹಿ ಸರಣಿಯ ಕಡೆಯ ಭಾಗದ 5 ಸಂಚಿಕೆಗಳು ಈ ಹಿಂದೆ ತೆರೆಕಂಡಿದ್ದವು. ಇದೀಗ ಕಡೆಯ ಭಾಗದ ಇನ್ನುಳಿದ ಕಡೆಯ 5 ಸಂಚಿಕೆಗಳು ಡಿಸೆಂಬರ್ 3ರಂದು ನೆಟ್ ಫ್ಲಿಕ್ಸ್ ನಲ್ಲಿ ತೆರೆಕಾಣಲಿದೆ.
2017ರಲ್ಲಿ ಸ್ಪ್ಯಾನಿಷ್ ಭಾಷೆಯ ಈ ಧಾರಾವಾಹಿ ಸರಣಿ ಸ್ಪೇನ್ ನಲ್ಲಿ ತೆರೆಕಂಡಾಗ ಅದಕ್ಕೆ ಅಷ್ಟಾಗಿ ಯಶಸ್ಸು ಸಿಕ್ಕಿರಲಿಲ್ಲ. ನೆಟ್ ಫ್ಲಿಕ್ಸ್ ಈ ಧಾರಾವಾಹಿಯನ್ನು ಕೊಂಡು ಕೊಂಡುಕೊಂಡು ಇಂಗ್ಲೀಷಿಗೆ ಡಬ್ ಮಾಡಿ ತನ್ನ ಮಾಧ್ಯಮದಲ್ಲಿ ಪ್ರಸಾರ ಮಾಡಿದ್ದೇ ತಡ ಜಗತ್ತಿನಾದ್ಯಂತ ಏಕಾಏಕಿ ಹಿಟ್ ಆಯಿತು. ಜನರು ಹುಚ್ಚುಹಿಡಿದಂತೆ ಈ ಧಾರಾವಾಹಿ ಸರಣಿಯನ್ನು ವೀಕ್ಷಿಸಿದ್ದರು.
Related Article
ಗರುಡ ಗಮನ ವೃಷಭ ವಾಹನ ಸಿನಿಮಾಗೆ ಸಂಗೀತ ನೀಡುವುದು ಸವಾಲಾಗಿತ್ತು: ಮಿದುನ್ ಮುಕುಂದನ್
ತನಗಿಂತ ಕಿರಿಯರ ಜೊತೆ ಡೇಟಿಂಗ್ ವಿಚಾರ: ಪ್ರೇಮಕ್ಕೂ ವಯಸ್ಸಿಗೂ ಸಂಬಂಧವಿಲ್ಲ; ಅದು ಸಮಸ್ಯೆಯೇ ಅಲ್ಲ ಎಂದ ನಟಿ ರಶ್ಮಿಕಾ
ಮಕ್ಕಳ ದಿನಾಚರಣೆ: ಅಪ್ಪು ಬಾಲ್ಯ ಸ್ಮರಿಸಿದ ನಟ ರಾಘವೇಂದ್ರ ರಾಜ್‌ಕುಮಾರ್
ಶ್ರೀಮುರುಳಿ ನಟನೆಯ 'ಮದಗಜ' ಸಿನಿಮಾ 1,500 ಸ್ಕ್ರೀನ್ ಗಳಲ್ಲಿ ಪ್ರದರ್ಶನ
ಯೋಗರಾಜ್ ಭಟ್ ನಿರ್ದೇಶನ ಸಿನಿಮಾಗೆ ಟೈಟಲ್ ಫಿಕ್ಸ್: ಪ್ರಮುಖ ಪಾತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್!
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


