'ಉಳಿದದ್ದು ನಿಮ್ಮ ಕೆಲಸ': ರಣಜಿ ಟ್ರೋಫಿಯಲ್ಲಿನ ಅದ್ಭುತ ಪ್ರದರ್ಶನದ ಬಳಿಕ ಫಿಟ್ನೆಸ್ ಕುರಿತ ಟೀಕೆಗಳಿಗೆ ಮೊಹಮ್ಮದ್ ಶಮಿ ತಿರುಗೇಟು
ನ್ಯೂಜಿಲೆಂಡ್ ವಿರುದ್ಧದ ಟಿ20 ಅಂತಾರಾಷ್ಟ್ರೀಯ ಸರಣಿಗಾಗಿ ಆಯ್ಕೆಗಾರರು ಮತ್ತೊಮ್ಮೆ ಶಮಿ ಅವರನ್ನು ಪರಿಗಣಿಸಲಿಲ್ಲ; ಇದೇ ಸರಣಿಗಾಗಿ ಹಿರಿಯ ವೇಗಿ ಭುವನೇಶ್ವರ್ ಕುಮಾರ್ ನಾಲ್ಕು ವರ್ಷಗಳ ನಂತರ ಭಾರತ ತಂಡಕ್ಕೆ ಮರಳಿದ್ದಾರೆ.

ತಮ್ಮ ದೈಹಿಕ ಕ್ಷಮತೆಯ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಿರುವ ಟೀಕಾಕಾರರಿಗೆ ಅನುಭವಿ ವೇಗದ ಬೌಲರ್ ಮೊಹಮ್ಮದ್ ಶಮಿ ತಿರುಗೇಟು ನೀಡಿದ್ದು, ಮೈದಾನದಲ್ಲಿನ ತಮ್ಮ ಪ್ರದರ್ಶನವೇ ಎಲ್ಲದಕ್ಕೂ ಉತ್ತರವಾಗಿದೆ ಎಂದಿದ್ದಾರೆ. ಆಯ್ಕೆಗಾರರು ಪದೇ ಪದೆ ಕಡೆಗಣಿಸುತ್ತಿದ್ದರೂ ಶಮಿ ತಮ್ಮ ಬೌಲಿಂಗ್ ಮೂಲಕವೇ ಉತ್ತರಿಸುವುದನ್ನು ಮುಂದುವರಿಸಿದ್ದಾರೆ; ಅಲ್ಲದೆ, ರಾಷ್ಟ್ರೀಯ ತಂಡಕ್ಕೆ ಮರಳುವ ಬಗ್ಗೆ ಚಿಂತಿಸುವ ಬದಲು ತಮ್ಮ ಆಟವನ್ನು ಆನಂದಿಸುವುದನ್ನು ಮುಂದುವರಿಸುವುದಾಗಿ ಹೇಳಿದ್ದಾರೆ. ಕಲ್ಯಾಣಿಯಲ್ಲಿ ದೆಹಲಿ ವಿರುದ್ಧ ನಡೆದ ರಣಜಿ ಟ್ರೋಫಿ 2026-27ರ ಆರಂಭಿಕ ಪಂದ್ಯದಲ್ಲಿ ಬಂಗಾಳ ತಂಡದ ಪರ ನಾಲ್ಕು ವಿಕೆಟ್ಗಳನ್ನು ಕಬಳಿಸಿದ ನಂತರ 36 ವರ್ಷದ ಶಮಿ ಈ ಹೇಳಿಕೆ ನೀಡಿದ್ದಾರೆ.
'ಜನರು ಬಹುಶಃ ವೀಕ್ಷಿಸುವುದನ್ನು ಮತ್ತು ಟೀಕೆ-ಟಿಪ್ಪಣಿ ಮಾಡುವುದನ್ನು ಹೆಚ್ಚು ಇಷ್ಟಪಡುತ್ತಾರೆ. ರಿದಮ್ ಇಲ್ಲ, ದೈಹಿಕವಾಗಿ ಸದೃಢವಾಗಿ ಕಾಣುತ್ತಿಲ್ಲ ಅಥವಾ ಇನ್ನೇನೋ ಎಂದು ಅವರು ಹೇಳುತ್ತಾರೆ. ಆದರೆ ಅದರಿಂದ ನನಗೇನೂ ತೊಂದರೆಯಿಲ್ಲ. ನಾನು ಮೈದಾನದಲ್ಲಿದ್ದೇನೆ, ಆಡುತ್ತಿದ್ದೇನೆ ಮತ್ತು ಅವಕಾಶ ಸಿಕ್ಕಾಗಲ್ಲೆಲ್ಲ ಆಡುತ್ತಿದ್ದೇನೆ. ಉಳಿದಿದ್ದೆಲ್ಲವೂ ನಿಮ್ಮ ಕೆಲಸ' ಎಂದು ಶಮಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ನ್ಯೂಜಿಲೆಂಡ್ ವಿರುದ್ಧದ ಟಿ20 ಅಂತಾರಾಷ್ಟ್ರೀಯ ಸರಣಿಗಾಗಿ ಆಯ್ಕೆಗಾರರು ಮತ್ತೊಮ್ಮೆ ಶಮಿ ಅವರನ್ನು ಪರಿಗಣಿಸಲಿಲ್ಲ; ಇದೇ ಸರಣಿಗಾಗಿ ಹಿರಿಯ ವೇಗಿ ಭುವನೇಶ್ವರ್ ಕುಮಾರ್ ನಾಲ್ಕು ವರ್ಷಗಳ ನಂತರ ಭಾರತ ತಂಡಕ್ಕೆ ಮರಳಿದ್ದಾರೆ.
