Migrant workers

ವಲಸಿಗ ಕಾರ್ಮಿಕರಿಗೆ ವಿಶೇಷ ರೈಲು, ಆಹಾರ, ಆಶ್ರಯ ಕಲ್ಪಿಸಿ: ರಾಜ್ಯಗಳಿಗೆ ಕೇಂದ್ರ ಗೃಹ ಸಚಿವಾಲಯದ ಸೂಚನೆ
ಕೋವಿಡ್-19 ಲಾಕ್ ಡೌನ್ ಹಿನ್ನೆಲೆಯಲ್ಲಿ ವಲಸಿಗ ಕಾರ್ಮಿಕರಿಗೆ ವಿಶೇಷ ರೈಲು, ಆಹಾರ, ಆಶ್ರಯ ಕಲ್ಪಿಸಬೇಕೆಂದು ಕೇಂದ್ರ ಗೃಹ ಸಚಿವಾಲಯ ರಾಜ್ಯಗಳಿಗೆ ಸೂಚನೆ ನೀಡಿದೆ.

ಬೆಳ್ಳಂಬೆಳಗ್ಗೆ ಜವರಾಯನ ಅಟ್ಟಹಾಸ: ಟ್ರಕ್ ಗಳ ಮುಖಾಮುಖಿ, 23 ವಲಸೆ ಕಾರ್ಮಿಕರ ದಾರುಣ ಸಾವು
ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ವಲಸೆ ಕಾರ್ಮಿಕರ ದುರಂತ ಇನ್ನೂ ನಿಂತಿಲ್ಲ, ಎರಡು ಟ್ರಕ್ ಗಳು ಮುಖಾ ಮುಖಿ ಡಿಕ್ಕಿಯಾದ ಹಿನ್ನೆಲೆಯಲ್ಲಿ 23 ವಲಸೆ ಕಾರ್ಮಿಕರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಔರೈಯಾ ಬಳಿ ನಡೆದಿದೆ.

ಕಾಲ್ನಡಿಗೆ ಮೂಲಕ ಹೋಗುವ ವಲಸೆ ಕಾರ್ಮಿಕರ ಆಹಾರ, ಆಶ್ರಯ ಬಗ್ಗೆ ಸರ್ಕಾರಗಳೇ ತೀರ್ಮಾನಿಸಲಿ: ಸುಪ್ರೀಂ ಕೋರ್ಟ್
ಊರಿಗೆ ಹೊರಟ ವಲಸೆ ಕಾರ್ಮಿಕರಿಗೆ ಆಹಾರ ಮತ್ತು ಕುಡಿಯುವ ನೀರಿನ ವ್ಯವಸ್ಥೆಗೆ ಸರ್ಕಾರಕ್ಕೆ ಆದೇಶ ನೀಡಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ನಿರಾಕರಿಸಿದ ಸುಪ್ರೀಂ ಕೋರ್ಟ್, ವಲಸೆ ಕಾರ್ಮಿಕರಲ್ಲಿ ಯಾರು ನಡೆದುಕೊಂಡು ಹೋಗುತ್ತಾರೆ, ಯಾರು ನಡೆದುಕೊಂಡು ಹೋಗುವುದಿಲ್ಲ ಎಂದು ನಿಗಾವಹಿಸಲು ನ್ಯಾಯಾಲಯಕ್ಕೆ ಸಾಧ್ಯವಿಲ್ಲ ಎಂದು ಹೇಳಿದೆ.

ಉತ್ತರ ಪ್ರದೇಶ ಮೂಲದ ವಲಸೆ ಕಾರ್ಮಿಕರು ಅಪಘಾತದಲ್ಲಿ ಸಾವು: ಸರ್ಕಾರದಿಂದ ತಲಾ 2 ಲಕ್ಷ ರೂ. ಪರಿಹಾರ
ಮಧ್ಯ ಪ್ರದೇಶದ ಗುನಾ ಎಂಬಲ್ಲಿ ಕಳೆದ ರಾತ್ರಿ ರಸ್ತೆ ಅಪಘಾತದಲ್ಲಿ ಮೃತಪಟ್ಟ ವಲಸೆ ಕಾರ್ಮಿಕರ ಕುಟುಂಬಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ತಲಾ 2 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಗಂಭೀರ ಗಾಯಗೊಂಡವರಿಗೆ ತಲಾ 50 ಸಾವಿರ ರೂಪಾಯಿ ಪರಿಹಾರ ಪ್ರಕಟಿಸಿದ್ದಾರೆ.

