Mithali Raj

ಮಹಿಳಾ ಐಪಿಎಲ್: ಗಂಗೂಲಿ ನಿರ್ಧಾರಕ್ಕೆ ಮಿಥಾಲಿರಾಜ್ ಸೇರಿದಂತೆ ಹಲವು ಆಟಗಾರ್ತಿಯರು ಸ್ವಾಗತ
ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರು ಮಹಿಳಾ ಐಪಿಎಲ್ ಆಯೋಜನೆ ಕುರಿತು ಹೇಳಿಕೆ ನೀಡಿದ ಬೆನ್ನಲ್ಲೇ ಬಿಸಿಸಿಐ ನಿರ್ಧಾರಕ್ಕೆ ಭಾರತದ ಮಹಿಳಾ ಕ್ರಿಕೆಟ್ ಆಟಗಾರ್ತಿಯರು ಬೆಂಬಲ ವ್ಯಕ್ತಪಡಿಸಿದ್ದಾರೆ.

2021ರಲ್ಲಾದರೂ ಮಹಿಳಾ ಐಪಿಎಲ್ ಆಯೋಜಿಸಿ: ಬಿಸಿಸಿಐಗೆ ಮಿಥಾಲಿ ರಾಜ್ ಆಗ್ರಹ
ಜಗತ್ತಿನಲ್ಲೇ ಕೊರೋನಾ ವೈರಸ್ ಭೀತಿ ಆವರಿಸಿರುವ ಈ ಗಳಿಗೆಯಲ್ಲಿ ಬಿಸಿಸಿಐ ಇಂಡಿಯನ್ ಪ್ರೀಮಿಯರ್ ಲೀಗ್ ನ 13ನೇ ಆವೃತ್ತಿಯ ಆಯೋಜನೆಗೆ ಇನ್ನಿಲ್ಲದ ಕರಸತ್ತು ಮಾಡುತ್ತಿದೆ.

ಟಿ20 ವಿಶ್ವಕಪ್: ಮಹಿಳಾ ದಿನದಂದೆ 'ಭಾರತದ ತಾಕತ್ತು ತೋರಿಸಿ' ಸೀರೆಯುಟ್ಟು ತಂಡಕ್ಕೆ ಜೋಶ್ ತುಂಬಿದ ಮಿಥಾಲಿ ರಾಜ್, ವಿಡಿಯೋ!
ಟೀಂ ಇಂಡಿಯಾ ಯಶಸ್ವಿ ಮಹಿಳಾ ಆಟಗಾರ್ತಿ ಮಿಥಾಲಿ ರಾಜ್ ಅವರು ಸೀರೆಯುಟ್ಟು ಬ್ಯಾಟ್ ಬೀಸುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಚೊಚ್ಚಲ ಫೈನಲ್ ತಲುಪಿರುವ ವನಿತೆಯರಿಗೆ ಕೊಹ್ಲಿ, ಮಿಥಾಲಿ ಸೇರಿದಂತೆ ಕ್ರಿಕೆಟ್ ದಿಗ್ಗಜರಿಂದ ಅಭಿನಂದನೆಗಳು
ಇಲ್ಲಿನ ಸಿಡ್ನಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಭಾರತ ಹಾಗೂ ಇಂಗ್ಲೆಂಡ್ ವನಿತೆಯರ ನಡುವಿನ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಸೆಮಿಫೈನಲ್ ಹಣಾಹಣಿ ಮಳೆಯಿಂದಾಗಿ ಒಂದೂ ಎಸೆತ ಕಾಣದೆ ರದ್ದಾಯಿತು. ಆ ಮೂಲಕ ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಭಾರತ ಚುಟುಕು ವಿಶ್ವಕಪ್ ಚೊಚ್ಚಲ ಫೈನಲ್ ಪ್ರವೇಶ ಮಾಡಿತು.

ಮಹಿಳಾ ತಂಡದ ವಾರ್ಷಿಕ ಆಟಗಾರರ ಒಪ್ಪಂದ ಪಟ್ಟಿ ಬಿಡುಗಡೆ ಮಾಡಿದ ಬಿಸಿಸಿಐ: ಬಿ ಗ್ರೇಡ್ ಗಿಳಿದ ಮಿಥಾಲಿ ರಾಜ್
ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಮಹಿಳಾ ತಂಡದ ವಾರ್ಷಿಕ ಆಟಗಾರರ ಒಪ್ಪಂದ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಅದರಲ್ಲಿ ತಂಡದ ನಾಯಕಿ ಹಾಗೂ ಹಿರಿಯ ಆಟಗಾರ್ತಿ ಮಿಥಾಲಿ ರಾಜ್ ಎ ಗ್ರೇಡ್ ನಿಂದ ಬಿ ಗ್ರೇಡ್ ಗೆ ಇಳಿದಿದ್ದಾರೆ. ರಾಧಾ ಯಾದವ್ ಮತ್ತು ತನಿಯಾ ಭಾಟಿಯಾ ಅವರನ್ನು ಬಿ ಗ್ರೇಡ್ ಗೆ ಹೆಚ್ಚಿಸಲಾಗಿದೆ.

