ಕ್ರಿಕೆಟ್

ಕ್ರಿಕೆಟ್ ನಲ್ಲಿ ಸಿಗದ ಅವಕಾಶ: ಮೊಹಮದ್ ಶಮಿ ಶೀಘ್ರವೇ ರಾಜಕೀಯ ಪ್ರವೇಶ; ಅಮ್ರೋಹಾ ಕ್ಷೇತ್ರದಿಂದ ಸ್ಪರ್ಧೆ ?

ಎರಡು ದಿನಗಳ ಹಿಂದೆ, ಶಮಿ, ದೆಹಲಿಯಲ್ಲಿ ರಾಷ್ಟ್ರೀಯ ಲೋಕದಳದ (RLD) ನಾಯಕ ಜಯಂತ್ ಚೌಧುರಿಯವನ್ನು ಭೇಟಿಯಾಗಿದ್ದರು. ಈ ಮಾಹಿತಿಯನ್ನು ಚೌಧುರಿ, ಖುದ್ದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

ಕ್ರಿಕೆಟ್ ನಲ್ಲಿ ಸಿಗದ ಅವಕಾಶ: ಮೊಹಮದ್ ಶಮಿ ಶೀಘ್ರವೇ ರಾಜಕೀಯ ಪ್ರವೇಶ; ಅಮ್ರೋಹಾ ಕ್ಷೇತ್ರದಿಂದ ಸ್ಪರ್ಧೆ ?
ಜಯಂತ್ ಚೌಧುರಿ ಭೇಟಿಯಾದ ಮೊಹಮದ್ ಶಮಿ
Published On :

ಲಕ್ನೋ: ಉತ್ತಮ ಪ್ರದರ್ಶನದ ನಡುವೆಯೂ ರಾಷ್ಟ್ರೀಯ ಕ್ರಿಕೆಟ್ ತಂಡದಿಂದ ಅವಕಾಶ ವಂಚಿತರಾಗಿರುವ ವೇಗದ ಬೌಲರ್, ಮೊಹಮ್ಮದ್ ಶಮಿ, ರಾಜಕೀಯಕ್ಕೆ ಪ್ರವೇಶಿಸಲಿದ್ದಾರಾ ಎಂಬ ಚರ್ಚೆಗಳು ಹರಿದಾಡುತ್ತಿವೆ.

ಎರಡು ದಿನಗಳ ಹಿಂದೆ, ಶಮಿ, ದೆಹಲಿಯಲ್ಲಿ ರಾಷ್ಟ್ರೀಯ ಲೋಕದಳದ (RLD) ನಾಯಕ ಜಯಂತ್ ಚೌಧುರಿಯವನ್ನು ಭೇಟಿಯಾಗಿದ್ದರು. ಈ ಮಾಹಿತಿಯನ್ನು ಚೌಧುರಿ, ಖುದ್ದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈ ಪೋಸ್ಟ್ ನಾನಾರೀತಿಯ ಚರ್ಚೆಗೆ ಗ್ರಾಸವಾಗಿದೆ.

ಕ್ರಿಕೆಟ್ನಲ್ಲಿ ಮೊಹಮ್ಮದ್ ಶಮಿಗೆ ಹೆಚ್ಚಿನ ಅವಕಾಶ ಸಿಗುತ್ತಿಲ್ಲ. ಇನ್ನೊಂದು ಕಡೆ, ಮುಂದಿನ ವರ್ಷದ ಆದಿಯಲ್ಲಿ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆ ನಡೆಯುತ್ತಿರುವುದರಿಂದ, ಜಯಂತ್ ಚೌಧುರಿ ಮತ್ತು ಮೊಹಮ್ಮದ್ ಶಮಿ ಭೇಟಿ ಕುತೂಹಲಕ್ಕೆ ಕಾರಣವಾಗಿದೆ. ರಾಷ್ಟ್ರೀಯ ಲೋಕದಳವು, NDA ಮೈತ್ರಿಕೂಟದ ಭಾಗವಾಗಿದೆ ಮತ್ತು ಇದರ ನಾಯಕ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡವರು.

2027ರಲ್ಲಿ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ - RLD ಮೈತ್ರಿ ಮಾಡಿಕೊಂಡು ಸ್ಪರ್ಧಿಸುತ್ತಿರುವುದು ಬಹುತೇಕ ಖಚಿತ. ಮೊಹಮ್ಮದ್ ಶಮಿ ಅವರು ಉತ್ತರ ಪ್ರದೇಶ ಮೂಲದವರು. ಹಾಗಾಗಿ, ಅವರು ಹುಟ್ಟಿದ ಜಿಲ್ಲೆಯಿಂದಲೇ, ಅವರು RLD ಅಭ್ಯರ್ಥಿಯಾಗಿ ಸ್ಪರ್ಧಿಸುವ ಸಾಧ್ಯತೆಯ ಬಗ್ಗೆ ಸುದ್ದಿಗಳು ಹರಿದಾಡುತ್ತಿವೆ.

ಈ ಭೇಟಿಯ ಬಗ್ಗೆ ಇಲ್ಲಿಯವರೆಗೆ ಯಾವುದೇ ಅಧಿಕೃತ ಘೋಷಣೆ ಹೊರಬಿದ್ದಿಲ್ಲ. ಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಶಮಿ ಸ್ಪರ್ಧಿಸಬಹುದು ಎಂಬ ಊಹಾಪೋಹಗಳಿವೆ. ಶಮಿ ಅಮ್ರೋಹಾ ಜಿಲ್ಲೆಯವರಾಗಿದ್ದು, ಈ ಕ್ಷೇತ್ರದಿಂದ ಅವರನ್ನು ಕಣಕ್ಕಿಳಿಸುವ ಸಾಧ್ಯತೆಯ ಬಗ್ಗೆ ರಾಜಕೀಯ ವಲಯಗಳಲ್ಲಿ ಚರ್ಚೆಗಳು ಹುಟ್ಟಿಕೊಂಡಿವೆ.

ಅಮ್ರೋಹಾ ವಿಧಾನಸಭಾ ಕ್ಷೇತ್ರವು, ಸಮಾಜವಾದಿ ಪಾರ್ಟಿಯ ಭದ್ರಕೋಟೆಯಾಗಿದ್ದು, ಇಲ್ಲಿಂದ ಪಕ್ಷದ ಅಭ್ಯರ್ಥಿ ಮೆಹಬೂಬ ಆಲಿ, 2002ರಿಂದ ಸತತವಾಗಿ ಐದು ಬಾರಿ ಗೆದ್ದಿದ್ದಾರೆ. ಅಲ್ಪಸಂಖ್ಯಾತರ ವೋಟ್ ಬ್ಯಾಂಕ್ ಜಾಸ್ತಿ ಇರುವ ಈ ಕ್ಷೇತ್ರದಲ್ಲಿ, ಈ ಬಾರಿ ಬಿಜೆಪಿ - RLD ಅಭ್ಯರ್ಥಿಯಾಗಿ ಮೊಹಮ್ಮದ್ ಶಮಿ ಆಯ್ಕೆಯಾದರೆ, ಅಚ್ಚರಿಯಿಲ್ಲ ಎಂದು ಹೇಳಲಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.