ಸಿನಿಮಾ ಸುದ್ದಿ

ನಿರ್ದೇಶನಕ್ಕೆ ಮರಳಿದ ರಾಜ್ ಬಿ ಶೆಟ್ಟಿ; ಮಂಗಳೂರಿನಲ್ಲಿ 30 ದಿನಗಳ ಚಿತ್ರೀಕರಣ ಪೂರ್ಣ!

ಇದೆಲ್ಲದರ ನಡುವೆಯು ರಾಜ್ ಬಿ ಶೆಟ್ಟಿ ಅವರು ಚಿತ್ರ ನಿರ್ದೇಶನದ ಜವಾಬ್ದಾರಿಯನ್ನು ವಹಿಸಿಕೊಂಡಿರುವುದು ಸಾಕಷ್ಟು ಕುತೂಹಲವನ್ನು ಮೂಡಿಸಿದೆ.

ನಿರ್ದೇಶನಕ್ಕೆ ಮರಳಿದ ರಾಜ್ ಬಿ ಶೆಟ್ಟಿ; ಮಂಗಳೂರಿನಲ್ಲಿ 30 ದಿನಗಳ ಚಿತ್ರೀಕರಣ ಪೂರ್ಣ!
ರಾಜ್ ಬಿ ಶೆಟ್ಟಿ
Published On :

ನಟ ಹಾಗೂ ನಿರ್ದೇಶಕ ರಾಜ್ ಬಿ ಶೆಟ್ಟಿ ಸದ್ದಿಲ್ಲದೆಯೇ ತಮ್ಮ ಮುಂದಿನ ಚಿತ್ರದ ನಿರ್ದೇಶನದ ಕೆಲಸವನ್ನು ಆರಂಭಿಸಿದ್ದಾರೆ. ಮೂಲಗಳ ಪ್ರಕಾರ, ಸದ್ಯ ಮಂಗಳೂರಿನಲ್ಲಿ ಈ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ಈಗಾಗಲೇ 30 ದಿನಗಳಿಗೂ ಹೆಚ್ಚು ಕಾಲ ಚಿತ್ರೀಕರಣ ಪೂರ್ಣಗೊಂಡಿದೆ ಎನ್ನಲಾಗಿದೆ.

'ಒಂದು ಮೊಟ್ಟೆಯ ಕಥೆ' (2017) ಸೇರಿ ವ್ಯಾಪಕ ಮೆಚ್ಚುಗೆಗೆ ಪಾತ್ರವಾದ 'ಗರುಡ ಗಮನ ವೃಷಭ ವಾಹನ' (2021) ವರೆಗೆ, ರಾಜ್ ಬಿ ಶೆಟ್ಟಿ ಅವರ ಚಿತ್ರಗಳು ಯಾವಾಗಲೂ ಕುತೂಹಲ ಮೂಡಿಸಿವೆ. 'ಟೋಬಿ' (2023) ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆದಿದ್ದ ಅವರ ನಿರ್ದೇಶನದ ಕೊನೆಯ ಚಿತ್ರ 'ಸ್ವಾತಿ ಮುತ್ತಿನ ಮಳೆ ಹನಿಯೇ' (2023) ಆಗಿತ್ತು. ನಟನೆಯ ನಡುವೆಯೂ, ಹೊಸ ಕಥೆ ಬರೆಯುವುದರತ್ತ ಸಂಪೂರ್ಣ ಗಮನಹರಿಸಲು ಸಮಯ ಮೀಸಲಿಡುತ್ತಿರುವುದಾಗಿ ರಾಜ್ ಈ ಹಿಂದೆ 'ಸಿನಿಮಾ ಎಕ್ಸ್‌ಪ್ರೆಸ್' ಜೊತೆಗಿನ ಸಂಭಾಷಣೆಯಲ್ಲಿ ಆಗಾಗ್ಗೆ ಹೇಳುತ್ತಿದ್ದರು. ಇದೀಗ ತಮ್ಮ ಮಾತಿನಂತೆಯೇ, ಅವರು ಚಿತ್ರಕಥೆಯನ್ನು ಪರಿಪೂರ್ಣಗೊಳಿಸಲು ತಿಂಗಳುಗಳ ಕಾಲ ಶ್ರಮಿಸಿದ್ದಾರೆ. ಇನ್ನೂ ಹೆಸರಿಡದ ಈ ಹೊಸ ಯೋಜನೆಯು ಕರಾವಳಿ ಕರ್ನಾಟಕದ ವಿಶಿಷ್ಟ ಹಿನ್ನೆಲೆಯಲ್ಲಿ ನಡೆಯುವ ಥ್ರಿಲ್ಲರ್ ಕಥೆಯಾಗಿದೆ ಎಂದು ಹೇಳಲಾಗುತ್ತಿದೆ.

