ಕ್ರಿಕೆಟ್

ಟಿ20 ವಿಶ್ವಕಪ್: ಮಹಿಳಾ ದಿನದಂದೆ 'ಭಾರತದ ತಾಕತ್ತು ತೋರಿಸಿ' ಸೀರೆಯುಟ್ಟು ತಂಡಕ್ಕೆ ಜೋಶ್ ತುಂಬಿದ ಮಿಥಾಲಿ ರಾಜ್, ವಿಡಿಯೋ!

ಟೀಂ ಇಂಡಿಯಾ ಯಶಸ್ವಿ ಮಹಿಳಾ ಆಟಗಾರ್ತಿ ಮಿಥಾಲಿ ರಾಜ್ ಅವರು ಸೀರೆಯುಟ್ಟು ಬ್ಯಾಟ್ ಬೀಸುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಟಿ20 ವಿಶ್ವಕಪ್: ಮಹಿಳಾ ದಿನದಂದೆ 'ಭಾರತದ ತಾಕತ್ತು ತೋರಿಸಿ' ಸೀರೆಯುಟ್ಟು ತಂಡಕ್ಕೆ ಜೋಶ್ ತುಂಬಿದ ಮಿಥಾಲಿ ರಾಜ್, ವಿಡಿಯೋ!
ಟೀಂ ಇಂಡಿಯಾ-ಮಿಥಾಲಿ ರಾಜ್
Published On :

ನವದೆಹಲಿ: ಟೀಂ ಇಂಡಿಯಾ ಯಶಸ್ವಿ ಮಹಿಳಾ ಆಟಗಾರ್ತಿ ಮಿಥಾಲಿ ರಾಜ್ ಅವರು ಸೀರೆಯುಟ್ಟು ಬ್ಯಾಟ್ ಬೀಸುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಭಾನುವಾರ ಮಹಿಳಾ ದಿನದ ಜೊತೆಗೆ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಸೆಣೆಸಲಿದ್ದು ಈ ಹಿನ್ನೆಲೆಯಲ್ಲಿ ಸ್ಫೂರ್ತಿಯ ಮಾತುಗಳನ್ನಾಡಿದ್ದಾರೆ.

Story image

ಮಿಥಾಲಿ ರಾಜ್ ತಮ್ಮ ಇನ್ ಸ್ಟಾಗ್ರಾಂ ನಲ್ಲಿ ಈ ವಿಡಿಯೋ ಹಂಚಿಕೊಂಡಿದ್ದು ಪ್ರತಿ ಸೀರೆ ನಿಮಗಿಂತ ಹೆಚ್ಚಿನದನ್ನು ಹೇಳುತ್ತದೆ. ಇದು ನಿಮ್ಮನ್ನು ಸದೃಢವಾಗಿರಲು ಎಂದಿಗೂ ಕೇಳುವುದಿಲ್ಲ. ಮಹಿಳಾ ದಿನ ಒಂದು ಅಮೂಲ್ಯವಾಗಿದ್ದರಿಂದ ಹೊಸ ಪ್ರಕಾರ ಬದುಕಲು ಪ್ರಾರಂಭಿಸುತ್ತೇನೆ ಎಂದು ಬರೆದಿದ್ದಾರೆ. 

ಮಿಥಾಲಿ ರಾಜ್ ಅವರ ಈ ವಿಡಿಯೋಗೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದು ಮಿಥಾಲಿಯನ್ನು ಶ್ಲಾಘಿಸುತ್ತಿದ್ದಾರೆ. ಇನ್ನು ಮಿಥಾಲಿ ಸೀರೆಯಲ್ಲಿ ಖುಬ್ಸುರತ್ ಎಂದು ಕರೆಯುತ್ತಿದ್ದರೆ, ಇನ್ನು ಕೆಲವರು ಮಹಿಳೆಯರಿಗೆ ಸ್ಪೂರ್ತಿ ಎಂದು ಹೊಗಳಿದ್ದಾರೆ.

Story image

ಟೀಂ ಇಂಡಿಯಾ ಮಹಿಳಾ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದ ಮಿಥಾಲಿ ರಾಜ್ ಅವರು ಕಳೆದ ವರ್ಷ ಟಿ20 ಕ್ರಿಕೆಟ್ ನಿಂದ ನಿವೃತ್ತರಾಗಿದ್ದರು. 89 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನಾಡಿರುವ ಅವರು 17 ಅರ್ಧ ಶತಕ ಸೇರಿದಂತೆ 2364 ರನ್ ಪೇರಿಸಿದ್ದಾರೆ.

Story image

209 ಏಕದಿನ ಪಂದ್ಯಗಳಲ್ಲಿ 6888 ರನ್ ಗಳಿಸಿದ್ದು 7 ಶತಕ 53 ಅರ್ಧ ಶತಕ ಸಿಡಿಸಿದ್ದಾರೆ. ಇನ್ನು 10 ಟೆಸ್ಟ್ ಪಂದ್ಯ ಆಡಿದ್ದು 663 ರನ್ ಪೇರಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.