ಭಾರತ ಮಹಿಳಾ ಕ್ರಿಕೆಟ್ ದಂತಕಥೆ 'ಮಿಥಾಲಿ ರಾಜ್' ಆಗಿ ತಾಪ್ಸಿ!
ಭಾರತ ಮಹಿಳಾ ಕ್ರಿಕೆಟ್ ದಂತಕಥೆ 'ಮಿಥಾಲಿ ರಾಜ್' ಅವರ ಜೀವನಾಧಾರಿತ ಚಿತ್ರದಲ್ಲಿ ಬಾಲಿವುಡ್ ನ ಖ್ಯಾತ ನಟಿ ತಾಪ್ಸಿ ಪನ್ನು ಮಿಥಾಲಿಯಾಗಿ ಕಾಣಿಸಿಕೊಳ್ಳಲ್ಲಿದ್ದಾರೆ.

ಮಹಿಳಾ ಕ್ರಿಕೆಟ್: ಮ್ಯಾಜಿಕ್ ಮಾಡಿದ ಪೂನಮ್ -ಮಿಥಾಲಿ ಜೋಡಿ,ದ. ಆಫ್ರಿಕಾ ವಿರುದ್ಧ ಭಾರತಕ್ಕೆ ಸರಣಿ ಗೆಲುವು
ಸಂಘಟಿತ ಹೋರಾಟ ನಡೆಸಿದ ಭಾರತ ಮಹಿಳೆಯರ ಕ್ರಿಕೆಟ್ ತಂಡ ಎರಡನೇ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಐದು ವಿಕೆಟ್‌ಗಳ ಜಯ ಸಾಧಿಸಿತು. ಇದರೊಂದಿಗೆ ಇನ್ನೂ ಒಂದು ಪಂದ್ಯ ಬಾಕಿ ಇರುವಾಗಲೇ ಮಿಥಾಲಿ ರಾಜ್ ಬಳಗ ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-0 ಅಂತರದಲ್ಲಿ ವಶಪಡಿಸಿಕೊಂಡಿತು.

ಮಹಿಳಾ ಕ್ರಿಕೆಟ್: ಪೂನಿಯಾ ಭರ್ಜರಿ ಬ್ಯಾಟಿಂಗ್, ದ.ಆಫ್ರಿಕಾ ವಿರುದ್ಧ ಭಾರತಕ್ಕೆ 8 ವಿಕೆಟ್ ಜಯ
ಭರವಸೆಯ ಬೌಲರ್ ಜೂಲನ್ ಗೋಸ್ವಾಮಿ (33ಕ್ಕೆ 3) ಹಾಗೂ ಪ್ರಿಯಾ ಪೂನಿಯಾ (ಅಜೇಯ 75) ಅವರ ಭರ್ಜರಿ ಪ್ರದರ್ಶನದ ಬಲದಿಂದ ಭಾರತ ಮಹಿಳಾ ತಂಡ ಮೊದಲ ಏಕದಿನ ಕ್ರಿಕೆಟ್ ತಂಡದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು 8 ವಿಕೆಟ್ ಗಳಿಂದ ಮಣಿಸಿತು.

ವಿಂಡೀಸ್ ಪ್ರವಾಸ: ಮಿಥಾಲಿ ಹಾಗೂ ಹರ್ಮನ್ ಪ್ರೀತ್ ಗೆ ಪಟ್ಟ
ಅನುಭವಿ ಬ್ಯಾಟ್ಸ್ ಮನ್ ಮಿಥಾಲಿ ರಾಜ್ ಹಾಗೂ ಹರ್ಮನ್ ಪ್ರೀತ್ ಕೌರ್ ನವೆಂಬರ್ ನಲ್ಲಿ ನಡೆಯಲಿರುವ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಭಾರತ ಏಕದಿನ ಹಾಗೂ ಟಿ-20 ತಂಡವನ್ನು ಮುನ್ನಡೆಸಲಿದ್ದಾರೆ.