ಬ್ಲಾಕ್‌ಬಸ್ಟರ್ ಹಿಟ್ 'ಸು ಫ್ರಮ್ ಸೋ' ಚಿತ್ರವನ್ನು ನಿರ್ಮಿಸಿ, ನಟಿಸಿದ್ದ ಅವರು, 'ಬಂದರ್' ಚಿತ್ರದ ಮೂಲಕ ಜೊತೆ ಹಿಂದಿ ಚಿತ್ರರಂಗಕ್ಕೂ ಕಾಲಿಟ್ಟರು. ಅರ್ಜುನ್ ಜನ್ಯ ನಿರ್ದೇಶನದ '45' ಚಿತ್ರದಲ್ಲಿಯೂ ನಟಿಸಿದರು. ಲ್ಯಾಂಡ್‌ಲಾರ್ಡ್ ಚಿತ್ರದಲ್ಲಿ ಖಳನಾಯಕನ ಪಾತ್ರ ಮತ್ತು ರವಿ ಸಾರಂಗ ನಿರ್ದೇಶನದ ರಕ್ಕಸಪುರದೋಳ್ ಚಿತ್ರದಲ್ಲೂ ನಟಿಸಿದರು. ಇತ್ತೀಚೆಗೆ, ಗುರುದತ್ತ ಗಾಣಿಗ ಅವರ ಕರಾವಳಿ ಚಿತ್ರದಲ್ಲಿ ಕೊನೆಯಬಾರಿಗೆ ಕಾಣಿಸಿಕೊಂಡಿದ್ದರು.

ಇದಲ್ಲದೆ ರಾಜ್ ಬಿ ಶೆಟ್ಟಿ ಅವರು ತಮಿಳು ಚಿತ್ರರಂಗಕ್ಕೂ ಕಾಲಿಡುತ್ತಿದ್ದಾರೆ. ನಿರ್ದೇಶಕ ತ್ಯಾಗರಾಜನ್ ಕುಮಾರರಾಜ ಅವರ 'ಪಾಕೆಟ್ ನಾವೆಲ್' ಚಿತ್ರದಲ್ಲಿ ನಟಿಸಿದ್ದಾರೆ. ಜೊತೆಗೆ ಮತ್ತೊಂದು ತಮಿಳು ಚಿತ್ರ 'ಸೆಯಾನ್' ಸೇರಿದಂತೆ ಇತರ ಕೆಲವು ಯೋಜನೆಗಳಲ್ಲಿ ತೊಡಗಿಕೊಂಡಿದ್ದಾರೆ.

ಇದೆಲ್ಲದರ ನಡುವೆಯು ರಾಜ್ ಬಿ ಶೆಟ್ಟಿ ಅವರು ಚಿತ್ರ ನಿರ್ದೇಶನದ ಜವಾಬ್ದಾರಿಯನ್ನು ವಹಿಸಿಕೊಂಡಿರುವುದು ಸಾಕಷ್ಟು ಕುತೂಹಲವನ್ನು ಮೂಡಿಸಿದೆ. ವರದಿಗಳ ಪ್ರಕಾರ, ಈ ಚಿತ್ರದ ಚಿತ್ರೀಕರಣವು ವೇಗವಾಗಿ ಸಾಗುತ್ತಿದೆ. ಮುಖ್ಯ ಚಿತ್ರೀಕರಣ ಪೂರ್ಣಗೊಂಡ ನಂತರ, ಚಿತ್ರದ ಶೀರ್ಷಿಕೆ, ನಿರ್ಮಾಣದ ವಿವರಗಳು ಹಾಗೂ ಸಂಪೂರ್ಣ ತಾರಾಗಣ ಮತ್ತು ತಾಂತ್ರಿಕ ತಂಡದ ಕುರಿತು ಅಧಿಕೃತ ಘೋಷಣೆಯನ್ನು ಹೊರಡಿಸಲು ಚಿತ್ರತಂಡ ಯೋಜಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.