ತಮ್ಮನ್ನು ಆಯ್ಕೆ ಮಾಡದಿರುವ ಕುರಿತು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಮಿ, ಮೈದಾನದ ಹೊರಗಿನ ರಾಜಕೀಯದಲ್ಲಿ ತಮಗೆ ಯಾವುದೇ ಆಸಕ್ತಿಯಿಲ್ಲ ಎಂದು ಸ್ಪಷ್ಟಪಡಿಸಿದರು.
'ನಾನು ಅಂತಹ ಟೀಕೆ-ಟಿಪ್ಪಣಿಗಳಿಗೆ ಪ್ರತಿಕ್ರಿಯಿಸುವುದನ್ನು ನಿಲ್ಲಿಸಿದ್ದೇನೆ. ಅದರಿಂದ ನನಗೇನೂ ವ್ಯತ್ಯಾಸವಾಗುವುದಿಲ್ಲ. ಈಗ, ಯಾರು ಏನೇ ಮಾಡಬೇಕೆಂದಿದ್ದರೂ ಮಾಡಲಿ. ನನ್ನ ಕೆಲಸ ಕೇವಲ ಆಡುವುದು ಅಷ್ಟೇ. ಆದರೆ, ತಾವಾಗಿಯೇ ನಿವೃತ್ತಿಯಾಗಲು ನಿರ್ಧರಿಸುವವರೆಗೂ ಆಟವನ್ನು ಮುಂದುವರಿಸಲು ತಮಗೆ ಪ್ರೇರಣೆ ಇದೆ' ಎಂದು ಶಮಿ ತಿಳಿಸಿದರು.
ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಗೆ ಸಹ-ವೇಗದ ಬೌಲರ್ ಭುವನೇಶ್ವರ್ ಕುಮಾರ್ ಅವರ ಆಯ್ಕೆಯನ್ನು ಬೆಂಬಲಿಸಿದ ಶಮಿ, ಈ ಅನುಭವಿ ಆಟಗಾರನ ಮರು-ಆಯ್ಕೆಯು ಇತರರಿಗೂ ಮುನ್ನಡೆಯಲು ಸ್ಫೂರ್ತಿ ನೀಡುತ್ತದೆ ಎಂದು ಹೇಳಿದರು.
'ಒಬ್ಬ ವ್ಯಕ್ತಿಯು ಭರವಸೆಯನ್ನೇ ಆಧಾರವಾಗಿಟ್ಟುಕೊಂಡು ಮುನ್ನಡೆಯಬೇಕು. ಅವರಲ್ಲಿರುವ ಕೌಶಲವನ್ನು ನೋಡಿ. ಅವರು ಯಾರೊಂದಿಗೂ ಮತ್ತು ಯಾವುದರ ಬಗ್ಗೆಯೂ ಮಾತನಾಡುತ್ತಿರಲಿಲ್ಲ. ಹಾಗಂದ ಮಾತ್ರಕ್ಕೆ ಪ್ರತಿಭಾವಂತ ಆಟಗಾರನೊಬ್ಬನನ್ನು ದೀರ್ಘಕಾಲದವರೆಗೆ ತಂಡದಿಂದ ಹೊರಗಿಡಬಾರದು. ದೀರ್ಘಕಾಲದ ನಂತರ ಅವರಿಗೆ ಈ ಅವಕಾಶ ಸಿಕ್ಕಿರುವುದಕ್ಕೆ ನನಗೆ ಸಂತೋಷವಿದೆ. ಐಪಿಎಲ್ನಲ್ಲೂ ಅವರು ಸ್ಥಿರವಾದ ಪ್ರದರ್ಶನ ನೀಡಿದ್ದಾರೆ. ಯಾರಾದರೂ ಕಠಿಣ ಪರಿಶ್ರಮ ಪಡುತ್ತಿದ್ದರೆ, ತಮ್ಮ ಕೌಶಲವನ್ನು ಪ್ರದರ್ಶಿಸುತ್ತಿದ್ದರೆ ಮತ್ತು ಸಾಮರ್ಥ್ಯವನ್ನು ಹೊಂದಿದ್ದರೆ, ಅವರು ಏಕೆ ಆಡಬಾರದು? ಪ್ರದರ್ಶನ ನೀಡಲು ಪ್ರತಿಯೊಬ್ಬರಿಗೂ ಅವಕಾಶ ಸಿಗಬೇಕು' ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