ಎರಡು ಪ್ರತ್ಯೇಕ ರಸ್ತೆ ಅಪಘಾತ: 14 ಮಂದಿ ವಲಸೆ ಕಾರ್ಮಿಕರು ಸಾವು
ವಲಸೆ ಕಾರ್ಮಿಕರು ಮಾರ್ಗ ಮಧ್ಯೆ ತಮ್ಮೂರಿಗೆ ಹೋಗುತ್ತಿರುವಾಗ ಸಾಯುವ ಪ್ರಕರಣ ಮುಂದುವರಿದಿದೆ. ಕಳೆದ ತಡರಾತ್ರಿ ಮುಜಾಫರ್ ನಗರ-ಶಹರಾನ್ ಪುರ ಹೆದ್ದಾರಿಯಲ್ಲಿ 6 ಮಂದಿ ವಲಸೆ ಕಾರ್ಮಿಕರು ನಡೆದುಕೊಂಡು ಹೋಗುತ್ತಿದ್ದಾಗ ವೇಗವಾಗಿ ಬರುತ್ತಿದ್ದ ಬಸ್ ಹರಿದು ಮೃತಪಟ್ಟಿದ್ದಾರೆ.

ಕಲಬುರಗಿ: ಬಸ್ ವ್ಯವಸ್ಥೆ ಮಾಡಿ ಅತಂತ್ರ ವಲಸಿಗರಿಗೆ ನೆರವಾದ ಸಂಸದ ಉಮೇಶ್ ಜಾಧವ್
ಸೋಮವಾರ ಮುಂಬೈನ ಥಾಣೆಯಿಂದ ಕಲಬುರಗಿಗೆ ಹೊರಟ "ಶ್ರಮಿಕ್" ವಿಶೇಷ ರೈಲು ಭರ್ತಿಯಾಗಿದ್ದರಿಂದ ಇನ್ನೂ ಒಂದು ಸಾವಿರಕ್ಕೂ ಹೆಚ್ಚು ವಲಸಿಗರು ಅತಂತ್ರರಾಗಿದ್ದರು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕಲಬುರಗಿ ಲೋಕಸಭಾ ಸದಸ್ಯ ಡಾ.ಉಮೇಶ್ ಜಾಧವ್ ಅವರು ಬಸ್ಸು ಗಳ ವ್ಯವಸ್ಥೆ ಮಾಡಿ,ಈ ವಲಸಿಗರನ್ನು ಅವರವರ ಊರು ಸೇರಿಸಿ ಮಾನವೀಯತೆ ಮೆರೆದಿದ್ದಾರೆ.

ಶ್ರಮಿಕ್ ಎಕ್ಸ್ ಪ್ರೆಸ್ ಮೂಲಕ ಮುಂಬೈಯಿಂದ ಕಲಬುರಗಿಗೆ 1200 ವಲಸೆ ಕಾರ್ಮಿಕರ ಆಗಮನ
ಲಾಕ್ ಡೌನ್ ನಿಂದಾಗಿ ಮುಂಬೈಯಲ್ಲಿ ಸಂಕಷ್ಟದ ಪರಿಸ್ಥಿತಿಯಲ್ಲಿದ್ದ 1200 ವಲಸೆ ಕಾರ್ಮಿಕರನ್ನು ಹೊತ್ತ ವಿಶೇಷ ಶ್ರಮಿಕ್ ಎಕ್ಸ್ ಪ್ರೆಸ್ ರೈಲೊಂದು ಮಂಗಳವಾರ ಬೆಳಗಿನ ಜಾವ 2 ಗಂಟೆಗೆ ಕಲಬುರಗಿಗೆ ಆಗಮಿಸಿತು.

ಹೊರ ರಾಜ್ಯಗಳಲ್ಲಿರುವ ಕನ್ನಡಿಗರು ತವರಿಗೆ ಮರಳಲು ತಗಲುವ ರೈಲು ವೆಚ್ಚವನ್ನು ಕಾಂಗ್ರೆಸ್ ಭರಿಸಲಿದೆ: ಡಿಕೆಶಿ
ಹೊರ ರಾಜ್ಯಗಳಲ್ಲಿ ಸಿಲುಕಿರುವ ಕನ್ನಡಿಗರು ರಾಜ್ಯಕ್ಕೆ ಬರಲು ರೈಲು ಪ್ರಯಾಣದ ಸಂಪೂರ್ಣ ವೆಚ್ಚವನ್ನು ಕಾಂಗ್ರೆಸ್ ಭರಿಸಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.

ವಲಸೆ ಕಾರ್ಮಿಕರ ವಿಚಾರದಲ್ಲಿ ಮಾನವೀಯತೆಯಿಂದ ವರ್ತಿಸಿ: ಖಂಡ್ರೆ
ಜನ ಸತ್ತ ಮೇಲೆ ಪರಿಹಾರ ಕೊಡುವುದು ಸಾಧನೆಯಲ್ಲ, ಇರುವಾಗಲೇ ಬದುಕು ಕಲ್ಪಿಸುವುದು ಸರ್ಕಾರದ ಕರ್ತವ್ಯ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹೇಳಿದ್ದಾರೆ.

